Advertisement
ಅನುಕ್ರಮ

ಬೆನ್ನತ್ತಿ ಬಂದ ಮಾಯೆ

Share
ಬೆಳಕನು ಕಾಣಲು‌ ಹಂಬಲಿಸಿ
ಕತ್ತಲೆಯ ಜಗದಿಂದ ಹೊರಬಂದೆ
ಬೆನ್ನ ಹಿಂದೆಯೇ ಮತ್ತಾವುದೋ ಕರಿ ಛಾಯೆ
ನನ್ನ ಹಿಂಬಾಲಿಸಲೆಂದೇ ಬಂದಂತಿದೆ
ಎಲ್ಲರೂ ಅಪರಿಚಿತರು ಕಂಡೊಮ್ಮೆ ಬೆರಗಾದೆ
ಅಮ್ಮ , ಅಪ್ಪ‌ ,ಅಜ್ಜ ,ಅಜ್ಜಿ ಎಂದವರು ಪರಿಚಯಿಸಿದರು
ಹೌದು! ಅಪರಿಚಿತರಲ್ಲ ಇವರು ನನ್ನವರು
ಸದಾ ನನ್ನ ಬೆನ್ನತ್ತಿರುವ ಆ ವ್ಯಾಘ್ರ ರೂಪ ಯಾರದು?
ಹೆಜ್ಜೆ ಕಲಿತೆ, ಓಡಲರಿತೆ‌ ಬಿಡಲಿಲ್ಲ‌ ಮಾಯೆ
ಹೋದಲೆಲ್ಲಾ ನನ್ನನ್ನೇ ಕೈ‌ ಬೀಸಿ ಕರೆಯುತಿದೆ
ಭಕ್ತಿಯಿಂದ ಬೇಡಿದೆ, ಕೈಯಲ್ಲಿದ್ದ ಹಣ ಸುರಿದೆ
ಇಲ್ಲ  ಅದು ಹಿಂಬಾಲಿಸಿದುದು ನನ್ನನ್ನೇ!
ಏಕೋ ಹಿಂತಿರುಗಿ ಮಾತನಾಡಬೇಕೆಸಿತು
ಇದು ನಿನ್ನ ಮನೆಯಲ್ಲ‌ ಎಂದು‌ ಮತ್ತೆ ಕರೆಯಿತು
ಇಲ್ಲಿರುವವರು ನನ್ನವರು ನಾ ಬರಲೊಲ್ಲೆ ಎಂದೆ
ಮತ್ತದೇ ದನಿ “ಅಲ್ಲಿದೆ ನಿನ್ನ ಮನೆ”
ಮಾಯೆಯ ಕಣ್ತಪ್ಪಿಸಿ ಓಡಿ ಸೋತು ಹೋದೆ
ನಾನೇ ಮನೆಯ ದಾರಿ ಹುಡುಕಿ ಮಾಯೆಯ ಕರೆದೆ…
ಬರಲಿಲ್ಲ ಅವಳು ಬಲು ಮಾಟಗಾತಿ..
ಅತ್ತು ಕರೆದು ದಾರಿ ತೋರೆಂದೆ ಬಗ್ಗಲಿಲ್ಲ ಅವಳು
ಮತ್ತೋಮ್ಮೆ ಅವಳೇ ಬಂದಳು ನನ್ನದು ಮೊಂಡುತನ
ಬರಲಿಲ್ಲವೆಂದರೂ ಬಿಡಲಿಲ್ಲ ಅವಳು
ಕೈ ಹಿಡಿದು ಆ ಮನೆಯ ದಾರಿ ತೋರಿದಳು
ಮತ್ತೆಂದು ಈ ಮನೆಗೆ ದಾರಿ ಸಿಗದಂತೆ ಮಾಯ ಮಾಡಿದಳು..
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಗುಟ್ಕಾ ಪ್ರಕರಣಗಳಲ್ಲಿ ಎಂಸಿಒಸಿಎ ಜಾರಿ ಪ್ರಶ್ನಿಸಿದ ಬಾಂಬೆ ಹೈಕೋರ್ಟ್ – ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಕೋರಿದ ಕೋರ್ಟ್

ಗುಟ್ಕಾ ಪ್ರಕರಣಗಳಲ್ಲಿ ಎಂಸಿಒಸಿಎ ಜಾರಿಗೆ ಸಂಬಂಧಿಸಿದ ಎಫ್‌ಡಿಎ ಕ್ರಮವನ್ನು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ.…

18 minutes ago

ಗುಟ್ಕಾ ಜಾಲಕ್ಕೆ ಮಹಾರಾಷ್ಟ್ರದ ಭಾರೀ ಹೊಡೆತ..! 700ಕ್ಕೂ ಹೆಚ್ಚು ಎಫ್‌ಐಆರ್‌ ದಾಖಲು – ಕಳಪೆ ಅಡಿಕೆ ಸಾಗಾಟವೂ ಈ ವ್ಯಾಪ್ತಿಯಲ್ಲಿ..!

ಮಹಾರಾಷ್ಟ್ರದಲ್ಲಿ ಗುಟ್ಕಾ ಜಾಲದ ವಿರುದ್ಧ ಎಂಸಿಒಸಿಎ ಅಡಿ ಕಠಿಣ ಕ್ರಮಕ್ಕೆ ರಾಜ್ಯ ಸರ್ಕಾರ…

34 minutes ago

ಮಂಗಳೂರಿನಲ್ಲಿ ಉದ್ಯೋಗ ಮೇಳ – ಜುಲೈ 14ರಂದು ನೇರ ಸಂದರ್ಶನ – ಬ್ಯಾಂಕ್‌ನಿಂದ ಟೆಕ್ನಿಕಲ್‌ ಹುದ್ದೆಗಳವರೆಗೆ ಅವಕಾಶ

ಜುಲೈ 14ರಂದು ಮಂಗಳೂರಿನಲ್ಲಿ ವಿವಿಧ ಖಾಸಗಿ ಸಂಸ್ಥೆಗಳ ನೇಮಕಾತಿಗಾಗಿ ನೇರ ಸಂದರ್ಶನ ನಡೆಯಲಿದೆ.…

55 minutes ago

ಆಘಾತಕಾರಿ ವರದಿ- ಮೇ-ಜೂನ್‌ನಲ್ಲಿ ಭಾರತದ 10 ಮಕ್ಕಳಲ್ಲಿ 7 ಮಂದಿ ಶಾಲೆ ತಪ್ಪಿಸಿದರು..!

ಮೇ-ಜೂನ್ ತಿಂಗಳಲ್ಲಿ ತೀವ್ರ ಬಿಸಿಲಿನ ಕಾರಣದಿಂದ ಭಾರತದ ಸುಮಾರು 70% ಮಕ್ಕಳು ಶಾಲೆ…

7 hours ago

ಹವಾಮಾನ ವರದಿ | 09-07-2026 | ಕರ್ನಾಟಕದಲ್ಲಿ ಮುಂಗಾರು ದುರ್ಬಲ..! ಜುಲೈ 11 ರಿಂದ ಮಳೆ ಮತ್ತಷ್ಟು ಇಳಿಕೆ, ಬಿಸಿಲಿನ ಅವಧಿ ಹೆಚ್ಚಳ ಸಾಧ್ಯ

ರಾಜ್ಯದಲ್ಲಿ ಮುಂಗಾರು ದುರ್ಬಲವಾಗುತ್ತಿದ್ದು, ಜುಲೈ 11ರಿಂದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ…

8 hours ago

ಜುಲೈ ಮಳೆಯಿಂದ ದೇಶಕ್ಕೆ ನೆಮ್ಮದಿ…! ಮಳೆ ಕೊರತೆ 12%ಕ್ಕೆ ಇಳಿಕೆ

ಜುಲೈ ಮೊದಲ ವಾರದ ಉತ್ತಮ ಮಳೆಯಿಂದ ದೇಶದ ಮಳೆ ಕೊರತೆ 12%ಕ್ಕೆ ಇಳಿದಿದೆ.…

9 hours ago