Advertisement
ಸುದ್ದಿಗಳು

ಸರಿಯಾದ ಆಹಾರ ಪದ್ಧತಿಯೇ ರೋಗಮುಕ್ತ ಜೀವನದ ಮೂಲ – ರಾಘವೇಶ್ವರ ಶ್ರೀ

Share

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಆಹಾರವೇ ಪ್ರಮುಖ ಆಧಾರವಾಗಿದೆ. ದೇಹಕ್ಕೆ ಹಿತವಾದ ಆಹಾರ, ಮಿತ ಪ್ರಮಾಣದ ಊಟ ಹಾಗೂ ಸರಿಯಾದ ಸಮಯದಲ್ಲಿ ಆಹಾರ ಸೇವಿಸುವುದೇ ಆರೋಗ್ಯಕರ ಜೀವನದ ಮೂಲ ಸೂತ್ರವಾಗಿದೆ. ಇಷ್ಟವಾದದ್ದನ್ನು ತಿನ್ನುವುದಲ್ಲ, ದೇಹಕ್ಕೆ ಒಳ್ಳೆಯದಾಗಿರುವ ಆಹಾರವನ್ನು ಸೇವಿಸುವುದು ಮುಖ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಆವರಣದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಧರ್ಮಸಭೆಯಲ್ಲಿ ಗುರುವಾರ  ನಡೆದ ‘ಅನ್ನಂ ಬ್ರಹ್ಮ’ ಪ್ರವಚನ ಸರಣಿಯಲ್ಲಿ ಆಶೀರ್ವಚನ ನೀಡಿದ ಅವರು, ಆಯುರ್ವೇದದ ಪ್ರಸಿದ್ಧ ವೈದ್ಯ ವಾಗ್ಭಟ ಹಾಗೂ ಆರೋಗ್ಯದ ಅಧಿದೇವತೆ ಧನ್ವಂತರಿ ಕುರಿತ ಪ್ರಸಂಗವನ್ನು ಉಲ್ಲೇಖಿಸಿದರು.

‘ಯಾರು ರೋಗರಹಿತರು?’ ಎಂಬ ಧನ್ವಂತರಿಯ ಪ್ರಶ್ನೆಗೆ ವಾಗ್ಭಟರು ‘ಹಿತಭುಕ್, ಮಿತಭುಕ್, ಅಶಾಕಭುಕ್’ ಎಂಬ ಮೂರು ಪದಗಳಲ್ಲೇ ಉತ್ತರ ನೀಡಿದ್ದಾರೆ ಎಂದು ವಿವರಿಸಿದ ಶ್ರೀಗಳು, ಹಿತಭುಕ್ ಎಂದರೆ ದೇಹಕ್ಕೆ ಹಿತವಾದ ಆಹಾರವನ್ನು ಸೇವಿಸುವವನು, ಮಿತಭುಕ್ ಎಂದರೆ ಅಗತ್ಯ ಪ್ರಮಾಣದಲ್ಲಿ ಮಾತ್ರ ಆಹಾರ ಸೇವಿಸುವವನು ಹಾಗೂ ಅಶಾಕಭುಕ್ ಎಂದರೆ ಸೊಪ್ಪು-ತರಕಾರಿಗಳನ್ನು ಅತಿಯಾಗಿ ಸೇವಿಸದವನು ಎಂದು ತಿಳಿಸಿದರು.

ಇತ್ತೀಚೆಗೆ ಮುಂಜಾನೆ ಪ್ರಯಾಣದ ವೇಳೆ ಬೆಳಗ್ಗೆ 4 ಗಂಟೆಯಲ್ಲೇ ಹೋಟೆಲ್‌ಗಳ ಮುಂದೆ ಜನರು ಆಹಾರಕ್ಕಾಗಿ ಸೇರುತ್ತಿರುವುದು ಗಮನಕ್ಕೆ ಬಂದಿದೆ. ಸೂರ್ಯೋದಯಕ್ಕೂ ಮುನ್ನ ಆಹಾರ ಸೇವಿಸುವ ಪ್ರವೃತ್ತಿ ವಿಶೇಷವಾಗಿ ನಗರ ಪ್ರದೇಶದ ಯುವಜನರಲ್ಲಿ ಹೆಚ್ಚಾಗುತ್ತಿದೆ. ಇದು ಆರೋಗ್ಯದ ದೃಷ್ಟಿಯಿಂದ ಸರಿಯಾದ ಪದ್ಧತಿಯಲ್ಲ. ಆ ಸಮಯದಲ್ಲಿ ಅಮೃತವನ್ನೇ ಸೇವಿಸಿದರೂ ಅದು ದೇಹಕ್ಕೆ ವಿಷದಂತೆ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಇಂದು ಆಹಾರವನ್ನು ಕ್ಯಾಲೊರಿಗಳ ಆಧಾರದಲ್ಲಿ ಅಳೆಯುವ ಪದ್ಧತಿ ಹೆಚ್ಚಾಗಿದೆ. ಆದರೆ ಸರಿಯಾದ ಸಮಯ ಹಾಗೂ ಕ್ರಮದಲ್ಲಿ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಂಡರೆ, ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬುದನ್ನು ಹೊಟ್ಟೆಯೇ ತಿಳಿಸುತ್ತದೆ ಎಂದರು.

ಆಹಾರವು ಕೇವಲ ಹೊಟ್ಟೆ ತುಂಬಿಸುವ ಸಾಧನವಲ್ಲ. ಅದು ದೇಹ, ಮನಸ್ಸು ಹಾಗೂ ಆರೋಗ್ಯವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ. ಜೀರ್ಣವಾಗದೇ ದೇಹದಲ್ಲಿ ಉಳಿಯುವ ಆಹಾರವನ್ನು ಆಯುರ್ವೇದದಲ್ಲಿ ‘ಆಮ’ ಎಂದು ಕರೆಯಲಾಗುತ್ತದೆ. ಇದೇ ಅನೇಕ ರೋಗಗಳಿಗೆ ಮೂಲ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗಣ್ಯ ವ್ಯಕ್ತಿಗಳನ್ನು ಭೇಟಿಯಾಗುವ ಮೊದಲು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲನೆ ನಡೆಸಲಾಗುತ್ತದೆ. ಅದೇ ರೀತಿ ನಮ್ಮ ದೇಹ ಎಂಬ ಅಮೂಲ್ಯ ವ್ಯಕ್ತಿಗೆ ಆಹಾರ ನೀಡುವ ಮೊದಲು ಏನನ್ನು ತಿನ್ನುತ್ತಿದ್ದೇವೆ, ಹೇಗೆ ತಿನ್ನುತ್ತಿದ್ದೇವೆ ಹಾಗೂ ಯಾವಾಗ ತಿನ್ನುತ್ತಿದ್ದೇವೆ ಎಂಬುದನ್ನು ಪರಿಶೀಲಿಸಿ ನಂತರವೇ ಆಹಾರ ಸೇವಿಸಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ರಾಮಚಂದ್ರ ಭಟ್ ದಂಪತಿ ಶ್ರೀಪರಿವಾರದ ಪರವಾಗಿ ಭಿಕ್ಷಾಸೇವೆ ಸಮರ್ಪಿಸಿದರು. ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವೇ.ಮೂ. ಸುಬ್ರಾಯ್ ಭಟ್ ಅಗ್ನಿಹೋತ್ರಿ, ವೇ.ಮೂ. ಮಂಜುನಾಥ ಶಾಸ್ತ್ರಿ, ಶ್ರೀಚರಣ ವಿಭಾಗದ ಸಂಯೋಜಕ ರಾಘವೇಂದ್ರ ಮಧ್ಯಸ್ಥ, ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ಸುರೇಶ್ ಆಡುಗೋಡಿ, ಮಧು ಜಿ.ಕೆ., ದಿನೇಶ್ ಹೆಗಡೆ, ಗಜಾನನ ಭಟ್, ರಮೇಶ್ ವಿಭೂತಿಮನೆ, ಪ್ರಕಾಶ್ ಹೆಗಡೆ ದಂಪತಿ, ಶಿಕ್ಷಣ ತಜ್ಞ ಡಾ. ಜಿ.ಜಿ. ಹೆಗಡೆ, ಉದ್ಯಮಿ ಶಶಾಂಕ್ ಹೆಗಡೆ ಕವಲಕ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

‘ಅತಿಯಾದ ಸೊಪ್ಪು-ತರಕಾರಿಗಳೂ ಆರೋಗ್ಯಕ್ಕೆ ಹಾನಿಕರ’ : ಮಿತಿ ಮೀರಿದ ಪ್ರಮಾಣದಲ್ಲಿ ಸೊಪ್ಪು ಹಾಗೂ ತರಕಾರಿಗಳನ್ನು ಸೇವಿಸುವುದೂ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೆಚ್ಚಿನ ಪ್ರಮಾಣದ ಸೊಪ್ಪು-ತರಕಾರಿಗಳ ಸೇವನೆಯು ಕಣ್ಣಿನ ಸಮಸ್ಯೆ, ಮೂಳೆಗಳ ದುರ್ಬಲತೆ ಹಾಗೂ ಮಂದಬುದ್ಧಿಗೆ ಕಾರಣವಾಗಬಹುದು ಎಂದು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

Jagadguru Shankaracharya Sri Raghaveshwara Bharathi Mahaswamiji of Sri Ramachandrapura Math said that healthy living begins with proper food habits. Speaking at the “Annam Brahma” discourse during Annabrahma Chaturmasya in Gokarna, he emphasized the Ayurvedic principles of Hitabhuk (eat what is beneficial), Mitabhuk (eat in moderation) and Ashakabhuk (avoid excessive consumption of leafy vegetables). He also cautioned against eating before sunrise and announced that over 300 traditional sattvic dishes would be served during the 60-day Chaturmasya programme.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭಾರತದ ಕೃಷಿ ರಫ್ತಿನಲ್ಲಿ ದೊಡ್ಡ ಬದಲಾವಣೆ – ಎಮ್ಮೆ ಮಾಂಸ ರಫ್ತು 5 ಬಿಲಿಯನ್ ಡಾಲರ್ ಗುರಿಯತ್ತ..!

ಭಾರತದ ಎಮ್ಮೆ ಮಾಂಸ ರಫ್ತು 2025-26ರಲ್ಲಿ 5.1 ಬಿಲಿಯನ್ ಡಾಲರ್ ತಲುಪಿದ್ದು, 2026-27ರಲ್ಲಿ…

3 hours ago

ಹಬ್ಬದ ಬೇಡಿಕೆಯನ್ನೇ ಕೃಷಿ ಅವಕಾಶವನ್ನಾಗಿ ಮಾಡಿದ ಕೇರಳ : 2.52 ಲಕ್ಷ ಟನ್ ತರಕಾರಿ ಉತ್ಪಾದನೆ

ಓಣಂ ಹಬ್ಬದ ಸಂದರ್ಭದ ಹೆಚ್ಚಿದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕೇರಳ ಕೃಷಿ ಇಲಾಖೆ ನಡೆಸಿದ…

10 hours ago

ಹವಾಮಾನ ವರದಿ | 20-08-2026 | ಕರಾವಳಿಗೆ ಇನ್ನೂ ಮಳೆ ವಿರಾಮವಿಲ್ಲ…! ಆ.23–25 ಕ್ಕೆ ಮತ್ತೆ ಮಳೆ ಹೆಚ್ಚಾಗುವ ಸೂಚನೆ

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನವೂ ಅಲ್ಲಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದ್ದು,…

12 hours ago

ಅಡಿಕೆ ತೋಟಗಳು ಹೆಚ್ಚುತ್ತಿವೆ… ಹಾಗಿದ್ದರೆ ಕರ್ನಾಟಕದಲ್ಲಿ ಇಳುವರಿ ಏಕೆ ಕುಸಿಯುತ್ತಿದೆ?

ಕರ್ನಾಟಕದಲ್ಲಿ ಅಡಿಕೆ ಬೆಳೆಯುವ ಪ್ರದೇಶ ಕಳೆದ ಐದು ವರ್ಷಗಳಲ್ಲಿ ಶೇ.32.42ರಷ್ಟು ಹೆಚ್ಚಾದರೂ, ಉತ್ಪಾದನೆ…

13 hours ago

ತಾಳೆ ಎಣ್ಣೆ ಕಾರ್ಖಾನೆಗಳ ತ್ಯಾಜ್ಯವೇ ದೊಡ್ಡ ಶಕ್ತಿಮೂಲ

ಇಂಡೋನೇಷ್ಯಾದ ತಾಳೆ ಎಣ್ಣೆ ಕಾರ್ಖಾನೆಗಳ ತ್ಯಾಜ್ಯದಿಂದ ವರ್ಷಕ್ಕೆ 3.6 ಬಿಲಿಯನ್ ಘನ ಮೀಟರ್…

1 day ago