ಕಲ್ಲಡ್ಕದಲ್ಲಿ ಫ್ಲೈಓವರ್ ನಿರ್ಮಾಣಗೊಂಡು ಸಂಚಾರಕ್ಕೆ ಮುಕ್ತವಾಗಿ ವರ್ಷ ಕಳೆದಿದೆ. ಈಗ ಈ ಪಟ್ಟಣ ಹೇಗಿದೆ..? ಇದೊಂದು ಕುತೂಹಲದ ವಿಷಯ. ಸದ್ದು ಗದ್ದಲವಿಲ್ಲದ ಕಲ್ಲಡ್ಕ ಈಗ ಅಂದಿನಂತಯೇ ಸಹಜವಾಗಿದೆ.
ಮಂಗಳೂರು-ಬೆಂಗಳೂರು ಹೆದ್ದಾರಿಯ ಕಲ್ಲಡ್ಕದಲ್ಲಿ ಸುಮಾರು 2.1 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣಗೊಂಡು ಸಂಚಾರಕ್ಕೆ ತೆರೆದುಕೊಂಡ ಬಳಿಕ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಪೇಟೆಯೊಳಗೆ ಪ್ರವೇಶಿಸುವುದು ಕಡಿಮೆಯಾಗಿದೆ. ವೇಗವಾಗಿ ಸಾಗುವ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಫ್ಲೈಓವರ್ ಬಳಸುತ್ತಿರುವುದರಿಂದ ಪೇಟೆಯೊಳಗಿನ ಸಂಚಾರದ ಒತ್ತಡವೂ ಇಳಿಕೆಯಾಗಿದೆ. ಅಗತ್ಯ ಇದ್ದವರು ಮಾತ್ರವೇ ಪೇಟೆಯೊಳಗೆ ಬಂದು ಹೋಗುತ್ತಾರೆ.
ಕಲ್ಲಡ್ಕ ಫ್ಲೈಓವರ್‌ನಿಂದ ಪೇಟೆಯ ವ್ಯಾಪಾರಕ್ಕೆ ಧಕ್ಕೆಯಾಗಬಹುದು ಎಂಬ ಆತಂಕ ಆರಂಭದಲ್ಲಿ ಇತ್ತು. ಹೀಗಾಗಿ ಇನ್ನು ಮುಂದೆ ಕಲ್ಲಡ್ಕ ಪೇಟೆಯೇ ಹೋಯ್ತು ಎಂದು ಅನೇಕರು ಹೇಳಿದ್ದರು ಕೂಡಾ. ಆದರೆ ಹಾಗೆ ಆಗಿಲ್ಲ. ಅಲ್ಲಿನ ಸಹಕಾರಿ ಬ್ಯಾಂಕ್, ಸಂಸ್ಥೆಗಳು ಸೇರಿದಂತೆ ಶಾಲೆ. , ಮೆಡಿಕಲ್ ಹಾಗೂ ಸ್ಥಳೀಯ ಅಂಗಡಿಗಳ ಕಾರಣದಿಂದ ಕಲ್ಲಡ್ಕ ಪೇಟೆಗೆ ಯಾವುದೇ ತೊಂದರೆ ಆಗಿಲ್ಲ. ಪೇಟೆಯ ಅಂಗಡಿಗಳಿಗೆ ಸ್ಥಳೀಯವಾಗಿ ಬರುವ ಗ್ರಾಹಕರ ಸಂಚಾರ ಮುಂದುವರಿದಿದೆ. ಕಲ್ಲಡ್ಕ ಪೇಟೆಗೆ ಲಾರಿಗಳು ಹಾಗೂ ಘನ ವಾಹನಗಳು ಬಾರದೇ ಇರುವುದರಿಂದ ಕಲ್ಲಡ್ಕ ಪೇಟೆಯಲ್ಲಿ ಯಾವುದೇ ಟ್ರಾಫಿಕ್ ಕಿರಿಕಿರಿಯೂ ಇಲ್ಲ.
ಒಟ್ಟಿನಲ್ಲಿ, ಫ್ಲೈಓವರ್‌ನಿಂದ ಕಲ್ಲಡ್ಕ ಪೇಟೆಯ ಮೂಲಕ ಸಾಗುವ ಭಾರೀ ವಾಹನಗಳ ಸಂಚಾರ ಕಡಿಮೆಯಾಗಿದ್ದು, ಪೇಟೆಯ ಗದ್ದಲ ಮತ್ತು ವಾಹನ ದಟ್ಟಣೆ ಇಳಿಕೆಯಾಗಿರುವುದು ಗಮನಾರ್ಹ ಬದಲಾವಣೆ. ಅದೇ ವೇಳೆ ಸ್ಥಳೀಯ ವ್ಯಾಪಾರ ಚಟುವಟಿಕೆಗಳು ಮುಂದುವರಿದಿರುವುದು ಪಟ್ಟಣದ ಹೊಸ ಸಂಚಾರ ವ್ಯವಸ್ಥೆಯ ಮತ್ತೊಂದು ಪ್ರಮುಖ ಅಂಶವಾಗಿದೆ. ಒಂದು ಸಹಕಾರಿ ವ್ಯವಸ್ಥೆಗಳು, ಶಾಲೆ, ಔಷಧಾಲಯಗಳು ಮತ್ತು ಅಗತ್ಯ ಅಂಗಡಿಗಳು ಒಂದು ಪೇಟೆಯನ್ನು ಹೇಗೆ ಜೀವಂತವಾಗಿಡುತ್ತದೆ ಎನ್ನುವುದಕ್ಕೆ ಕಲ್ಲಡ್ಕ ಸಾಕ್ಷಿಯಾಗಿದೆ.
ಇದನ್ನು ಓದಿ… ಕಳೆದ ವರ್ಷ ಕಲ್ಲಡ್ಕದ ಬಗ್ಗೆ….
ಹಲಸಿನ ಹಣ್ಣಿನಂತೆ ಕಾಣುವ ಚೆಂಪೆಡಕ್ ಹಣ್ಣು ರುಚಿ ಮತ್ತು ಸುವಾಸನೆಯ ಜತೆಗೆ ವಿಟಮಿನ್…
ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ 3:29.69 ಸಮಯದೊಂದಿಗೆ ಚಿನ್ನ…
ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…
ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ…
ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಚಿತ್ರಕೂಟದ…
‘ರೋಸ್ಟೆಡ್ ಅಡಿಕೆ’ಯನ್ನು ಯಾವ ಸುಂಕ ವರ್ಗದಡಿ ಪರಿಗಣಿಸಬೇಕು ಎಂಬ ವಿವಾದಕ್ಕೆ ಮುಂಬೈ CAAR…