ಫ್ಲೈಓವರ್ ಬಳಿಕ ಕಲ್ಲಡ್ಕದಲ್ಲಿ ಏನು ಬದಲಾವಣೆಯಾಗಿದೆ..?

September 29, 2026
11:09 PM
ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ ದಟ್ಟಣೆ ಮತ್ತು ಗದ್ದಲ ಕಡಿಮೆಯಾಗಿದೆ.

ಕಲ್ಲಡ್ಕದಲ್ಲಿ ಫ್ಲೈಓವರ್ ನಿರ್ಮಾಣಗೊಂಡು ಸಂಚಾರಕ್ಕೆ ಮುಕ್ತವಾಗಿ ವರ್ಷ ಕಳೆದಿದೆ. ಈಗ ಈ ಪಟ್ಟಣ ಹೇಗಿದೆ..? ಇದೊಂದು ಕುತೂಹಲದ ವಿಷಯ. ಸದ್ದು ಗದ್ದಲವಿಲ್ಲದ ಕಲ್ಲಡ್ಕ ಈಗ ಅಂದಿನಂತಯೇ ಸಹಜವಾಗಿದೆ.

ಮಂಗಳೂರು-ಬೆಂಗಳೂರು ಹೆದ್ದಾರಿಯ ಕಲ್ಲಡ್ಕದಲ್ಲಿ ಸುಮಾರು 2.1 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣಗೊಂಡು ಸಂಚಾರಕ್ಕೆ ತೆರೆದುಕೊಂಡ ಬಳಿಕ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಪೇಟೆಯೊಳಗೆ ಪ್ರವೇಶಿಸುವುದು ಕಡಿಮೆಯಾಗಿದೆ. ವೇಗವಾಗಿ ಸಾಗುವ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಫ್ಲೈಓವರ್ ಬಳಸುತ್ತಿರುವುದರಿಂದ ಪೇಟೆಯೊಳಗಿನ ಸಂಚಾರದ ಒತ್ತಡವೂ ಇಳಿಕೆಯಾಗಿದೆ. ಅಗತ್ಯ ಇದ್ದವರು ಮಾತ್ರವೇ ಪೇಟೆಯೊಳಗೆ ಬಂದು ಹೋಗುತ್ತಾರೆ.

ಕಲ್ಲಡ್ಕ ಫ್ಲೈಓವರ್‌ನಿಂದ ಪೇಟೆಯ ವ್ಯಾಪಾರಕ್ಕೆ ಧಕ್ಕೆಯಾಗಬಹುದು ಎಂಬ ಆತಂಕ ಆರಂಭದಲ್ಲಿ ಇತ್ತು. ಹೀಗಾಗಿ ಇನ್ನು ಮುಂದೆ ಕಲ್ಲಡ್ಕ ಪೇಟೆಯೇ ಹೋಯ್ತು ಎಂದು ಅನೇಕರು ಹೇಳಿದ್ದರು ಕೂಡಾ. ಆದರೆ  ಹಾಗೆ ಆಗಿಲ್ಲ. ಅಲ್ಲಿನ ಸಹಕಾರಿ ಬ್ಯಾಂಕ್,  ಸಂಸ್ಥೆಗಳು ಸೇರಿದಂತೆ ಶಾಲೆ. ‌, ಮೆಡಿಕಲ್ ಹಾಗೂ ಸ್ಥಳೀಯ ಅಂಗಡಿಗಳ ಕಾರಣದಿಂದ ಕಲ್ಲಡ್ಕ ಪೇಟೆಗೆ ಯಾವುದೇ ತೊಂದರೆ ಆಗಿಲ್ಲ. ಪೇಟೆಯ ಅಂಗಡಿಗಳಿಗೆ ಸ್ಥಳೀಯವಾಗಿ ಬರುವ ಗ್ರಾಹಕರ ಸಂಚಾರ ಮುಂದುವರಿದಿದೆ. ಕಲ್ಲಡ್ಕ ಪೇಟೆಗೆ ಲಾರಿಗಳು ಹಾಗೂ ಘನ ವಾಹನಗಳು ಬಾರದೇ ಇರುವುದರಿಂದ ಕಲ್ಲಡ್ಕ ಪೇಟೆಯಲ್ಲಿ ಯಾವುದೇ ಟ್ರಾಫಿಕ್‌ ಕಿರಿಕಿರಿಯೂ ಇಲ್ಲ.

ಒಟ್ಟಿನಲ್ಲಿ, ಫ್ಲೈಓವರ್‌ನಿಂದ ಕಲ್ಲಡ್ಕ ಪೇಟೆಯ ಮೂಲಕ ಸಾಗುವ ಭಾರೀ ವಾಹನಗಳ ಸಂಚಾರ ಕಡಿಮೆಯಾಗಿದ್ದು, ಪೇಟೆಯ ಗದ್ದಲ ಮತ್ತು ವಾಹನ ದಟ್ಟಣೆ ಇಳಿಕೆಯಾಗಿರುವುದು ಗಮನಾರ್ಹ ಬದಲಾವಣೆ. ಅದೇ ವೇಳೆ ಸ್ಥಳೀಯ ವ್ಯಾಪಾರ ಚಟುವಟಿಕೆಗಳು ಮುಂದುವರಿದಿರುವುದು ಪಟ್ಟಣದ ಹೊಸ ಸಂಚಾರ ವ್ಯವಸ್ಥೆಯ ಮತ್ತೊಂದು ಪ್ರಮುಖ ಅಂಶವಾಗಿದೆ. ಒಂದು ಸಹಕಾರಿ ವ್ಯವಸ್ಥೆಗಳು, ಶಾಲೆ, ಔಷಧಾಲಯಗಳು ಮತ್ತು ಅಗತ್ಯ ಅಂಗಡಿಗಳು ಒಂದು ಪೇಟೆಯನ್ನು ಹೇಗೆ ಜೀವಂತವಾಗಿಡುತ್ತದೆ ಎನ್ನುವುದಕ್ಕೆ ಕಲ್ಲಡ್ಕ ಸಾಕ್ಷಿಯಾಗಿದೆ.

ಇದನ್ನು ಓದಿ…  ಕಳೆದ ವರ್ಷ ಕಲ್ಲಡ್ಕದ ಬಗ್ಗೆ….

ಪ್ಲೈಓವರ್‌ ನಿರ್ಮಾಣದ ಬಳಿಕ ಹೇಗಿದೆ ಕಲ್ಲಡ್ಕ..?

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಲಸಿನಂತೆಯೇ ಕಾಣುವ ಈ ಹಣ್ಣು ನಿಮಗೆ ಗೊತ್ತೇ?
September 29, 2026
10:23 PM
by: ದ ರೂರಲ್ ಮಿರರ್.ಕಾಂ
ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಓಟಕ್ಕೆ ಚಿನ್ನದ ಹೊಳಪು – 4×400 ಮೀ. ರಿಲೇಯಲ್ಲಿ ಭರ್ಜರಿ ಗೆಲುವು
September 29, 2026
9:48 PM
by: ದ ರೂರಲ್ ಮಿರರ್.ಕಾಂ
ಕಾಳುಮೆಣಸು ಮಾರುಕಟ್ಟೆಯಲ್ಲಿ ಏನಾಗುತ್ತಿದೆ?
September 29, 2026
12:08 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 29-09-2026 | ಅ.6 ರವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ
September 29, 2026
11:33 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror