ಬೆಳ್ಳಾರೆ: ಬೆಳ್ಳಾರೆ ಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಸುನ್ನೀ ಸೌಹಾರ್ದ ವೇದಿಕೆಯ ಅಧಿಕೃತ ಚಾಲನೆ ಹಾಗೂ ಘೋಷಣಾ ಸಮಾವೇಶವು ಸೋಮವಾರ ಸಂಜೆ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸೌಹಾರ್ದ ವೇದಿಕೆಯ ಸ್ಥಾಪಕಧ್ಯಕ್ಷ ಹಸೈನಾರ್ ಹಾಜಿ ಸಿ ಎಂ ವಹಿಸಿದ್ದರು. ಸೌಹಾರ್ದ ವೇದಿಕೆಯ ಪದಾಧಿಕಾರಿಗಳ ಹೆಸರನ್ನು ಯೂಸುಫ್ ಮುಸ್ಲಿಯಾರ್ ಘೋಷಣೆ ಮಾಡಿದರು. ಸುನ್ನೀ ಸೌಹಾರ್ದ ಸಮಿತಿ ಸದಸ್ಯರುಗಳಾದ ಶಾಫಿ ಬೆಳ್ಳಾರೆ ಹಾಗೂ ಹಸನ್ ಸಖಾಫಿ ಬೆಳ್ಳಾರೆ ಸೌಹಾರ್ದತೆ ಕುರಿತು ಮುಖ್ಯ ಭಾಷಣ ಮಾಡಿದರು. ಹನೀಫ್ ಬೆಳ್ಳಾರೆ ಪಾಸ್ತಾವಿಕ ಭಾಷಣ ಮಾಡಿದರು.
ಬೆಳ್ಳಾರೆ ಜಮಾಅತಿನ ಅಧ್ಯಕ್ಷ ಕೆ ಎಂ ಮಹಮ್ಮದ್ ಹಾಜಿ ಬೆಳ್ಳಾರೆ , ಜಮಾಅತಿನ ಮಾಜಿ ಅಧ್ಯಕ್ಷ ರುಗಳಾದ ಮೂಸಾ ಹಾಜಿ ಕಲ್ಲಪಣೆ ,ಹಾಜಿ ಮಹಮ್ಮದ್ ಇಂಜಿನಿಯರ್ ಬೆಳ್ಳಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೌಹಾರ್ದ ವೇದಿಕೆ ಯ ಪ್ರಧಾನ ಕಾರ್ಯದರ್ಶಿ ಜಲೀಲ್ ಎ ಆರ್ ಸ್ವಾಗತಿಸಿ , ಸದಸ್ಯ ಕೆ ಎ ಬಶೀರ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಅ.6 ರಂದು ಸುನ್ನೀ ಸೌಹಾರ್ದ ವೇದಿಕೆ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನ ಬೆಳ್ಳಾರೆ ದೇವಿಹೈಟ್ಸ್ ನಲ್ಲಿ ಮಾಡುವುದೆಂದು ಸಂಘಟಕರು ಇದೇ ವೇಳೆ ಪ್ರಕಟನೆಗೆ ತಿಳಿಸಿರುತ್ತಾರೆ.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.