ಬೆಳ್ಳಾರೆ: ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯಲ್ಲಿ ಶಂಸುಲ್ ಉಲಮಾ ಮೌಲೀದ್ ಮಾಸಿಕ ಆಧ್ಯಾತ್ಮಿಕ ಸಂಗಮವು ಮುದರ್ರಿಸ್ ತಾಜುದ್ದೀನ್ ರಹ್ಮಾನಿಯ ಅವರ ನೇತೃತ್ವದಲ್ಲಿ ನಡೆಯಿತು.
ಸಂಗಮವನ್ನುದ್ದೇಶಿಸಿ ಮಾತನಾಡಿದ ಅವರು ಮಹಾತ್ಮರು ನಮ್ಮ ಮಾರ್ಗದರ್ಶಕರಾಗಿದ್ದಾರೆ. ಅವರ ಸಾಮೀಪ್ಯದಿಂದ ಇಹಪರ ವಿಜಯ ಸಾಧ್ಯವಾಗುತ್ತದೆ ಎಂದರು.
ಝಕರಿಯಾ ಜುಮಾ ಮಸೀದಿ ಬೆಳ್ಳಾರೆ ಆಡಳಿತ ಮಂಡಳಿ ಉಪಾಧ್ಯಕ್ಷ ಯು. ಹೆಚ್. ಅಬೂಬಕ್ಕರ್, ಹಿದಾಯತುಲ್ ಇಸ್ಲಾಂ ಮದರಸ ಬೆಳ್ಳಾರೆ ಸದರ್ ಮುಅಲ್ಲಿಂ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಅಧ್ಯಾಪಕರಾದ ಸುಲೈಮಾನ್ ಮುಸ್ಲಿಯಾರ್ ಮಾಡಾವು, ಹಸೈನಾರ್ ಮುಸ್ಲಿಯಾರ್ ಅಜ್ಜಾವರ, ಝೈನುದ್ದೀನ್ ಮುಸ್ಲಿಯಾರ್ ಅಜ್ಜಾವರ, ಹಿದಾಯ ಪಬ್ಲಿಕ್ ಸ್ಕೂಲ್ ಎಸ್ ಡಿ ಎಂ ಸಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ತಂಬಿನಮಕ್ಕಿ , ಝಕರಿಯಾ ಜುಮಾ ಮಸೀದಿ ಬೆಳ್ಳಾರೆ ಆಡಳಿತ ಮಂಡಳಿ ಸದಸ್ಯರಾದ ಖಲಂದರ್ ಹಾಜಿ, ಕೆ. ಎಸ್. ಜಮಾಲುದ್ದೀನ್, ಅಝರುದ್ದೀನ್ ಬೆಳ್ಳಾರೆ ಸೇರಿದಂತೆ ಜಮಾಅತರು, ದರ್ಸ್ ವಿದ್ಯಾರ್ಥಿಗಳು ಮೌಲೀದ್ ಸಂಗಮದಲ್ಲಿ ಉಪಸ್ಥಿತರಿದ್ದರು.
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…