ಬೆಳ್ಳಾರೆ ಮಸೀದಿ ವಿವಾದ: ಜಮಾಅತ್ ಅಧ್ಯಕ್ಷರಿಂದ ಸ್ಪಷ್ಟನೆ

June 4, 2019
10:17 PM

ಬೆಳ್ಳಾರೆ : ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯಲ್ಲಿ ಶಾಫಿ ಬೆಳ್ಳಾರೆಯವರ ಭಾಷಣಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳು ಬೇಕಾಗಿಲ್ಲ. ಎಲ್ಲಾ ವರ್ಷದಂತೆ ಈ ವರ್ಷವೂ ಭಾಷಣಕ್ಕೆ ಅನುಮತಿ ಕೋರಿ ನನಗೆ ಲಿಖಿತವಾಗಿ ಅರ್ಜಿ ಸಲ್ಲಿಸಿದ್ದರು ಎಂದು ಬೆಳ್ಳಾರೆ ಝಕರಿಯಾ ಜುಮಾ ಮಸ್ಜಿದ್ ಅಧ್ಯಕ್ಷ  ಕೆ. ಎಮ್. ಮಹಮ್ಮದ್ ಹಾಜಿ ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ಭಾಷಣಕ್ಕೆ 17 ಮಂದಿ ಜಮಾಅತ್ ಸದಸ್ಯರಲ್ಲಿ 6 ಮಂದಿಗೆ  ಮಾತ್ರವೇ ಆಕ್ಷೇಪವಿದ್ದು ಇತರರ ಬಹುಮತದ ಅಭಿಪ್ರಾಯವನ್ನು ಪರಿಗಣಿಸಿ ಭಾಷಣಕ್ಕೆ ನಾನು ಲಿಖಿತವಾಗಿ ಅನುಮತಿ ನೀಡಿರುತ್ತೇನೆ. ಶಾಫಿ ಬೆಳ್ಳಾರೆಯವರು ನಮ್ಮ ಜಮಾಅತಿನ ಆಡಳಿತ ಮಂಡಳಿ ಸದಸ್ಯರಾಗಿರುತ್ತಾರೆ. ಆದರೆ ಕೆಲವರು
ರಾಜಕೀಯ ಉದ್ದೇಶಕ್ಕಾಗಿ ಅವರು ಪ್ರತಿನಿಧಿಸುವ ಸಂಘಟನೆ ಮತ್ತು ಪಾರ್ಟಿಯನ್ನು ಎಳೆದು ತಂದು ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ನಮ್ಮ ಜಮಾಅತಿನಲ್ಲಿ ವಿವಿಧ ಪಾರ್ಟಿ ಮತ್ತು ಸಂಘಟನೆಗೆ ಸೇರಿದವರಿದ್ದು ಅವರೆಲ್ಲರೂ ನಮ್ಮ ಜಮಾಅತಿಗರೇ ಹೊರತು ಅವರು ಪ್ರತಿನಿಧಿಸುವ ಪಾರ್ಟಿ ಹೆಸರಿನಲ್ಲಿ ಗುರುತಿಸಿಕೊಂಡಿರುವುದಲ್ಲ. ಭಾಷಣಕ್ಕೆ ಅನುಮತಿ ನೀಡಿರುವಾಗ ಅದನ್ನು ತಡೆಯಲು ಕೆಲವರು ಯತ್ನಿಸಿದಾಗ ಅಲ್ಲಿ ಸೇರಿದ ಜಮಾಅತಿಗರಾದ
ಎಲ್ಲರೂ (ವಿವಿಧ ಪಾರ್ಟಿ& ಸಂಘಟನೆಗೆ ಸೇರಿದವರಾದ) ಅವರನ್ನು ಮಸೀದಿಯಿಂದ ಹೊರ ಹೋಗುವಂತೆ ಮನವಿ ಮಾಡಿ ಹೊರಕಳುಹಿಸಿ ಶಾಫಿ ಬೆಳ್ಳಾರೆಯವರ ಭಾಷಣ ನಡೆದಿರುತ್ತದೆ. ಹೀಗಾಗಿ ಯಾವುದೇ ಗೊಂದಲಗಳು ಬೇಡ ಎಂದು ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪತ್ರಕರ್ತ, ಕೃಷಿಕ : ಮಹೇಶ್ ಪುಚ್ಚಪ್ಪಾಡಿ
February 18, 2026
11:06 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 05.11.2025 | ಎಲ್ಲೆಲ್ಲಾ ಮಳೆ ನಿರೀಕ್ಷೆ..? ನಿರೀಕ್ಷೆಯಂತೆ ಮಳೆಯಾಗದಿರಲು ಕಾರಣವೇನು..?
November 5, 2025
2:24 PM
by: ಸಾಯಿಶೇಖರ್ ಕರಿಕಳ
ಹಸಿರು ಹೈಡ್ರೋಜನ್ ಘಟಕ ಕಾರ್ಯಾಚರಣೆ | ಹಸಿರು ಇಂಧನ ಉತ್ಪಾದನೆಗೆ ಒತ್ತು
August 1, 2025
7:38 PM
by: The Rural Mirror ಸುದ್ದಿಜಾಲ
ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಅಯಂಶಿ ಕೆ.ಎಚ್ , ಬಹರೇನ್
July 5, 2025
8:00 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror