ಸುಳ್ಯ: ಕಳೆದ 20 ವರ್ಷಗಳಿಂದ ಸರಕಾರದ ಮುಂದೆ ವಿವಿಧ ಬೇಡಿಕೆಗಳನ್ನು ಇಟ್ಟಿದ್ದೆವು. ಅದರಲ್ಲಿ ಮುಖ್ಯವಾದ ಕೆಲವು ಬೇಡಿಕೆಗಳನ್ನು ಕರ್ನಾಟಕದ ಎಲ್ಲಾ ಶಾಸಕರಿಗೆ ಪ್ರತ್ಯೇಕವಾಗಿ ಮತ್ತೆ ಮನವಿ ಮೂಲಕ ಸಲ್ಲಿಸಲಾಗಿದೆ. ಮುಂದಿನ ಬಜೆಟ್‍ನಲ್ಲಿ ಟೈಲರ್ಸ್ ವೃತ್ತಿ ಬಾಂಧವರ ಈ ಬೇಡಿಕೆಗಳು ಈಡೇರದೇ ಇದ್ದರೆ ಎಸೋಸಿಯೇಶನ್ ವತಿಯಿಂದ ರಾಜ್ಯದಾದ್ಯಂತ ಎಲ್ಲಾ ಶಾಸಕರ ಮನೆಯ ಮುಂದೆ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಪದಾಧಿಕಾರಿಗಳು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರ ಅವರಿಗೆ ಮನವಿ ಸಲ್ಲಿಸಲಾಗಿದೆ. ಬೇಡಿಕೆ ಈಡೇರಿಸುವ ಭರವಸೆ ಇದೆ. ಮುಖ್ಯವಾಗಿ ಐದು ಬೇಡಿಕೆಗಳನ್ನು ಮುಂದಿರಿಸಲಾಗಿದ್ದು ಇದು ಈಡೇರದಿದ್ದರೆ ರಾಜ್ಯ ಸಮಿತಿಯ ಕರೆಯಂತೆ ಸುಳ್ಯದಲ್ಲಿಯೂ ಶಾಸಕರ ಮನೆಯ ಮುಂದೆ ಧರಣಿ ನಡೆಸಲಾಗುವುದು ಎಂದರು. ಹೊಲಿಗೆ ಕೆಲಸಗಾರರಿಗೆ ಭವಿಷ್ಯ ನಿಧಿ ಯೋಜನೆ ಜಾರಿಯಾಗಿದ್ದು ಕೂಡಲೇ ಅನುಷ್ಠಾನ ಮಾಡಬೇಕು, ಪ್ರಧಾನಮಂತ್ರಿ ಶ್ರಮಿಕ್ ಮಾನ್ದನ್ ಯೋಜನೆಗೆ 18ರಿಂದ 40 ವರ್ಷದವರೆಗೆ ಪ್ರಾಯದವರಿಗೆ ಮಾತ್ರ ಅವಕಾಶವಿದ್ದು ಅದನ್ನು 55 ವರ್ಷದವರೆಗೆ ವಿಸ್ತರಿಸಬೇಕು, ಪ್ರಧಾನಮಮತ್ರಿ ಜೀವನ್ ಜ್ಯೋತಿ ಭೀಮಾ ಪ್ರಥಮ ಕಂತನ್ನು ಫಲಾನುಭವಿಯೇ ಭರಿಸುವುದು ಮತ್ತು ನಂತರದ ಕಂತಿನ ಶೆ.50ನ್ನು ರಾಜ್ಯ ಸರಕಾರ ಭರಿಸಬೇಕು, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಪ್ರಥಮ ಕಂತನ್ನು ಫಲಾನುಭವಿಯೇ ಭರಿಸುವುದು ಮತ್ತು ನಂತರದ ಕಂತನ್ನು ರಾಜ್ಯ ಸರಕಾರ ಭರಿಸಬೇಕು. ಹೊಲಿಗೆ ಕೆಲಸಗಾರರ ಹೆಣ್ಣುಮಕ್ಕಳಿಗೆ ಹಾಗು ಹೊಲಿಗೆ ಕೆಲಸ ನಿರ್ವಹಿಸುವ ಹೆಣ್ಣು ಮಕ್ಕಳಿಗೆ 50,000 ವಿವಾಹಧನ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ದಿವಾಕರ.ಡಿ.ಟಿ, ಪ್ರಧಾನ ಕಾರ್ಯದರ್ಶಿ ಶರ್ಮಿಳಾ ವಿ.ರೈ, ಮಾಜಿ ಅಧ್ಯಕ್ಷರಾದ ಕುಸುಮಾಧರ ಬೂಡು, ವಿಜಯಕುಮಾರ್ ಉಪಸ್ಥಿತರಿದ್ದರು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…