ಬೀದಿ ಗುಡ್ಸುವ ಬೊಮ್ಮಕ್ಕ
ಪೊರ್ಲೂನ ಕಂಟ್….
ಅಪ್ಪ ಅವ್ವ ಹೋದ ಮೇಲೆ
ಬೀದಿ ಗುಡ್ಸಿ ಸಾಗಿಸ್ತಿತ್ತ್
ಅವಳ ಬದ್ಕ್…
ಯಾರೋ ಕೊಟ್ಟ ಹರ್ಕುಲ್ ಸೀರೆಲಿ
ಮುಚ್ಚಿಕಂತಿತ್ತು ಅವಳ ಮಾನ
ಬೀದಿಲಿ ಸಿಕ್ಕಿದ ಗೋಣಿ ಚೀಲಲಿ
ಕಟ್ಟಿಕಂಡಿತ್ತ್ ಅವಳ ಮನೆ ಮಾಡ್ ನಾ
ಹಂಗೂ ಹಿಂಗು ಸಾಗ್ತಾ ಇತ್ತ್
ಅವಳ ಬದ್ಕು
ಬೀದಿಲಿ ಹೋಗೋ ರಾಮಪ್ಪಂಗೆ
ಅವಳ ಸೊಂಟದ ಮೇಲೆನೇ ಕಣ್ಣ್
ಹರ್ಕ್ ಲ್ ಸೀರೆ ಬಿಚ್ಚಿ ಹೋತ್
ಪೊರ್ಲುನಾ ಹೂ ಬಾಂಡಿ ಹೋತ್
ಬೀದಿ ನಾಯಿ ಜೊಲ್ಲು ಸುರ್ಸಿ
ಉಂಡು ತೇಗಿ ಬುಟ್ಟು ಹೋತ್
ಅವಳ ಮನೆ ಸುತ್ತಮುತ್ತ ತಿರ್ಗ್ತ್ ತ್ತಾ ಇದ್ದ
ಕುಕ್ಕಿ ಕುಕ್ಕಿ ತಿಂಬ ಗಿಡ್ಗಂಗ……
ಹಿಂದೆ ಮುಂದೆ ಯಾರು ಇಲ್ಲೆ
ಅತ್ತ ಇತ್ತ ಹೋಕು ಆದ್ಲೆ
ಗೋಣಿ ಚೀಲ ಮಾಡ್ ಕೆಳಗೆ
ಬೊಮ್ಮಕ್ಕನ ಬದ್ಕ್ ಕಂರ್ಚಿ ಹೋತ್
ಬೀದಿ ಗುಡ್ಸಿ ಬದ್ಕ್ ತಿತ್ತ್
ಬೀದಿ ನಾಯ್ಗಳ ಬಾಯಿಗೆ ಸಿಕ್ಕಿ ಬೀದಿಲೇ ಹೆಣ ಆತ್..
# ಅಪೂರ್ವ ಕೊಲ್ಯ
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…