ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಶುಕ್ರಾಚಾರ್ಯ’ ’
ಪ್ರಸಂಗ : ಮೃತಸಂಜೀವಿನಿ
(ಬ್ರಹಸ್ಪತಿ ಪುತ್ರ ಕಚನು ಮೃತಸಂಜೀವಿನಿ ವಿದ್ಯೆಯನ್ನು ಕಲಿಯಲು ಶುಕ್ರಾಚಾರ್ಯರ ಆಶ್ರಮಕ್ಕೆ ಬರುತ್ತಾನೆ)
“ವತ್ಸಾ … ಕೆಲವೊಮ್ಮೆ ಈ ಪ್ರಪಂಚದಲ್ಲಿ ನಾವು ಎಣಿಸಿದಂತೆ ಅಲ್ಲ, ಎಣಿಸಿದ್ದಕ್ಕೆ ವಿಪರೀತವಾಗಿ ಕೆಲವು ಘಟನೆಗಳು ಒದಗುತ್ತವೆ. ಆಗ ಎಂತಹ ವಿದ್ವಾಂಸನಾದರೂ ಒಮ್ಮೆಗೆ ಆಶ್ಚರ್ಯಚಕಿತನಾಗುತ್ತಾನೆ. ಹೇಳಿ ಕೇಳಿ ವೃತ್ತಿಯಿಂದಲೂ, ಕ್ಷೇತ್ರ ವ್ಯತ್ಯಾಸದಿಂದಲೂ ನಿನ್ನ ತಂದೆಯಾದ ಬೃಹಸ್ಪತಿಗೂ, ನನಗೂ ಯಾವಾಗಲೂ ಸಂಘರ್ಷವೇ. ಆದರೆ ಒಂದು ಸಂತೋಷ. ನಮ್ಮೊಳಗೆ ಆಗುತ್ತಿರುವ ಸಂಘರ್ಷವು ಬೌದ್ಧಿಕವಾದುದು, ಭೌತಿಕವಾದುದಲ್ಲ. ಪ್ರಪಂಚದಲ್ಲಿ ಬೌದ್ಧಿಕವಾದ ಸಂಘರ್ಷ ಎಷ್ಟು ಹೆಚ್ಚಾದರೂ ಮುಂದಿನ ಜನಾಂಗಕ್ಕೆ ಅದೊಂದು ಶುಭ ಪರಿಣಾಮವಾಗುತ್ತದೆ. ನೀನು ಬೃಹಸ್ಪತಿಯ ಮಗನಾದ್ದರಿಂದ ನನಗೆ ಅನ್ಯಥಾ ಭಾವನೆಯೇ ಇಲ್ಲ. ವೈಯಕ್ತಿಕವಾಗಿ ನಿನ್ನ ತಂದೆಗೂ ನನಗೂ ಏನೂ ರಾಗದ್ವೇಷಾದಿಗಳಿಲ್ಲ. ನಾವು ವಹಿಸಿಕೊಂಡಿರುವ ಪಕ್ಷ, ಆ ಪಕ್ಷದ ಉತ್ಕರ್ಷವನ್ನು ಬಯಸುವುದು ತಾತ್ವಿಕವಾಗಿ, ವೈಯಕ್ತಿಕವಾಗಿ ನೈತಿಕದ ಹೊಣೆ ಎಂಬುದರಲ್ಲಿ ಮಾತ್ರ. ಅವರಿದ್ದಲ್ಲಿ ನಾನಿಲ್ಲ, ನಾನಿದ್ದಲ್ಲಿ ಅವರಿಲ್ಲ. ಆದ ಕಾರಣ ಒಂದು ಮನೆಯ ಮಾಡಿನಡಿ ನಮಗೆ ಹೊಂದಾಣಿಕೆಯಿಲ್ಲ…
ನಿನ್ನ ಕೇಳಿಕೆಯಂತೂ ಸಾಧ್ಯವಿದ್ದ ಮಟ್ಟಿಗೆ ಯಾವ ವಿಘ್ನವಿಡ್ಡೂರಗಳಿದ್ದರೂ ಕಡೆಗಣಿಸಿ ನಾನು ಮಾಡಬೇಕಾದ, ಮಹಾಪ್ರಧಾನವಾದಂತಹ ಒಂದು ಕರ್ತವ್ಯವದು. ಪ್ರಾಣದಾನವು ದೊಡ್ಡ ದಾನ. ಹಾಗೆಯೇ ಅನ್ನದಾನ, ಔಷಧಿದಾನ. ನೀನು ಕೇಳುವಂತಹುದು ‘ವಿದ್ಯಾದಾನ.’ ವಿದ್ಯೆಯಿಂದ ಅಮೃತವನ್ನುಣಿಸುವುದು. ಮಿಕ್ಕದ್ದೆಲ್ಲ ಕ್ಷಣಿಕ. ಈ ದೇಹವಿದ್ದಷ್ಟು ಕಾಲ ಪ್ರಾಣದಾನ. ಹಸಿವೆ ಮುಗಿಯುವಲ್ಲಿಯ ತನಕ ಅನ್ನದಾನ. ರೋಗ ನಿವೃತ್ತಿಯಾಗುವಲ್ಲಿಯ ತನಕ ಔಷಧಿದಾನ. ಆದರೆ ಜೀವಾತ್ಮನಿಗೆ ಅಮೃತತ್ವ ಯೋಗವನ್ನು ಕರುಣಿಸುವುದು ಸತ್ಯವೂ, ಶಾಶ್ವತವೂ, ಸನಾತನವೂ ಆದ ‘ವಿದ್ಯೆ.’ ಆಚಾರ್ಯನೆಂದರೆ ಸಾಕ್ಷಾತ್ ಪರಬ್ರಹ್ಮ. ಅದು ಶ್ರುತಿವಾಕ್ಯ. ನೀನು ನನ್ನ ಶಿಷ್ಯ. ನನ್ನ ಗುರುತ್ವ ಅರ್ಥಪೂರ್ಣವಾಗಬೇಕು.”
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…