ಬೆಳ್ಳಾರೆ: ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಳು ಹಾಗು ಸಪರಿವಾರ ದೇವಸ್ಥಾನದಲ್ಲಿ ಜನವರಿಯಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಇದರ ಸಲುವಾಗಿ ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ನೀಲೇಶ್ವರ ದಾಮೋದರ ತಂತ್ರಿಗಳ ಭೇಟಿ ಮಾಡಿದರು.
ಸಮಿತಿ ವತಿಯಿಂದ ತಂತ್ರಿಗಳೊಂದಿಗೆ ಬ್ರಹ್ಮಕಲಶೋತ್ಸವದ ಬಗ್ಗೆ ವಿಚಾರ ವಿಮರ್ಶೆ ನಡೆಸಲಾಯಿತು. ದೈವಜ್ಞರು ಸೂಚಿಸಿದಂತೆ ಹಾಗು ತಂತ್ರಿಗಳ ಮಾರ್ಗದರ್ಶನದಂತೆ ಜ.26ಕ್ಕೆ ತಂಟೆಪ್ಪಾಡಿಯ ಶಿರಾಡಿ ದೈವಸ್ಥಾನ, ನಾಗನಕಟ್ಟೆ, ಬಾಳಿಲ ಬಳಿಯ ನೆಟ್ಟಾರಿನ ನಾಗನಕಟ್ಟೆಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಜ.27ರಂದು ಶ್ರೀ ಇಷ್ಟದೇವತಾ ಉಳ್ಳಾಕುಳು ಹಾಗು ಕಲ್ಲಮಾಡದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ. ಬಳಿಕ ಜ.28ರಿಂದ ಜ.30ರ ತನಕ ಅಯ್ಯನಕಟ್ಟೆ ಜಾತ್ರೋತ್ಸವ ನಡೆಯಲಿದೆ.
ದೇವಳದ ಮೊಕ್ತೇಸರ ಬಾಳಿಲ ರಾಮಚಂದ್ರ ರಾವ್, ಸುಬ್ರಹ್ಮಣ್ಯ ಮುಂಡುಗಾರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆದ್ಲ ನರಸಿಂಹ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಗೌಡ ಅಯ್ಯನಕಟ್ಟೆ, ಪ್ರಧಾನ ಕಾರ್ಯದರ್ಶಿ ಪಿಜಿಎಸ್‍ಎನ್ ಪ್ರಸಾದ್, ಆಡಳಿತ ಮಂಡಳಿ ಅಧ್ಯಕ್ಷ ಲಕ್ಷ್ಮಣ ಗೌಡ ಬೇರಿಕೆ, ಪ್ರೀತೇಶ್ ತಂಟೆಪ್ಪಾಡಿ ಉಪಸ್ಥಿತರಿದ್ದರು.
ಮಧ್ಯಮ ಸ್ತರದ ಗಾಳಿಯು ಬಂಗಾಳಕೊಲ್ಲಿಯ ಕಡೆಯಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕರಾವಳಿ…
ಒಂದು ಔಷಧವು ಮಾರುಕಟ್ಟೆಗಿಳಿಯಲು ಹಲವು ಪರೀಕ್ಷೆಗೆ ಒಡ್ಡಿಕೊಂಡು, ಸರಕಾರದಿಂದ ಮಾನ್ಯತೆ ಪಡೆದಾಗ ಮಾತ್ರ…
ನಿಮ್ಮ ಮನೆಯು ಕೇವಲ ಒಂದು ಇಟ್ಟಿಗೆಯ ಗೋಡೆಗಳ ಸಮೂಹವಲ್ಲ; ಇದು ನಿಮ್ಮ ಜೀವನದ…
ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾದಿಂದ ಸ್ಪೇನ್, ಫ್ರಾನ್ಸ್ ಮತ್ತು ಸೈಬೀರಿಯಾದವರೆಗೆ ಭೀಕರ ಮಳೆ,…
ದೇಶದ ಕೃಷಿ ಹಾಗೂ ಪೂರಕ ವಲಯಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸಚಿವ ಸಂಪುಟ…
ರಾಜ್ಯದಲ್ಲಿ ನೆನೆಗುದ್ದಿಗೆ ಬಿದ್ದಿದ್ದ ಸುಮಾರು 43 ಸಾವಿರ ಕೋಟಿ ರೂಪಾಯಿ ವೆಚ್ಚದ ರೈಲ್ವೆ…