ಬ್ರಹ್ಮಗಿರಿ ಬೆಟ್ಟ ಜಾರದಂತೆ ಗಿಡ ನೆಡುವ ಕಾರ್ಯಕ್ರಮ 

September 15, 2019
10:05 AM
Advertisement
ಮಡಿಕೇರಿ:  ತಲಕಾವೇರಿಯ ಬ್ರಹ್ಮಗಿರಿ ಬೆಟ್ಟವು ಜಾರದಂತೆ ವೆಟ್ಟಿವೆರ್ ಹುಲ್ಲು ಗಿಡವನ್ನು ನೆಡುವ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಹಿರಿಯರಾದ ನೆಲ್ಲಮಕ್ಕಾದ ಶಂಭೋ ಮತ್ತು ಕ್ಷೇತ್ರ ಅರ್ಚಕರಾದ ನಾರಾಯಣ ಆಚಾರ್ ಉದ್ಘಾಟಿಸುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹುಲ್ಲು ಬೆಳೆಗಾರರಾದ ತೇಲಪಂಡ ಪ್ರಮೋದ್ ಅವರು ಮಾತನಾಡುತ್ತಾ ವೆಟ್ಟಿವೆರ್ ಎನ್ನುವ ಹುಲ್ಲಿನ ಬೇರು ಸುಮಾರು 18 ಅಡಿ ಭೂಮಿಯ ಕೆಳಗೆ ಹರಡಿವುದರಿಂದ ಮಳೇ ಜಾಸ್ತಿಯಾಗಿ ಬರೆಯ ಮಣ್ಣು ಹದಗೊಳ್ಳುವುದನ್ನು ತಡೆಯಬಹುದೆಂದರು. ಈ ಹುಲ್ಲನ್ನು ಕಳೆದ ವರ್ಷದ ಪ್ರಕೃತಿ ವಿಕೋಪ ನಡೆದ ಸ್ಥಳಗಳಿಗೆ ಕುಪ್ಪಂಡ ಪ್ರೇಮ್ನಾಥ್ ಅವರ ಕುನ್ನೂರುನಿಂದ ತಂದು ತಮ್ಮ ಹಾಕತ್ತೂರಿನ ಗದ್ದೆಯಲ್ಲಿ ಬೆಳಸಲಾಗಿದೆಯೆಂದರು .ಕೊಡಗಿನ ಜನತೆಗೆ ಏನಾದರು ಇದರ ಸಸಿ ಮಡಿ ಬೇಕೆಂದರೆ ಕೇವಲ ಒಂದು ರೂಪಾಯಿ ಪಾವತಿಸಿ ಪಡೆಯಬಹುದೆಂದರು .ತೀರಾ ಬಡವರಾದರೆ ಹಾಗೆಯೆ ನೀಡಲಾಗುವುದೆಂದರು.
ನಂತರ ಅಲ್ಲಿ ನೆರೆದಿದ್ದ ಅರಣ್ಯ ಇಲಾಖೆ ಮತ್ತು ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಿಗೆ ಅದರ ಉಪಯೋಗ ಮತ್ತು ಮಹತ್ವ ಅನ್ನು ತಿಳಿಸಿಕೊಟ್ಟರು ಮತ್ತು ಅದನ್ನು ನಾಟಿ ಮಾಡುವ ಬಗ್ಗೆ ತಿಳಿಸಿದರು.
ಕಾರ್ಯಕ್ರಮವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಿದ್ದಾಟಂಡ ತಮ್ಮಯ ಉದ್ಘಾಟಿಸಿ ಮಾತನಾಡಿದರು .ವ್ಯವಸ್ಥಾಪನ ಸಮಿತಿಯ ಅಮ್ಮತಿ ಕೊಡವಸಮಾಜದ ನಿರ್ದೇಶಕರಾದ ಮುಕ್ಕಾಟಿರ ಸುರೇಶ್ , ಸೇವಾ ಕೇಂದ್ರದ ತಮ್ಮ ಪೂವಯ್ಯ, ಮಂಧಪಂಡ ಸತೀಶ್ ಮುಂತಾದವರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಮಾನವಟ್ಟಿರ ದೊರೆ ಮತ್ತು ಸಂಗಡಿಗರು ,ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳು ,ಅರಣ್ಯ ಇಲಾಖೆ ,ಮತ್ತು ಅರ್ಚಕರ ವೃಂದ ಒಡಗೂಡಿ ಆಯೋಜಿಸಿದ್ದರು .
Advertisement
Advertisement

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಕ್ಷಣಾ ವಲಯದಲ್ಲಿ ಭಾರದ ಸಾಧನೆ : ಫಿಲಿಪೈನ್ಸ್‌ಗೆ ಭಾರತದ ಬ್ರಹ್ಮೋಸ್ ರಫ್ತು : ಬೇರೆ ರಾಷ್ಟ್ರಗಳಿಂದ ಹೆಚ್ಚಿದ ಬೇಡಿಕೆ
April 20, 2024
3:14 PM
by: The Rural Mirror ಸುದ್ದಿಜಾಲ
ವೆದರ್‌ ಮಿರರ್‌ | 20.04.2024 | ರಾಜ್ಯದ ಹಲವೆಡೆ ಇಂದು ಮಳೆಯ ಮುನ್ಸೂಚನೆ
April 20, 2024
11:35 AM
by: ಸಾಯಿಶೇಖರ್ ಕರಿಕಳ
ಚಾಮರಾಜನಗರ-ಹಾವೇರಿಯಲ್ಲಿ ಗಾಳಿಗೆ ಅಪಾರ ಕೃಷಿ ಹಾನಿ |
April 19, 2024
11:14 PM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಉತ್ತಮ ಮಳೆ | ಗಾಳಿಗೆ ಉರುಳಿದ ಮರ | ಸುಳ್ಯ- ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕಡಿತ |
April 19, 2024
11:07 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror