Advertisement
MIRROR FOCUS

ಭತ್ತದ ಕೃಷಿ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಮರಕತ ದೇವಸ್ಥಾನ

Share

ಭತ್ತದ ಗದ್ದೆಗಳೆಲ್ಲಾ ಮಾಯವಾಗಿದೆ. ಇರುವ ಗದ್ದೆಗಳೆಲ್ಲಾ ಬೇರೆ ಕೃಷಿಗೆ ವರ್ಗಾವಣೆಯಾಗಿದೆ. ಹಾಗೆಂದು ಆಚರಣೆಗಳು, ಪರಂಪರೆಗಳನ್ನು ಬಿಡಲಾಗುವುದಿಲ್ಲ. ಪ್ರತೀ ವರ್ಷ ಮನೆ ತುಂಬುವ ಕಾರ್ಯಕ್ರಮ, ನವಾನ್ನ ಭೋಜನ ಸೇರಿದಂತೆ ಹತ್ತು ಹಲವು ಧಾರ್ಮಿಕ  ಕಾರ್ಯಕ್ರಮಗಳು ಯಥಾ ಪ್ರಕಾರ ನಡೆಯಬೇಕು. ಆದರೆ ಆಚರಣೆಯ ಸ್ವರೂಪದಲ್ಲಿ  ಬದಲಾಗುತ್ತದೆ. ಇಂತಹ ಸಂದರ್ಭದಲ್ಲಿ ಮತ್ತೆ ಮೂಲ ಆಚರಣೆ ಉಳಿಸಿಕೊಳ್ಳಲು ಪ್ರಯತ್ನ ನಡೆಯುತ್ತದೆ. ಇದರ ಫಲವೇ ಭತ್ತದ ಗದ್ದೆಗಳ ನಿರ್ಮಾಣ. ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ನಡುಗಲ್ಲು ಬಳಿಯ ಮರಕತ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳೆದ ಕೆಲವು ವರ್ಷಗಳಿಂದ ಭತ್ತದ ಗದ್ದೆ ಮಾಡಲಾಗುತ್ತಿದೆ. ಈ ಕಡೆಗೆ ಫೋಕಸ್……

Advertisement
Advertisement
Advertisement

 

Advertisement

ಸುಳ್ಯ: ದೇವಸ್ಥಾನದ ಆದಾಯಕ್ಕಾಗಿ ಅಡಿಕೆ ತೋಟ ಸೇರಿದಂತೆ ಇತರ ಕೃಷಿ ಇರುವುದು ಕಂಡಿದ್ದೇವೆ. ಆದರೆ  ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ಕಳೆದ ಕೆಲವು ವರ್ಷಳಿಂದ ಭತ್ತದ ಗದ್ದೆ ಮಾಡುತ್ತಿದ್ದಾರೆ. ಈ ಮೂಲಕ ಆಚರಣೆ, ಸಂಪ್ರದಾಯ ಉಳಿಸಿಕೊಂಡರೆ, ಭತ್ತದ ಕೃಷಿಯೂ ಅಗತ್ಯ ಎಂಬ ಸಂದೇಶವನ್ನು ಭಕ್ತರಿಗೆ, ಸಮಾಜಕ್ಕೆ ನೀಡುತ್ತದೆ.

ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ತಾಲೂಕು ಮಾತ್ರವಲ್ಲ ರಾಜ್ಯದ ವಿವಿದೆಡೆಗೆ ತಿಳಿದಿರುವ ಪುಣ್ಯ ಕ್ಷೇತ್ರ. ದೇವಿಯ ಆರಾಧನೆಗೆ ನಾಡಿನ ವಿವಿದೆಡೆಯಿಂದ ಭಕ್ತರು ಆಗಮಿಸುತ್ತಾರೆ. ವಿವಾಹ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಗೆ ಇಲ್ಲಿ ಪ್ರಾರ್ಥನೆ ಮಾಡಿ, ಸೇವೆ ಸಲ್ಲಿಸಿದರೆ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಸಾಕಷ್ಟು ಭಕ್ತರೂ ಆಗಮಿಸುತ್ತಾರೆ. ಎಲ್ಲಾ ಕ್ಷೇತ್ರದಂತೆಯೇ ಇಲ್ಲೂ ಹಲವಾರು ವಾರ್ಷಿಕ ಧಾರ್ಮಿಕ ಆಚರಣೆ ಇರುತ್ತದೆ. ಅದರಲ್ಲಿ ನವಾನ್ನ ಭೋಜನ, ಮನೆ ತುಂಬಿಸುವ ಕಾರ್ಯಕ್ರಮವೂ ಒಂದು.

Advertisement

 

Advertisement

 

ಈ ಕಾರ್ಯಕ್ರಮಕ್ಕೆ ಭತ್ತದ ಕೊರಳು ಬೇಕಾಗುತ್ತದೆ. ಬಂದ ಭಕ್ತರಿಗೆಲ್ಲಾ ಮನೆ ತುಂಬಿಸುವ ಕಾರ್ಯಕ್ರಮದಂದು ಭತ್ತದ ಕೊರಳು ಕೊಡಬೇಕಾಗುತ್ತದೆ. ಆದರೆ ದೇವಸ್ಥಾನ ಮಾತ್ರವಲ್ಲ ಸಮೀಪದಲ್ಲೂ ಎಲ್ಲೂ ಗದ್ದೆ ಇಲ್ಲದ ಕಾರಣ ದೂರದ ಪ್ರದೇಶದಿಂದ ತರಬೇಕಾಗಿತ್ತು. ಈ ಕಾರಣದಿಂದ ಕಳೆದ ಕೆಲವು ಸಮಯಗಳಿಂದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಧೀರ್ ಅಮೆ ಅವರ ನೇತೃತ್ವದಲ್ಲಿ  ದೇವಸ್ಥಾನದ ಪಕ್ಕದಲ್ಲಿಯೇ ಗದ್ದೆಯನ್ನು ಮಾಡಿ, ಚೆನ್ನಾಗಿ ಬೆಳೆಸಲಾಗುತ್ತದೆ. ಇದೇ ಗದ್ದೆಯಿಂದ ದೇವಸ್ಥಾನದ ಎಲ್ಲಾ ಆಚರಣೆಗಳಿಗೆ ಕೊರಳು ತೆಗೆಯಲಾಗುತ್ತದೆ, ಭಕ್ತರಿಗೂ ಹಮಚಲಾಗುತ್ತದೆ. ಈ ಮೂಲಕ ಆಚರಣೆಯನ್ನೂ, ಕೃಷಿಯನ್ನೂ ಉಳಿಸುವ ಹಾಗೂ ಬೆಳೆಸುವ ಕಾರ್ಯ ದೇವಸ್ಥಾನದ ಮೂಲಕ ಮಾಡಲಾಗುತ್ತದೆ.

Advertisement

 

Advertisement

 

ಗದ್ದೆಗೆ ನಾಟಿ ಮಾಡುವ ಕಾರ್ತಯಕ್ರಮ ಈಚೆಗೆ ನಡೆಯಿತು. ಈ ಸಂದರ್ಭ   ದೇವಸ್ಥಾನದ ಅರ್ಚಕ ಜಗದೀಶ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪ್ರಮುಖರಾದ  ಧೀರೇನ್ ಪರಮಲೆ, ಕೊಚ್ಚಿ ವೆಂಕಟ್ರಮಣ ಗೌಡ, ಸುಧೀರ್ ಅಮೆ,  ಕುಶಾಲಪ್ಪ ಗೌಡ, ಗೋಪಾಲ , ಸಿಬಂದಿ ಜಯರಾಮ  ಮೊದಲಾದವರು ಇದ್ದರು.

Advertisement

 

Advertisement

 

Advertisement

ದೇವಸ್ಥಾನದ ಮೂಲಕ ನಮ್ಮ ಪರಂಪರೆ, ಆಚರಣೆ, ಸಂಪ್ರದಾಯಗಳು ಉಳಿಯಬೇಕು. ಈ ಕಾರಣದಿಂದ ದೇವಸ್ಥಾನದಲ್ಲಿ ಗದ್ದೆ ಮಾಡಿ ಭಕ್ತರಿಗೆ ಮನೆತುಂಬಿಸುವ ಕಾರ್ಯಕ್ರಮಕ್ಕೆ ತೆನೆ ನೀಡಲಾಗುತ್ತದೆ. – ಧೀರೇನ್ ಪರಮಲೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

 

Advertisement

ಕಳೆದ ಕೆಲವು ಸಮಯಗಳಿಂದ ಭತ್ತದ ತೆನೆಗಾಗಿ ದೂರದ ಊರುಗಳಿಗೆ ಹೋಗಬೇಕಾದ ಪ್ರಸಂಗ ಇತ್ತು. ಈಗ ಅಂತಹ ಪ್ರಮೇಯ ಇಲ್ಲ. ಈ ಕಾರ್ಯದ ಮೂಲಕ ಕೃಷಿ ಪದ್ದತಿ ಹಾಗೂ ಧಾರ್ಮಿಕ ಪದ್ಧತಿ ಎರಡೂ ಉಳಿದುಕೊಂಡಿದೆ. – ಜಗದೀಶ್, ಅರ್ಚಕ

 

Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |

ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…

4 hours ago

ಗುಬ್ಬಚ್ಚಿ ಸಂಕುಲ ರಕ್ಷಣೆಗೆ ಪ್ರಧಾನಿ ಕರೆ | ಬೇಲೂರಿನಲ್ಲಿ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ

ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…

5 hours ago

ಮಹಿಳಾ ಉದ್ಯಮಿಗಳಿಗೆ  ಎನ್‍ಆರ್ ಎಲ್‍ಎಮ್ ಯೋಜನೆ ಸ್ಪೂರ್ತಿಯ ಸೆಲೆಯಾಗಿದೆ

ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ  ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…

5 hours ago

ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ,  ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ  ಹಾಕಲು ಜಿಲ್ಲಾಡಳಿತ ಸೂಚನೆ

ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…

5 hours ago

ಹಾನಿಯಾದ ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ

ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…

5 hours ago

ಐದು ತಿಂಗಳಲ್ಲಿ 100 ಕೋಟಿ ಗಿಡ ನೆಡುವ ಮೂಲಕ ಅಭಿಯಾನ ಯಶಸ್ವಿ | ಪ್ರಧಾನಿ ಮೋದಿ ಶ್ಲಾಘನೆ

ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…

5 hours ago