ಭರತ ಭೂಮಿ ನಮಗೆ ತಾಯಿ
ನಮ್ಮ ಕನಸು ಅದುವೆ ತಾನೆ
ಜೀವರಾಶಿ ಕಣವು ಎಲ್ಲ ಒಂದೆ ಅಲ್ಲವೆ
ಮಾತೆ ಮುನಿಸೊ ಮೊದಲು ನಾವು
ಮನಸು ನೀಡಿ ಹೊಲಸು ತೊಳೆದು
ಪಾಪ ತೊಳೆವ ಪುಣ್ಯ ಒಂದೆ ಅಲ್ಲವೆ
ಮೂರು ಹೊತ್ತು ಸೂರಿಗಾಗಿ
ಮನವ ಮಿಡಿಯೊ ಹೃದಯಕಾಗಿ
ನಾಡು ನುಡಿಯೆ ಎಲ್ಲ ಒಂದೆ ಅಲ್ಲವೆ
ಬದುಕ ನೀಡಿ ಬೆಳೆಸೊ ತಾಯಿ
ಉಳಿಸೊ ನೆಲವ ಬದುಕಿಗಾಗಿ
ಮರೆತಿರೇಕೆ ಎಲ್ಲ ನೆಲವು ಒಂದೆ ಅಲ್ಲವೆ
ಹುಟ್ಟು ಸಾವು ಸಹಜ ತಾನೆ
ತೊರಬೇಕು ನೋಡಿ ಪ್ರೀತಿಗಾಗಿ
ಬಾಳಬೇಕು ಎಲ್ಲ ಕೂಡಿ ಒಂದೆ ಅಲ್ಲವೆ
# ರೇಣುಕಾ ರಮೇಶ ನಾವಲಗಿ
ಕೆ ವಿ ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸುಳ್ಯ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel