Advertisement
MIRROR FOCUS

ಭವಿಷ್ಯದ ಆಡಳಿತಾತ್ಮಕ “ಯಶಸ್ಸಿಗೆ” ಪ್ರಾಯೋಗಿಕ ಪಾಠ

Share

ಆಡಳಿತ , ಅಧಿಕಾರಿ ಎಂದರೆ ಸುಲಭವಲ್ಲ. ಯಾವ ಹೆಜ್ಜೆ ಇರಿಸಿದರೆ ಏನಾದೀತು ಹಾಗೂ ಏನಾಗಬೇಕು ಎಂಬ ಪಾಠ ಅಗತ್ಯ. ಈ ಪಾಠ ಪ್ರಾಯೋಗಿಕವಾದರೆ ಮಾತ್ರಾ ಯಶಸ್ವಿ ಅಧಿಕಾರಿಯಾಗಲು ಸಾಧ್ಯ. ಉತ್ತಮ ಆಡಳಿತ ನೀಡಲು ಸಾಧ್ಯ. ಸಮಸ್ಯೆ, ಸವಾಲುಗಳನ್ನು ಎದುರಿಸಲು ಸಾಧ್ಯ. ಇಂತಹ ಪಾಠ ನೀಡಿದ್ದು ಪುತ್ತೂರಿನ “ಯಶಸ್” . ಇದು ಹೇಗೆ ? ಈ ಕಡೆಗೆ ನಮ್ಮ ಫೋಕಸ್

Advertisement
Advertisement

 

Advertisement

ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘವು ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಆಡಳಿತಾತ್ಮಕ  ಹುದ್ದೆಗಳಿಗಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದೆ. ಪಿಯುಸಿ ಹಂತದಿಂದಲೇ ಜಿಲ್ಲೆಯ ವಿವಿದೆಡೆಯ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಆಸಕ್ತರಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದೆ. ಇದೀಗ ಪ್ರಾಯೋಗಿಕವಾಗಿಯೂ ಕೆಲಸ ಮಾಡಲು ವಿದ್ಯಾರ್ಥಿಗಳಿಗೆ ತಿಳಿ ಹೇಳುತ್ತಿದೆ. ಹೇಗೆ ಕಾರ್ಯಪ್ರವೃತ್ತವಾಗಬೇಕು ಎಂಬ ಪ್ರಾಯೋಗಿಕ ಪಾಠ ನೀಡಲಾಗುತ್ತದೆ.

ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ವಿವೇಕಾನಂದ ಅಧ್ಯಯನ ಕೇಂದ್ರ – ಯಶಸ್‍ನ ವಿದ್ಯಾರ್ಥಿಗಳು ಸಂಗಮ ವೀಕ್ಷಣೆ ಮತ್ತು ನೆರೆಪೀಡಿತ ಪ್ರದೇಶಗಳ ಅಧ್ಯಯನದಲ್ಲಿ  ಭಾಗವಹಿಸಿದರು.
ರಾಜ್ಯಾದ್ಯಂತ ಸುರಿದ ಭಾರೀ ಮಳೆಯ ಕಾರಣದಿಂದಾಗಿ ಹಲವು ಜಿಲ್ಲೆಗಳು ನೆರೆಗೆ ತುತ್ತಾಗಿವೆ. ಈ ಹಿನ್ನೆಲೆಯಲ್ಲಿ, ಮುಂದೆ ಆಡಳಿತಾತ್ಮಕ ಹುದ್ದೆಗಳಿಗೆ ಸೇರಲಿಚ್ಛಿಸಿರುವ ಯಶಸ್ ನ ವಿದ್ಯಾರ್ಥಿಗಳಿಂದ ನೆರೆ ಅಧ್ಯಯನ ಮತ್ತು ಇಂತಹ ಕ್ಲಿಷ್ಟಕರ ಸಂದರ್ಭಗಳಲ್ಲಿ ಅಧಿಕಾರಿಯಾಗಿ ಸಮಯೋಚಿತ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬಹುದು ಎಂಬುದರ ಕುರಿತಾಗಿ ಪ್ರಾಯೋಗಿಕ ಪರಿಶೀಲನೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಧಾರೆಯ ಮಿತಿಮೀರಿದ ನೀರಿನ ಹರಿವಿನಿಂದಾಗಿ ಜಿಲ್ಲೆಯ ಹಲವು ಕಡೆ ಹಲವು ಸಮಸ್ಯೆಗಳು ಉದ್ಭವಿಸಿ, ಉಲ್ಬಣಗೊಂಡಿವೆ. ಈ ಎರಡು ಜೀವನದಿಗಳ ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಾದ ಹಾನಿಯ ಕುರಿತು ತಿಳಿಯುವ ಉದ್ದೇಶದಿಂದ ಯಶಸ್ ವಿದ್ಯಾರ್ಥಿ ಸಮೂಹ ಅಲ್ಲಿಗೆ ತೆರಳಿತು.

Advertisement

ಉಪ್ಪಿನಂಗಡಿಯ ನಿವಾಸಿ ಹರೀಶ್ ನಟ್ಟಿಬೈಲು ತಮಗಾದ ತೊಂದರೆಗಳನ್ನು ಸೇರಿದ್ದ ವಿದ್ಯಾರ್ಥಿಗಳಿಗೆ ವಿವರಿಸಿದರು. ಒಟ್ಟು ನಾಲ್ಕರಿಂದ ಐದು ಎಕರೆಯ ತಮ್ಮ ತೋಟದಲ್ಲಿ ಮೂರು ಸಾವಿರದಷ್ಟು ಅಡಿಕೆ ಮರಗಳಿವೆ. ಕುಮಾರಧಾರಾ ನದಿಯ ಅತಿಯಾದ ಹರಿವಿನಿಂದಾಗಿ ಸಂಪೂರ್ಣ ತೋಟಕ್ಕೆ ಹಾನಿಯಾಗಿದೆ. ಅದಲ್ಲದೆ ಸರಕಾರದಿಂದ ಕೊಳೆ ರೋಗಕ್ಕೆ ಪರಿಹಾರ ಸಿಗುವುದನ್ನು ಬಿಟ್ಟರೆ ನೆರೆಪೀಡಿತ ಪ್ರದೇಶವೆಂದು ಯಾವುದೇ ಪರಿಹಾರ ಸಿಗುವುದಿಲ್ಲ. ಇದರಿಂದಾಗಿ ಬಹಳ ನಷ್ಟ ಉಂಟಾಗಿದೆ ಎಂದು ತಿಳಿಸಿದರು.
ಹಾಗೆಯೇ ನೇತ್ರಾವತಿ ನದಿಯ ನೀರಿನ ಮಟ್ಟ ಹೆಚ್ಚಾಗಿ ಅಲ್ಲಿನ ಜನವಸತಿಗಳಿಗೆ ನೀರು ನುಗ್ಗಿದ ಪರಿಣಾಮ ಅನೇಕ ಮನೆಗಳಿಗೆ ತೊಂದರೆ ಉಂಟಾಗಿದೆ. 1974ರ ಮಹಾನೆರೆಯ ನಂತರ ಮೂರನೇ ಬಾರಿಗೆ ಇಂತಹ ಪರಿಸ್ಥಿತಿ ಮರುಕಳಿಸಿದೆ. ನದಿಯ ಆಳ ಕಡಿಮೆಯಾಗಿ, ವಿಸ್ತಾರ ಹೆಚ್ಚಾದ ಕಾರಣ ಈ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದು ನೆರೆ ಸಂತ್ರಸ್ತ ಜಗದೀಶ ಶೆಟ್ಟಿ ಹೇಳಿದರು.
ವಿದ್ಯಾರ್ಥಿಗಳ ಜೊತೆಗೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಉಪ್ಪಿನಂಗಡಿಯ ನಿವಾಸಿ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಸದಸ್ಯ ಯು.ಜಿ.ರಾಧ ನದಿಗಳ ನೀರಿನ ಮಟ್ಟ ಹೆಚ್ಚಾದ್ದರಿಂದ ಉಂಟಾಗುವ ಹಲವಾರು ಸಮಸ್ಯೆಗಳು ಹಾಗೂ ಅದರ ಪರಿಹಾರದ ಕುರಿತು ತಿಳಿಸಿದರು.

Advertisement

ಈ ಎಲ್ಲಾ ಸಮಸ್ಯೆಗಳಿಗೆ ಹೇಗೆ ತಕ್ಷಣದ ಕ್ರಮ ಕೈಗೊಳ್ಳಬಹುದು , ಈಗ ಅಧಿಕಾರಿಗಳು, ಆಡಳಿತ ಯಾವ ಕ್ರಮ ಕೈಗೊಂಡಿತು ಇತ್ಯಾದಿಗಳ ಬಗ್ಗೆ ಅಧ್ಯಯನ ನಡೆಸಿದರು. ತಕ್ಷಣ ಸ್ಪಂದನೆ, ಜನರೊಂದಿಗೆ ಹೇಗೆ ಇಂತಹ ಸಂದರ್ಭದಲ್ಲಿ ವ್ಯವಹರಿಸಬೇಕು ಎಂಬಷ್ಟು ಸೂಕ್ಷ್ಮ ವಿಷಯಗಳ ಕಡೆಗೂ ಗಮನಹರಿಸಲಾಯಿತು.

ಈ ಸಂದರ್ಭದಲ್ಲಿ ಯಶಸ್ ನ ಸಂಯೋಜಕ ಗೋವಿಂದ ರಾಜ ಶರ್ಮ, ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ ವಿಭಾಗ ಮುಖ್ಯಸ್ಥ ಡಾ. ಶೇಖರ್ ಅಯ್ಯರ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧಿಕಾರಿ ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ, ವಿವೇಕಾನಂದ ವಸತಿನಿಲಯಗಳ ಮುಖ್ಯ ನಿಲಯಪಾಲಕ ಹರೇಕೃಷ್ಣ, ರೇಡಿಯೋ ಪಾಂಚಜನ್ಯದ ತಾಂತ್ರಿಕ ವಿಭಾಗದ ಪ್ರಶಾಂತ್, ದೇವಾಲಯದ ಸಿಬ್ಬಂದಿ ವರ್ಗ ವಿದ್ಯಾರ್ಥಿನಿ ನಿಲಯ ಪಾಲಕಿಯರಾದ ನಮಿತಾ, ಅಂಜಲಿ, ಚೇತನಾ, ವಿದ್ಯಾರ್ಥಿ ನಿಲಯಪಾಲಕ ಭರತ್ ಹಾಗೂ ಯಶಸ್ ಅಧ್ಯಯನ ಕೇಂದ್ರದ ಐದು ಬ್ಯಾಚಿನ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

 

ಮುರಳಿಕೃಷ್ಣ ಚಳ್ಳಂಗಾರು

ನಾಗರಿಕ ಸೇವೆಗಳಿಗೆ ಇರುವ ಪರೀಕ್ಷೆಯನ್ನು ಎದುರಿಸುವ ಆಕಾಂಕ್ಷಿಗಳು ಅಧ್ಯಯನದ ಜತೆಗೆ ಪ್ರಾಯೋಗಿಕಾಗಿ ತರಬೇತಿ ಹೊಂದಬೇಕು.ಅದು ಅವರಿಗೆ ಮುಂದಕ್ಕೆ ತುಂಬಾ ಸಹಾಯ ಆಗುತ್ತದೆ.ಇಲಾಖೆ ಭೇಟಿ,ಬಡತನ,ರೈತರ ಸಂಕಷ್ಟ ಅರಿವುದು,ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳುವುದು ಎಂಬ ಬಗ್ಗೆ ನಾವು ತಿಳಿಸುತ್ತೇವೆ. – ಮುರಳಿಕೃಷ್ಣ ಚಳ್ಳಂಗಾರು, ಸಂಚಾಲಕರು, ಯಶಸ್ ವಿಭಾಗ

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |

03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

8 hours ago

ಬಿದಿರು ಕೃಷಿ | ತರಕಾರಿ ಕೃಷಿಯಾಗಿ ಬಿದಿರು

ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…

13 hours ago

ಅಡಿಕೆ ಹಳದಿ ಎಲೆರೋಗ – ಚುನಾವಣೆ

ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ…

13 hours ago

ವಾರದ ಅತಿಥಿ | ಸುಬ್ರಾಯ ಚೊಕ್ಕಾಡಿ ಮಾತು

https://youtu.be/Vh1tYlOKav0?si=M4grG9euj6dXmkE2 ರೂರಲ್ ಮಿರರ್‌ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು…

13 hours ago

ಮಕ್ಕಳ ಹಬ್ಬ…

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ ಮಕ್ಕಳ…

13 hours ago

ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |

ಈ ಬಾರಿ ಆಗಿರುವ ತಾಪಮಾನದ ಹೆಚ್ಚಳವನ್ನು ಕನಿಷ್ಠ ಮುಂದಿನ ಕೆಲವು ವರ್ಷಗಳಲ್ಲಾದರು ನಿಯಂತ್ರಣ…

13 hours ago