ಭಾರತಕ್ಕಿಂದು ಹೆಮ್ಮೆಯ ದಿನ : ಚಂದ್ರಯಾನ-2 ನೌಕೆ ಚಂದ್ರನ ಒಡಲು ಸೇರಲಿದೆ ಇಂದು

September 6, 2019
10:06 AM

ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು ನಿರ್ಮಿಸುವ ಭಾರತದ ಬೃಹತ್ ಯೋಜನೆ ಸಾಕಾರಗೊಳ್ಳುವ ಕ್ಷಣ ಸಮೀಪಿಸಿದೆ. ಈ ಮೂಲಕ ಅಮೆರಿಕಾ, ರಷ್ಯಾ, ಚೀನಾ ರಾಷ್ಟ್ರಗಳ ಸಾಧನೆಯನ್ನು ಸರಿಗಟ್ಟಲಿದೆ ಭಾರತ. ಚಂದ್ರಯಾನ-2 ನೌಕೆ ಇಂದು ಚಂದ್ರನ ಒಡಲು ಸೇರಲಿದೆ. ತಡರಾತ್ರಿ  ಚಂದ್ರನಿಗೆ ಸಂಬಂಧಿಸಿದ ಅಮೂಲ್ಯ ಮಾಹಿತಿಗಳು, ಫೋಟೊಗಳು ಲಭ್ಯವಾಗಲಿದೆ.

Advertisement
Advertisement
Advertisement

ಭಾರತದ ವಿಶ್ವದ ಮುಂದೆ ಎದೆಯುಬ್ಬಿಸಿ ನಿಲ್ಲುತ್ತಿದೆ. ಇದೀಗ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು ನಿರ್ಮಿಸುವ ಭಾರತದ ಬೃಹತ್ ಯೋಜನೆ ಸಾಕಾರಗೊಳ್ಳುವ ಕ್ಷಣ ಸಮೀಪಿಸಿದೆ.  ನಮ್ಮ ಹೆಮ್ಮೆಯ ಚಂದ್ರಯಾನ-2 ನೌಕೆ ಚಂದ್ರನ ಒಡಲು ಇಂದು ಸೇರಲಿದೆ.  ಚಂದ್ರಯಾನ-2 ನೌಕೆ ಚಂದ್ರನ ಮೇಲೆ ಇಂದು ತಡರಾತ್ರಿ 1.30ರಿಂದ 2.30ರ ವೇಳೆಗೆ ಪಾದಾರ್ಪಣೆ ಮಾಡಲಿದೆ. ಈ ಅಪರೂಪದ ಕ್ಷಣಗಳನ್ನು ಇಡೀ ವಿಶ್ವವೇ ಕಾತುರದಿಂದ ಎದುರು ನೋಡುತ್ತಿದೆ. ಬಳಿಕ  ನೌಕೆಯಲ್ಲಿರುವ ಪ್ರಜ್ಞಾನ್ ರೋವರ್ ಬೆಳಗಿನ ಜಾವ  ಹೊರಬರಲಿದೆ. ಬಳಿಕ ಅದು ತನ್ನ ಕಾರ್ಯಾಚರಣೆ ಆರಂಭಿಸಲಿದೆ.

Advertisement

ಭಾರತ ಮಾತ್ರವಲ್ಲದೆ ಇಡೀ ಜಗತ್ತು ಈ ಸಾಧನೆಯ ಕ್ಷಣಕ್ಕೆ ಬೆರಗುಗಣ್ಣಿನಿಂದ ಕಾಯುತ್ತಿದೆ. ಚಂದ್ರ ಉಪಗ್ರಹಕ್ಕೆ ಅಧ್ಯಯನ ನೌಕೆಗಳನ್ನು ಕಳಿಸುವುದು ಇದೇ ಮೊದಲೇನಲ್ಲ. ಬೇರೆ ದೇಶಗಳು ಹಲವು ಬಾರಿ ಈ ಪ್ರಯತ್ನಗಳನ್ನು ನಡೆಸಿವೆ. ಅಲ್ಲಿ ಮಾನವನ ಓಡಾಟವೂ ನಡೆದಿದೆ. ಭಾರತವೂ ಚಂದ್ರಯಾನ-1ರಲ್ಲಿ ಯಶಸ್ವಿ ಪ್ರಯೋಗ ನಡೆಸಿ ಮಾಹಿತಿಗಳನ್ನು ಕಲೆಹಾಕಿದೆ. ಈ ವರೆಗೆ ವಿಶ್ವದ 3 ದೇಶಗಳು ಮಾತ್ರ ಚಂದ್ರನ ಮೇಲೆ ನೌಕೆ ಇಳಿಸಿದ ಇತಿಹಾಸವನ್ನು ಹೊಂದಿದೆ. ಶುಕ್ರವಾರ ಚಂದ್ರಯಾನ-2 ನೌಕೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದರೆ ರಷ್ಯಾ, ಅಮೆರಿಕಾ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೆ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ವಿಶೇಷವೆಂದರೆ ಈ ವರೆಗೆ ಯಾವುದೇ ರಾಷ್ಟ್ರಗಳೂ ಕಾಲಿಡದ ಹಾಗೂ ಬಿಸಿಲು ಕಾಣದ ದಕ್ಷಿಣ ಧ್ರುವವನ್ನು ಭಾರತ ಆಯ್ಕೆ ಮಾಡಿಕೊಂಡಿದೆ. ಚಂದ್ರನ ದಕ್ಷಿಣ ಧ್ರುವ ಹೇಗಿದೆ? ಅಲ್ಲಿ ಏನೇನಿವೆ ಎಂಬುದು ಜಗತ್ತಿಗೆ ಗೊತ್ತಿಲ್ಲ. ಅದನ್ನು ನೋಡುವ ಪ್ರಯತ್ನವನ್ನೂ ಮಾಡಿರಲಿಲ್ಲ.  ಹೀಗಾಗಿ ಭಾರತಕ್ಕೆ ಇದು ಹೆಮ್ಮೆ.ಇಸ್ರೋ ಅತ್ಯಂತ ಯಶ್ವಸಿಯಾಗಿ ಇದುವರೆಗೆ ಎಲ್ಲಾ ಕಾರ್ಯಗಳನ್ನು ಮಾಡಿದೆ.

Advertisement

ಸೋಮವಾರ ಚಂದ್ರಯಾನ-2 ನೌಕೆಯಲ್ಲಿನ ಆರ್ಬಿಟರ್ ಹಾಗೂ ವಿಕ್ರಮ್ ಹೆಸರಿನ ಲ್ಯಾಂಡರ್ ಪ್ರತ್ಯೇಕಗೊಂಡಿದ್ದವು. ಬಳಿಕ ಲ್ಯಾಂಡರ್ ಅನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ವಿಜ್ಞಾನಿಗಳು ಎರಡು ಬಾರಿ ಕೆಳಕ್ಕೆ ಇಳಿಸಿದ್ದಾರೆ.  ಶುಕ್ರವಾರ ತಡರಾತ್ರಿ 1.30 ರಿಂದ ಲ್ಯಾಂಡನ್ ಅನ್ನು ನಿಧಾನವಾಗಿ ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆ ನಡೆಸಲಾಗುತ್ತದೆ. ಬಳಿಕ ನೌಕೆ ಒಳಗಿನಿಂದ ಪ್ರಜ್ಞಾನ್ ಹೆಸರಿನ ರೋವರ್ ಹೊರಬರುತ್ತದೆ. ಅದು ಒಟ್ಟು 14  ದಿನ ಕ್ರಮಿಸಿ, ಚಂದ್ರನಿಗೆ ಸಂಬಂಧಿಸಿದ ಅಮೂಲ್ಯ ಮಾಹಿತಿಗಳನ್ನು ರೋವರ್ ಸಂಗ್ರಹಿಸಲಿದೆ. ಲ್ಯಾಂಡರ್ ನಿಂದ ಪ್ರತ್ಯೇಕಗೊಂಡಿರುವ ಆರ್ಬಿಟರ್ ಇನ್ನೂ ಒಂದು ವರ್ಷ ಚಂದ್ರನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಾ ಅಪರೂಪದ ಫೋಟೋಗಳನ್ನು ಭೂಮಿಗೆ ರವಾನಿಸಲಿದೆ.

 

Advertisement

 

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತೀರ್ಥಹಳ್ಳಿ ಮೊದಲ ಮಳೆ ವ್ಯಕ್ತಿ ಬಲಿ | ಶಿವಮೊಗ್ಗದಲ್ಲೂ ಗಾಳಿ ಮಳೆ |
April 19, 2024
10:02 AM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಮಳೆ
April 18, 2024
10:09 PM
by: ದ ರೂರಲ್ ಮಿರರ್.ಕಾಂ
ಮರುಭೂಮಿ ನಾಡು ದುಬೈನಲ್ಲಿ 75 ವರ್ಷಗಳಲ್ಲೇ ದಾಖಲೆ ಮಳೆ…! | ಪ್ರವಾಹಕ್ಕೆ UAE ತತ್ತರ |
April 18, 2024
3:49 PM
by: The Rural Mirror ಸುದ್ದಿಜಾಲ
ಎಚ್ಚರ….. ತಾಯಂದಿರೇ ನಿಮ್ಮ ಮಕ್ಕಳಿಗೆ ಸೆರೆಲಾಕ್ ತಿನ್ನಿಸುತ್ತೀರಾ..? | ಬಯಲಾಯ್ತು ಶಾಕಿಂಗ್ ನ್ಯೂಸ್…! | ವರದಿ ಬಹಿರಂಗದ ಬಳಿಕ ನೆಸ್ಲೆ ಪ್ರತಿಕ್ರಿಯೆ ಏನು..?
April 18, 2024
3:21 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror