ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು ನಿರ್ಮಿಸುವ ಭಾರತದ ಬೃಹತ್ ಯೋಜನೆ ಸಾಕಾರಗೊಳ್ಳುವ ಕ್ಷಣ ಸಮೀಪಿಸಿದೆ. ಈ ಮೂಲಕ ಅಮೆರಿಕಾ, ರಷ್ಯಾ, ಚೀನಾ ರಾಷ್ಟ್ರಗಳ ಸಾಧನೆಯನ್ನು ಸರಿಗಟ್ಟಲಿದೆ ಭಾರತ. ಚಂದ್ರಯಾನ-2 ನೌಕೆ ಇಂದು ಚಂದ್ರನ ಒಡಲು ಸೇರಲಿದೆ. ತಡರಾತ್ರಿ ಚಂದ್ರನಿಗೆ ಸಂಬಂಧಿಸಿದ ಅಮೂಲ್ಯ ಮಾಹಿತಿಗಳು, ಫೋಟೊಗಳು ಲಭ್ಯವಾಗಲಿದೆ.
ಭಾರತದ ವಿಶ್ವದ ಮುಂದೆ ಎದೆಯುಬ್ಬಿಸಿ ನಿಲ್ಲುತ್ತಿದೆ. ಇದೀಗ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು ನಿರ್ಮಿಸುವ ಭಾರತದ ಬೃಹತ್ ಯೋಜನೆ ಸಾಕಾರಗೊಳ್ಳುವ ಕ್ಷಣ ಸಮೀಪಿಸಿದೆ. ನಮ್ಮ ಹೆಮ್ಮೆಯ ಚಂದ್ರಯಾನ-2 ನೌಕೆ ಚಂದ್ರನ ಒಡಲು ಇಂದು ಸೇರಲಿದೆ. ಚಂದ್ರಯಾನ-2 ನೌಕೆ ಚಂದ್ರನ ಮೇಲೆ ಇಂದು ತಡರಾತ್ರಿ 1.30ರಿಂದ 2.30ರ ವೇಳೆಗೆ ಪಾದಾರ್ಪಣೆ ಮಾಡಲಿದೆ. ಈ ಅಪರೂಪದ ಕ್ಷಣಗಳನ್ನು ಇಡೀ ವಿಶ್ವವೇ ಕಾತುರದಿಂದ ಎದುರು ನೋಡುತ್ತಿದೆ. ಬಳಿಕ ನೌಕೆಯಲ್ಲಿರುವ ಪ್ರಜ್ಞಾನ್ ರೋವರ್ ಬೆಳಗಿನ ಜಾವ ಹೊರಬರಲಿದೆ. ಬಳಿಕ ಅದು ತನ್ನ ಕಾರ್ಯಾಚರಣೆ ಆರಂಭಿಸಲಿದೆ.
ಭಾರತ ಮಾತ್ರವಲ್ಲದೆ ಇಡೀ ಜಗತ್ತು ಈ ಸಾಧನೆಯ ಕ್ಷಣಕ್ಕೆ ಬೆರಗುಗಣ್ಣಿನಿಂದ ಕಾಯುತ್ತಿದೆ. ಚಂದ್ರ ಉಪಗ್ರಹಕ್ಕೆ ಅಧ್ಯಯನ ನೌಕೆಗಳನ್ನು ಕಳಿಸುವುದು ಇದೇ ಮೊದಲೇನಲ್ಲ. ಬೇರೆ ದೇಶಗಳು ಹಲವು ಬಾರಿ ಈ ಪ್ರಯತ್ನಗಳನ್ನು ನಡೆಸಿವೆ. ಅಲ್ಲಿ ಮಾನವನ ಓಡಾಟವೂ ನಡೆದಿದೆ. ಭಾರತವೂ ಚಂದ್ರಯಾನ-1ರಲ್ಲಿ ಯಶಸ್ವಿ ಪ್ರಯೋಗ ನಡೆಸಿ ಮಾಹಿತಿಗಳನ್ನು ಕಲೆಹಾಕಿದೆ. ಈ ವರೆಗೆ ವಿಶ್ವದ 3 ದೇಶಗಳು ಮಾತ್ರ ಚಂದ್ರನ ಮೇಲೆ ನೌಕೆ ಇಳಿಸಿದ ಇತಿಹಾಸವನ್ನು ಹೊಂದಿದೆ. ಶುಕ್ರವಾರ ಚಂದ್ರಯಾನ-2 ನೌಕೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದರೆ ರಷ್ಯಾ, ಅಮೆರಿಕಾ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೆ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ವಿಶೇಷವೆಂದರೆ ಈ ವರೆಗೆ ಯಾವುದೇ ರಾಷ್ಟ್ರಗಳೂ ಕಾಲಿಡದ ಹಾಗೂ ಬಿಸಿಲು ಕಾಣದ ದಕ್ಷಿಣ ಧ್ರುವವನ್ನು ಭಾರತ ಆಯ್ಕೆ ಮಾಡಿಕೊಂಡಿದೆ. ಚಂದ್ರನ ದಕ್ಷಿಣ ಧ್ರುವ ಹೇಗಿದೆ? ಅಲ್ಲಿ ಏನೇನಿವೆ ಎಂಬುದು ಜಗತ್ತಿಗೆ ಗೊತ್ತಿಲ್ಲ. ಅದನ್ನು ನೋಡುವ ಪ್ರಯತ್ನವನ್ನೂ ಮಾಡಿರಲಿಲ್ಲ. ಹೀಗಾಗಿ ಭಾರತಕ್ಕೆ ಇದು ಹೆಮ್ಮೆ.ಇಸ್ರೋ ಅತ್ಯಂತ ಯಶ್ವಸಿಯಾಗಿ ಇದುವರೆಗೆ ಎಲ್ಲಾ ಕಾರ್ಯಗಳನ್ನು ಮಾಡಿದೆ.
ಸೋಮವಾರ ಚಂದ್ರಯಾನ-2 ನೌಕೆಯಲ್ಲಿನ ಆರ್ಬಿಟರ್ ಹಾಗೂ ವಿಕ್ರಮ್ ಹೆಸರಿನ ಲ್ಯಾಂಡರ್ ಪ್ರತ್ಯೇಕಗೊಂಡಿದ್ದವು. ಬಳಿಕ ಲ್ಯಾಂಡರ್ ಅನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ವಿಜ್ಞಾನಿಗಳು ಎರಡು ಬಾರಿ ಕೆಳಕ್ಕೆ ಇಳಿಸಿದ್ದಾರೆ. ಶುಕ್ರವಾರ ತಡರಾತ್ರಿ 1.30 ರಿಂದ ಲ್ಯಾಂಡನ್ ಅನ್ನು ನಿಧಾನವಾಗಿ ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆ ನಡೆಸಲಾಗುತ್ತದೆ. ಬಳಿಕ ನೌಕೆ ಒಳಗಿನಿಂದ ಪ್ರಜ್ಞಾನ್ ಹೆಸರಿನ ರೋವರ್ ಹೊರಬರುತ್ತದೆ. ಅದು ಒಟ್ಟು 14 ದಿನ ಕ್ರಮಿಸಿ, ಚಂದ್ರನಿಗೆ ಸಂಬಂಧಿಸಿದ ಅಮೂಲ್ಯ ಮಾಹಿತಿಗಳನ್ನು ರೋವರ್ ಸಂಗ್ರಹಿಸಲಿದೆ. ಲ್ಯಾಂಡರ್ ನಿಂದ ಪ್ರತ್ಯೇಕಗೊಂಡಿರುವ ಆರ್ಬಿಟರ್ ಇನ್ನೂ ಒಂದು ವರ್ಷ ಚಂದ್ರನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಾ ಅಪರೂಪದ ಫೋಟೋಗಳನ್ನು ಭೂಮಿಗೆ ರವಾನಿಸಲಿದೆ.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…