ನವದೆಹಲಿ: ಫ್ರಾನ್ಸ್ ನ ಡಸಾಲ್ಟ್ ಏವಿಯೇಶನ್ಸ್ ನಿರ್ಮಿತ ಅತ್ಯಾಧುನಿಕ ರಫೇಲ್ ಯದ್ಧ ವಿಮಾನವನ್ನು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಔಪಚಾರಿಕವಾಗಿ ಸ್ವೀಕರಿಸಿದರು.
ಮೂರು ದಿನಗಳ ಫ್ರಾನ್ಸ್ ಭೇಟಿಯಲ್ಲಿರುವ ರಾಜನಾಥ್ ಸಿಂಗ್ ರಫೇಲ್ ಯುದ್ಧ ವಿಮಾನ ಸ್ವೀಕರಿಸುವ ಮೊದಲು ಮಾತನಾಡಿ ಇದು ಐತಿಹಾಸಿಕ ದಿನ’ ಎಂದು ಬಣ್ಣಿಸಿದರು. 59 ಸಾವಿರ ಕೋಟಿ ರೂ. ಮೌಲ್ಯದ ಫೈಟರ್ ಜೆಟ್ ಡೀಲ್ ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವದಲ್ಲಿ ಹೊಸ ಮೈಲಿಗಲ್ಲು ಎಂದು ಅವರು ಈ ಸಂದರ್ಭ ಹೇಳಿದರು.
ಡಸಾಲ್ಟ್ ಏವಿಯೇಷನ್ನ ಸಿಇಒ ಎರಿಕ್ ಟ್ರಾಪ್ಪಿಯರ್ ರಫೇಲ್ ವಿಮಾನವನ್ನು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಹಸ್ತಾಂತರಿಸಿದರು. ದಸರಾ ಹಾಗೂ ಭಾರತೀಯ ವಾಯುಪಡೆ ದಿನವಾದ ಇಂದು (ಅಕ್ಟೋಬರ್-8) ರಾಜನಾಥ್ ಸಿಂಗ್ ವಿಮಾನಕ್ಕೆ ಪೂಜೆ ನೆರವೇರಿಸಿದರು.
ರಫೇಲ್ ಅತ್ಯಾಧುನಿಕ ಯುದ್ಧ ವಿಮಾನವಾಗಿದ್ದು, ಭಾರತದ ಬೇಡಿಕೆಗೆ ಅನುಗುಣವಾಗಿ ವಿಮಾನದಲ್ಲಿ 13 ಮಾರ್ಪಾಡುಗಳು ಮಾಡಲಾಗಿದೆ. ಅತ್ಯಾಧುನಿಕ ಬಿಯಾಂಡ್ ವಿಜುವಲ್ ರೇಂಜ್ನ ಮೆಟೆರೋ ಕ್ಷಿಪಣಿ ಹಾಗೂ ಸ್ಕಾಲ್ಫ್ ಕ್ಷಿಪಣಿಗಳೊಂದಿಗೆ ರಫೇಲ್ ಐಎಎಫ್ ಸೇರಿದೆ. ಅತ್ಯಾಧುನಿಕ ಎಇಎಸ್ಎ ರೇಡಾರ್ ಹೊಂದಿರುವ ರಫೇಲ್, ಶತ್ರು ವಿಮಾನಗಳನ್ನು ಸುದೂರದಲ್ಲೇ ಪತ್ತೆಹಚ್ಚುತ್ತದೆ. 9,500 ಕೆಜಿ ಬಾಂಬ್ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ನ್ಯೂಕ್ಲಿಯರ್ ಬಾಂಬ್ಗಳನ್ನು ಹೊತ್ತು ಗಂಟೆಗೆ 2000 ಕಿಮೀ ವೇಗದಲ್ಲಿ ಸಾಗುತ್ತದೆ.
ಭಾರತ 59,000 ಕೋಟಿ ರೂ ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಫ್ರಾನ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಔಪಚಾರಿಕವಾಗಿ ಮೊದಲ ವಿಮಾನ ಅಕ್ಟೋಬರ್ 08 (ಇಂದು) ಐಎಎಫ್ ಸೇರಿದೆ. 2020 ಮೇ ಒಳಗೆ ಇನ್ನೂ ಉಳಿದ ವಿಮಾನಗಳು ವಾಯುಪಡೆಗೆ ಸೇರ್ಪಡೆಯಾಗಲಿದೆ.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…