ಬೆಂಗಳೂರು: ದೇಶದ ಭಾರತತ್ವವನ್ನು ಉಳಿಸುವ ಸಲುವಾಗಿ ಆಚಾರ್ಯ ವಿಷ್ಣುಗುಪ್ತ ಚಾಣಕ್ಯನ ಹೆಸರಿನಲ್ಲಿ ಜಗತ್ತಿನ ಏಕೈಕ ವಿಶ್ವವಿದ್ಯಾಪೀಠ ಆರಂಭಿಸಲಾಗುತ್ತಿದೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ರಾಮಾಯಣ ಚಾತುರ್ಮಾಸ್ಯ ವ್ರತ ಆರಂಭದ ದಿನವಾದ ಗುರುಪೂರ್ಣಿಮೆಯಂದು ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಪರಮಶ್ರೇಷ್ಠ ಗುರುವಿಗೆ, ಸ್ವಾರ್ಥರಹಿತ ಜೀವನಕ್ಕೆ ಚಾಣಕ್ಯ ಉದಾಹರಣೆ. ಚಂದ್ರಗುಪ್ತನಂಥ ಧರ್ಮನಿಷ್ಠ, ಸಂಸ್ಕøತಿನಿಷ್ಠ ಧರ್ಮಯೋಧರನ್ನು ಸಿದ್ಧಪಡಿಸುವುದು ಇದರ ಉದ್ದೇಶ ಎಂದು ಬಣ್ಣಿಸಿದರು.
ಭಾರತದ ಗತವೈಭವ ಮರುಕಳಿಸುವಂತೆ ಮಾಡುವ ಈ ವಿಶ್ವವಿದ್ಯಾಪೀಠ, ಚಲಿಸುವ ವಿಶ್ವವಿದ್ಯಾನಿಲಯವೇ ಆಗಿದ್ದ ಶಂಕರಾಚಾರ್ಯರ ಸ್ಮರಣೆಯಲ್ಲಿ, ಅವರಿಗೇ ಸಮರ್ಪಣೆಯಾಗುತ್ತಿದೆ ಎಂದು ವಿವರಿಸಿದರು.
ಗುರು ಸಂಪರ್ಕಕ್ಕೆ ಸ್ಮರಣೆಯೇ ಮಾರ್ಗ. ಗುರು, ದೇವರಿಂದ ಹರಿದುಬರುವ ಜ್ಞಾನ ಪರಂಪರೆ ಹರಿಯಲು ಇದು ಸಾಧನವಾಗುತ್ತದೆ. ಗುರುಪೂರ್ಣಿಮೆ ಅಂಥ ಸ್ಮರಣೆಗೆ ಮಹಾಪರ್ವದಿನ. ಗುರುವಿಲ್ಲದ ಬದುಕು ನಿರರ್ಥಕ. ಸಕಾಲದಲ್ಲಿ ಸರಿ ನಿರ್ಣಯ ಕೈಗೊಳ್ಳಲು ಗುರುಕೃಪೆ ಅಗತ್ಯ. ಶಿಷ್ಯಕೋಟಿಗೆ ಮಾರ್ಗದರ್ಶನ ನೀಡುವುದು ಗುರು ಪರಂಪರೆ ಎಂದು ಬಣ್ಣಿಸಿದರು.
ಚಾತುರ್ಮಾಸ್ಯವೇ ಸನ್ಯಾಸಿಗಳ ಆಯಸ್ಸು; ಪ್ರತಿ ಚಾತುರ್ಮಾಸ್ಯದಿಂದ ಪುಣ್ಯಸಂಚಯವಾಗುತ್ತದೆ. ಗುರುಶಿಷ್ಯ ಬಂಧದ ವಿಶೇಷ ಪರ್ವ ಎಂದರು. ಇಡೀ ಚಾತುರ್ಮಾಸ್ಯದಲ್ಲಿ ಸುವರ್ಣಮಂಟಪದಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲುತ್ತಿದ್ದು, ಇದು ಶ್ರೀಮಠದ ಇತಿಹಾಸದಲ್ಲೇ ಮೊದಲು. ಇದು ಸುವರ್ಣಯುಗದ ಪ್ರಾರಂಭದ ಸಂಕೇತ. ಸ್ವರ್ಣಮಂಟಪದ ಕಾಂತಿ ಎಲ್ಲರ ಬದುಕನ್ನು ಸ್ವರ್ಣಮಯ ಮಾಡಬಲ್ಲದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ವೇದಮೂರ್ತಿ ಮಾತನಾಡಿ, ಭ್ರಷ್ಟಾಚಾರದಿಂದಾಗಿ ಮೇಧಾವಿಗಳಿಗೆ, ದುರ್ಬಲ ವರ್ಗದಿಂದ ಬಂದವರಿಗೆ ಉದ್ಯೋಗದಲ್ಲಿ ಅನ್ಯಾಯವಾಗುತ್ತಿದೆ. ಇಂಥದ್ದನ್ನು ತಪ್ಪಿಸಲು ಶ್ರೀಮಠದ ವತಿಯಿಂದ ವೈದ್ಯಕೀಯ ಹಾಗೂ ವೃತ್ತಿಪರ ಕಾಲೇಜುಗಳನ್ನು ಆರಂಭಿಸಿದರೆ ಸಮಾಜಕ್ಕೆ ಒಳಿತಾಗುತ್ತದೆ. ನಾಗರಿಕ ಸೇವೆಗೆ ವಿಶೇಷವಾದ ತರಬೇತಿ ಕೇಂದ್ರ ಆರಂಭಿಸಬೇಕು ಎಂದು ಮನವಿ ಮಾಡಿದರು.
ಮೋಹನ ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ಹಾಗೂ ನಿವೃತ್ತ ಪೊಲೀಸ್ ಮಹಾನಿರ್ದೇಶಕ ತಿಮ್ಮಪ್ಪಯ್ಯ ಮಡಿಯಾಳ್, ಸಿಇಓ ಕೆ.ಜಿ.ಭಟ್, ಹವ್ಯಕ ಮಹಾಮಂಡಲದ ನೂತನ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಮಾತೃವಿಭಾಗದ ಶ್ರೀಸಂಯೋಜಕಿ ಈಶ್ವರಿ ಬೇರ್ಕಡವು, ಡಾ.ವೈ.ವಿ.ಕೃಷ್ಣಮೂರ್ತಿ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ರಮೇಶ್ ಹೆಗಡೆ ಕೋರಮಂಗಲ, ಕಾರ್ಯದರ್ಶಿ ವಾದಿರಾಜ ಸಾಮಗ, ಧಾರಾರಾಮಾಯಣ ಕ್ರಿಯಾಸಮಿತಿಯ ಡಾ.ಶಾರದಾ ಜಯಗೋವಿಂದ್ ಮತ್ತಿತರರು ಉಪಸ್ಥಿತರಿದ್ದರು. ಗೋಫಲ ಟ್ರಸ್ಟ್ ನ ಗೋಜ್ವಾಲವನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು.
ಇದಕ್ಕೂ ಮುನ್ನ ಮುಂಜಾನೆಯಿಂದ ಚಾತುರ್ಮಾಸ್ಯ ಅಂಗವಾಗಿ ಶ್ರೀಕರಾರ್ಚಿತ ಪೂಜೆ, ಶ್ರೀವ್ಯಾಸಪೂಜೆ ನಡೆಯಿತು. ಗುರುಪರಂಪರಾ ಪೂಜೆ ನೆರವೇರಿಸಿದ ಶ್ರೀಗಳು ಸಮಾಜದ ಸರ್ವರಿಗೆ ವ್ಯಾಸಮಂತ್ರಾಕ್ಷತೆ ಅನುಗ್ರಹಿಸಿದರು.
ಇಂದು ರಾಷ್ಟ್ರೀಯ ರೈತ ದಿನ. ಈ ದೇಶದಲ್ಲಿ ಕೃಷಿಯ ಪ್ರಾಧಾನ್ಯತೆ ಬಹಳಷ್ಟಿದೆ. ಕೃಷಿಗಾಗಿ…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಡಿ.26 ರಂದು ತಮಿಳುನಾಡು ಕರಾವಳಿಯ ಬಳಿ ಶಿಥಿಲಗೊಳ್ಳುತ್ತಿದ್ದಂತೆಯೇ ಹಿಂಗಾರು…
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಶಾಲಾ ವಠಾರದಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ…
23.12.24ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
22.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಒಡಿಶಾ ರಾಜ್ಯ ಸರ್ಕಾರವು ಕೃಷಿಯಲ್ಲಿ ಹೊಸವಿಧಾನಗಳ, ಪರ್ಯಾಯ ಕೃಷಿಯ ಪಾತ್ರವನ್ನು ಪರೋಕ್ಷವಾಗಿ ಕೃಷಿಕರಿಗೆ…