ಭಾರತದಲ್ಲಿ ಕೊರೊನಾ ವೈರಸ್ ಗೆ ಇನ್ನೊಂದು ಬಲಿ | ಸಾವಿನ ಸಂಖ್ಯೆ 7 ಕ್ಕೆ ಏರಿಕೆ | ಪ್ರಪಂಚದಲ್ಲಿ 1 ಬಿಲಿಯನ್ ಜನರು ಲಾಕ್ ಡೌನ್

March 22, 2020
12:33 PM

ಮಂಗಳೂರು: ಕೊರೊನಾ ವೈರಸ್ ಗೆ ಭಾರತದಲ್ಲಿ ಶನಿವಾರ ರಾತ್ರಿ ಬಿಹಾರದಲ್ಲಿ  38 ವರ್ಷದ ಯುವಕ ಮೃತಪಟ್ಟಿದ್ದಾರೆ. ಈ ಮೂಲಕ 6 ಮಂದಿ ಭಾರತದಲ್ಲಿ  ಕೊರೊನಾ ವೈರಸ್ ಗೆ ಬಲಿಯಾದರೆ  ಇಟಲಿಯ ಪ್ರಜೆಯೋರ್ವ ರಾಜಸ್ಥಾನದ ಜೈಪುರದಲ್ಲಿ ಸಾವನ್ನಪ್ಪಿದ ಪ್ರಕರಣವನ್ನೂ ಸೇರಿಸಿ ಸಾವಿನ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರ ಮೂಲದ 63 ವರ್ಷದ ವ್ಯಕ್ತಿಯೊಬ್ಬರು ಕೊರೋನಾ ವೈರಸ್​ಗೆ ಬಲಿಯಾಗಿದ್ದಾರೆ.ಅವರು ಮಾ. 1 ರಂದು ಕೊರೋನಾ ಶಂಕೆಯಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲೂ ಕೊರೊನಾ ವ್ಯಾಪಕವಾಗಿ ಹರಡಿದ್ದು  ಭಾನುವಾರ ಒಂದೇ ದಿನ 10 ಮಂದಿಗೆ ಸೋಂಕು ದೃಢವಾಗಿದ್ದು, ಒಟ್ಟು 74 ಮಂದಿಗೆ ಸೋಂಕು ಇರುವುದು  ದೃಢವಾಗಿದೆ.

ಇದೀಗ  ಬಿಹಾರಾದ 38 ವರ್ಷದ ಯುವಕ ಪಾಟ್ನಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.  ಇವರು ಕತಾರ್ ಪ್ರವಾಸ ಮಾಡಿದ್ದರು.

ಭಾರತದಲ್ಲಿ ಒಟ್ಟು 335 ಮಂದಿಗೆ ಸೋಂಕು ಇರುವುದು  ದೃಢವಾಗಿದೆ.  ಪ್ರಪಂಚದಲ್ಲಿ  ಒಟ್ಟು 3,05,066 ಪ್ರಕರಣ ಪತ್ತೆಯಾಗಿದ್ದರೆ ಒಟ್ಟು 12,987 ಮಂದಿ ಸಾವನ್ನಪ್ಪಿದ್ದಾರೆ.  ಈಚೆಗೆ ವಾರದಿಂದ ಪ್ರಪಂಚದಲ್ಲಿ ಪ್ರತೀ ದಿನ 30,000 ಪ್ರಕರಣ ಹೆಚ್ಚಾಗುತ್ತಿದೆ. ಕೊರೊನಾ ಕಾರಣದಿಂದ 1 ಬಿಲಿಯನ್ ಜನರು ಲಾಕ್ ಡೌನ್ ಆಗಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಚೀನಾದಲ್ಲಿ  ವೈರಸ್ ಹರಡುವುದು  ಕಡಿಮೆಯಾಗಿದೆ ಎಂದು ಚೀನಾ ಘೋಷಿಸಿಕೊಂಡ ಬೆನ್ನಲ್ಲೇ ಭಾನುವಾರದಂದು  46 ಹೊಸ ಪ್ರಕರಣ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕುವೈಟ್ ನಲ್ಲಿ ಕರ್ಫ್ಯೂ ಘೋಷಣೆ ಮಾಡಲಾಗಿದ್ದರೆ , ಇಟಲಿಯಲ್ಲಿ  ನಿನ್ನೆ ಒಂದೇ ದಿನ 793 ಮಂದಿ ಸಾವನ್ನಪ್ಪಿದ್ದಾರೆ , ಇಲ್ಲಿ ಕೊರೊನಾ ಪ್ರಕರಣದಲ್ಲಿ  ಏರಿಕೆ ಕಂಡುಬರುತ್ತಿದೆ.  ಯು ಎಸ್ , ಸ್ಪೇನ್ , ಜರ್ಮನಿ , ಫ್ರಾನ್ಸ್ , ಯು ಕೆ , ಸ್ವಿಜರ್ ಲ್ಯಂಡ್ ನಲ್ಲಿ  ಕೊರೊನಾ ಪ್ರಕರಣ ಹೆಚ್ಚುತ್ತಿದೆ.

 

 

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 26-05-2026 | ಕರ್ನಾಟಕದಲ್ಲಿ ಇನ್ನೂ 2-3 ದಿನ ಗುಡುಗು ಮಳೆ ಸಾಧ್ಯತೆ: ಜೂನ್ 6-8ರೊಳಗೆ ಮುಂಗಾರು ಪ್ರವೇಶ ನಿರೀಕ್ಷೆ
May 26, 2026
4:03 PM
by: ಸಾಯಿಶೇಖರ್ ಕರಿಕಳ
ಬೇಸಿಗೆಯಲ್ಲಿ ನಿಮ್ಮ ಕಿಡ್ನಿಯನ್ನು ಕಾಪಾಡಿ..! ಮೂತ್ರಪಿಂಡದ ಕಲ್ಲು ಸಮಸ್ಯೆ ಏಕೆ ಹೆಚ್ಚುತ್ತಿದೆ?
May 23, 2026
7:12 AM
by: ಡಾ.ಆದಿತ್ಯ ಭಟ್‌, ಚಣಿಲ, BHMS
ಮಳೆಗಾಲ ಆರಂಭ- ಜೂನ್‌ 1ರಿಂದ ರಸ್ತೆ, ಗುಡ್ಡ, ಮಣ್ಣು ಅಗೆತ ಕಾಮಗಾರಿಗೆ ನಿರ್ಬಂಧ – ನಗರಪಾಲಿಕೆ ಎಚ್ಚರಿಕೆ
May 23, 2026
6:45 AM
by: ಮಿರರ್‌ ಡೆಸ್ಕ್
ಅಸ್ಸಾಂನಲ್ಲಿ ಭಾರೀ ಅಕ್ರಮ ಅಡಿಕೆ ವಶ : ಡಿಆರ್‌ಐ ದಾಳಿ, 60 ಸಾವಿರ ಕೆಜಿ ವಿದೇಶಿ ಅಡಿಕೆ ಜಪ್ತಿ
May 22, 2026
8:17 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror