ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ ಐದು ವರ್ಷಗಳಿಂದ ಡಾ.ಆದಿತ್ಯ ಭಟ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ (Shree Homoeocare) ಇದೀಗ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ನೂತನವಾಗಿ ಚಣಿಲ ಹೋಮಿಯೋಪಥಿ ಕ್ಲಿನಿಕ್ (CHANILA HOMOEOPATHY CLINIC) ಎಂಬ ಹೆಸರಿನಲ್ಲಿ ಕಾರ್ಯಾರಂಭಿಸಿದೆ.
ಗುತ್ತಿಗಾರಿನ ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ ಆರಂಭಗೊಂಡಿರುವ ಕ್ಲಿನಿಕ್ನ ಉದ್ಘಾಟನೆಯನ್ನು ವಳಲಂಬೆಯ ಅರ್ಚಕರಾದ ಮಹಾಬಲೇಶ್ವರ ಭಟ್ ನೆರವೇರಿಸಿದರು. ಉದ್ಘಾಟನೆಗೂ ಮುನ್ನ ಬೆಳಿಗ್ಗೆ ಗಣಹೋಮ ನೆರವೇರಿಸಲಾಯಿತು. ಬಳಿಕ ವಿಧಿವಿಧಾನಗಳೊಂದಿಗೆ ಕ್ಲಿನಿಕ್ ಉದ್ಘಾಟನೆಗೊಂಡಿತು.
ಈ ಸಂದರ್ಭದಲ್ಲಿ ಚಂದ್ರಶೇಖರ ಭಟ್ ಚಣಿಲ ಹಾಗೂ ಸುಶೀಲಾ (ತಂದೆ-ತಾಯಿ), ಶಿವರಾಮ್ ಕರುವಜೆ, ಸುಬ್ರಹ್ಮಣ್ಯ ಭಟ್ ಚಣಿಲ, ತಿರುಮಲೇಶ್ವರ ಭಟ್, ಸತ್ಯನಾರಾಯಣ ಚಣಿಲ, ಶಕುಂತಳಾ ಭಟ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಡಾ.ಆದಿತ್ಯ ಭಟ್ ಚಣಿಲ ಅವರ ಕ್ಲಿನಿಕ್ ಇದೀಗ ಗುತ್ತಿಗಾರಿನಲ್ಲಿ ಹೊಸ ಹೆಸರಿನೊಂದಿಗೆ ಕಾರ್ಯನಿರ್ವಹಿಸಲಿದೆ. ತಮ್ಮ ಮೇಲಿನ ಪ್ರೀತಿ, ವಿಶ್ವಾಸ ಮತ್ತು ಬೆಂಬಲವನ್ನು ಮುಂದುವರಿಸುವಂತೆ ಕ್ಲಿನಿಕ್ನವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕ್ಲಿನಿಕ್ ವಿವರಗಳು: ಚನಿಲ ಹೋಮಿಯೋಪಥಿ ಕ್ಲಿನಿಕ್ (CHANILA HOMOEOPATHY CLINIC), ಗುತ್ತಿಗಾರು.
- ಸಮಯ: ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ , ಸಂಜೆ: 4.30ರಿಂದ 7 ಗಂಟೆಯವರೆಗೆ, ವಾರದ ರಜೆ: ಶನಿವಾರ
- ಸಂಪರ್ಕ: 8861210292 / 8073052529
Shree Homoeocare, which served patients in Subrahmanya for five years, has relocated to Guthigaru and will now operate under the new name Chanila Homoeopathy Clinic. Located at SMSG Complex, Guthigaru, the clinic was inaugurated by Mahabaleshwara Bhat, priest of Valalambe, following a Ganahoma ceremony in the morning. The clinic will be open from 9:30 AM to 12:30 PM and 4:30 PM to 7:00 PM, with Saturday as the weekly holiday. For enquiries, contact 8861210292 or 8073052529.


