ನವದೆಹಲಿ :ಯುವಶಕ್ತಿಯನ್ನು ಹೊಂದಿರುವ ಭಾರತದ ಮೊದಲ ಮಂತ್ರ ಆತ್ಮನಿರ್ಭರ ವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕೆಂಪುಕೋಟೆಯಲ್ಲಿ 74ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ದೇಶವನ್ನುದ್ದೇಶಿಸಿ ಮಾತನಾಡಿದರು. ಭಾರತ ಸಾಮೂಹಿಕ ಶಕ್ತಿಯನ್ನು ಹೊಂದಿದೆ. ಎಲ್ಲಾ ಕ್ಷೇತ್ರದಲ್ಲೂ, ಎಲ್ಲಾ ಸಂಗತಿಗಳಲ್ಲೂ ಭಾರತದ ಸಮೂಹ ಶಕ್ತಿ ಜಾಗೃತಗೊಳಿಸಿದೆ. ಕೊರೋನಾ ವಿರುದ್ಧ ಸಾಮೂಹಿಕ ಶಕ್ತಿ ತೋರಿದೆ. ಪ್ರತಿಯೊಬ್ಬ ಭಾರತೀಯರು ಕೊರೋನಾ ಸಂದರ್ಭದಲ್ಲಿ ಆತ್ಮ ನಿರ್ಭರ ಸಂಕಲ್ಪ ಕೈಗೊಳ್ಳಲಾಗಿದೆ. ಭಾರತ ಆತ್ಮನಿರ್ಭರ ಆಗಲೇಬೇಕಿದೆ. ಭಾರತ ಒಂದು ಬಾರಿ ನಿರ್ಧಾರ ಕೈಗೊಂಡರೇ, ಅದನ್ನು ಸಾಧಿಸಿಯೇ ತೀರುತ್ತದೆ ಎಂದು ಹೇಳಿದರು.ಆತ್ಮನಿರ್ಭರ ಭಾರತ ನಮಗೆಲ್ಲರಿಗೂ ದೃಢ ಸಂಕಲ್ಪವಾಗಬೇಕು. ಆತ್ಮನಿರ್ಭರ ಭಾರತವನ್ನು ನಮ್ಮ ರೈತರು ಸಾಬೀತುಪಡಿಸಿದ್ದಾರೆ ಎಂದು ಪ್ರಧಾನಿಗಳು ಕೊಂಡಾಡಿದರು.
ಕೊರೋನಾ ಸಂಕಷ್ಟ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಸುದೀರ್ಘ ಸೇವೆ ಸಲ್ಲಿಸುತ್ತಿದ್ದಾರೆ. ಭಾರತದಲ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೊರೋನಾ ವಾರಿಯರ್ಸ್ ಸೇವೆ ಬಹುಮುಖ್ಯವಾಗಿದೆ ಎಂದು ವಾರಿಯರ್ಸ್ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ನೆನಪಿಸಿದರು.
ಚೀನೀ ಸರಕುಗಳ ಆಮದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ಇತರ ದೇಶಗಳಿಂದ ಸರಕುಗಳ ಆಮದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಇನ್ನು ಮುಂದೆ ನಾವು ನಮ್ಮ ಸ್ವಂತ ಸರಕುಗಳನ್ನು ನಾವೇ ತಯಾರಿಸಿಕೊಳ್ಳೋಣ. ಭಾರತವು ಗುಣಮಟ್ಟದ ಸರಕುಗಳ ಆಶ್ರಯ ತಾಣವೆಂದು ಮತ್ತೊಮ್ಮೆ ಸಾಬೀತುಪಡಿಸೋಣ. ಒಂದು ಕಾಲದಲ್ಲಿ ಭಾರತೀಯ ಸರಕುಗಳನ್ನು ಪ್ರಪಂಚದಾದ್ಯಂತ ಗುಣಮಟ್ಟದ ವಸ್ತುಗಳೆಂದು ಪೂಜಿಸಲಾಗುತ್ತಿತ್ತು. ಭಾರತೀಯ ಸರಕುಗಳಿಗೆ ಹಿಂದಿನ ವೈಭವವನ್ನು ತರಲು ನಾವು ಮತ್ತೆ ಪ್ರಯತ್ನಿಸೋಣ. ಕೊರೋನಾ ಕಷ್ಟದ ಸಮಯದಲ್ಲೂ ಹೊಸ ಹಾದಿಯನ್ನು ಹುಡುಕೋಣ ಎಂದರು.
ಅಡಿಕೆ ಹಾಳೆತಟ್ಟೆ ಅಮೇರಿಕಾದಲ್ಲಿ ನಿಷೇಧ ಹೇರಲಾಗುತ್ತಿದೆ. ಹೀಗಾಗಿ ಭಾರತದಿಂದ ಸದ್ಯ ಅಮೇರಿಕಾಕ್ಕೆ ಹಾಳೆತಟ್ಟೆ…
ಈಗಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಗೆ ಈಗ…
ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…
ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…
ಮುಂಬರುವ ಜೂನ್ 30 ರೊಳಗಾಗಿ ಜಿಲ್ಲೆಯಲ್ಲಿ ಬಾಕಿ ಇರುವ ಕಂದಾಯ ಗ್ರಾಮಗಳ ರಚನೆಗೆ…
ಹೆಚ್ಚಿನ ವೈಯಕ್ತಿಕ ಸಲಹೆಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490