ಬೆಳ್ಳಾರೆ: ರೂಪಕವು ಒಂದು ದೃಶ್ಯಕಾವ್ಯ. ಈ ಕಾವ್ಯದ ಮೂಲಕ ಭಾರತೀಯ ಪರಂಪರೆಯ ಸತ್ವವನ್ನು ಪ್ರಸ್ತುತಪಡಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿಗೆ ನೃತ್ಯರೂಪಕದ ಕೊಡುಗೆ ಅಪಾರ ಎಂದು ಕವಿ ಸುಬ್ರಾಯ ಚೊಕ್ಕಾಡಿ ಹೇಳಿದರು.
ಅವರು ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆದ ವೈಷ್ಣವಿ ನೃತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಅಶ್ವಿನಿ ಕೋಡಿಬೈಲು ಅವರಿಂದ ರಚಿತವಾದ “ಶಬರಿಮಲೆ ಸ್ವಾಮಿ ಅಯ್ಯಪ್ಪ” ನೃತ್ಯರೂಪಕ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಯಾವತ್ತೂ
ಬರವಣಿಗೆ ಸತ್ಯವನ್ನು ಶೋಧಿಸುವ ದಾರಿಯಾಗಿದೆ. ಸಾಹಿತ್ಯವು ರಂಗದ ಮೇಲೆ ಪ್ರದರ್ಶನಗೊಂಡಾಗ ಮಾತ್ರ ಜನಮನ ಗೆದ್ದು ಸಾರ್ಥಕತೆ ಪಡೆದುಕೊಳ್ಳುತ್ತದೆ. ಹೀಗಾಗಿ ನೃತ್ಯರೂಪಕಗಳು ಜನರು ಕಾಣುವಂತಾಗಬೇಕು ಎಂದರು.
ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ ಕೃತಿ ಪರಿಚಯಿಸಿದರು. ಕಾರ್ಯಕ್ರಮ ಉದ್ಘಾಟಿಸುವುದರೊಂದಿಗೆ ಅಧ್ಯಕ್ಷತೆಯನ್ನು ಇನ್ಸ್ಟಿಟ್ಯೂಟ್ ಆಫ್ ಆಟ್ರ್ಸ್ ಆಂಡ್ ಕಲ್ಚರ್ ಸಂಸ್ಥೆಯ ನೃತ್ಯಗುರು ನಯನ ವಿ.ರೈ ವಹಿಸಿದ್ದರು. ವೇದಿಕೆಯಲ್ಲಿ ಕವಯತ್ರಿ ಅಶ್ವಿನಿ ಕೋಡಿಬೈಲು ಉಪಸ್ಥಿತರಿದ್ದರು.
ವೈಷ್ಣವಿ ನಾಟ್ಯಾಲಯ ನಿರ್ದೇಶಕಿ ಯೋಗೀಶ್ವರಿ ಜಯಪ್ರಕಾಶ್ ಸ್ವಾಗತಸಿ ಪ್ರಸ್ತಾವನೆಗೈದರು. ಸ್ವಾತಿ ಕುರುಂಬುಡೆಲು ವಂದಿಸಿದರು. ಪ್ರದೀಪ್‍ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಸಿದರು.
ಸಭಾಕಾರ್ಯಕ್ರಮದ ನಂತರ ವಿವಿಧ ಶೈಲಿಯ ಭರತನಾಟ್ಯ ನೃತ್ಯ ಪ್ರರ್ಶನಗೊಂಡಿತು.
ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಕೊಠಡಿ ಬುಕ್ಕಿಂಗ್…
ಕೇಂದ್ರ ಸರ್ಕಾರ 2015ರಲ್ಲಿ ದೇಶೀಯ ಹಾಗೂ ಆಮದು ಯೂರಿಯಾಗೆ ಬೇವು ಲೇಪನ ಕಡ್ಡಾಯಗೊಳಿಸುವ…
ಮನೆತನವನ್ನು ಕಟ್ಟುವುದು ಕೇವಲ ಆರ್ಥಿಕ ಸೌಲಭ್ಯಗಳನ್ನು ಒದಗಿಸುವುದಲ್ಲ; ಕುಟುಂಬದ ಸದಸ್ಯರ ನಡುವೆ ಪ್ರೀತಿ,…
ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಸುಮಾರು ₹1,022 ಕೋಟಿ ಮೌಲ್ಯದ 3,103 ಮೆಟ್ರಿಕ್ ಟನ್…
ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…
ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…