Advertisement
ಸುದ್ದಿಗಳು

ಅನ್ನವೇ ಜೀವನ, ಅನ್ನವೇ ಮೃತ್ಯು

Share

ಪ್ರತಿಯೊಬ್ಬ ಮನುಷ್ಯನಿಗೂ ಜೀವಿತಾವಧಿಯಲ್ಲಿ ಎಷ್ಟು ಉಸಿರಾಟ ಮತ್ತು ಎಷ್ಟು ಆಹಾರ ಸೇವನೆ ಎಂಬುದು ವಿಧಿಯಲ್ಲೇ ನಿಗದಿಯಾಗಿರುತ್ತದೆ. ದೀರ್ಘ ಉಸಿರಾಟದಿಂದ ಆಯುಷ್ಯ ವೃದ್ಧಿಸಬಹುದು. ಆದರೆ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುತ್ತಾ ಹೋದಂತೆ ಮನುಷ್ಯ ಮೃತ್ಯುವಿನತ್ತ ವೇಗವಾಗಿ ಸಾಗುತ್ತಾನೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ  ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಆವರಣದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಉಪನ್ಯಾಸ ಮಾಲಿಕೆಯಡಿ ಪ್ರವಚನ ನೀಡಿದ ಅವರು, ಆಹಾರದ ಮಹತ್ವ, ಭೋಜನದ ಸಂಸ್ಕೃತಿ ಹಾಗೂ ಭಾರತೀಯ ಶಾಸ್ತ್ರಗಳ ಸಂದೇಶವನ್ನು ವಿವರಿಸಿದರು.

ಅನ್ನವೇ ಜೀವನ, ಅನ್ನವೇ ಮೃತ್ಯು :  “ಅನ್ನವೇ ಜೀವನಕ್ಕೂ ಕಾರಣ, ಅನ್ನವೇ ಮೃತ್ಯುವಿಗೂ ಕಾರಣ” ಎಂದು ಭಾರತೀಯ ಶಾಸ್ತ್ರಗಳು ತಿಳಿಸಿವೆ. ಆಹಾರವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅದು ಆರೋಗ್ಯ ಮತ್ತು ಆಯುಷ್ಯಕ್ಕೆ ಪೂರಕವಾಗುತ್ತದೆ. ಅದೇ ತಪ್ಪಾಗಿ ಬಳಸಿದರೆ ಅನಾರೋಗ್ಯ ಮತ್ತು ಸಾವಿಗೆ ಕಾರಣವಾಗುತ್ತದೆ ಎಂದು ಶ್ರೀಗಳು ಹೇಳಿದರು.

ಬೋಧಾಯನರ ಧರ್ಮಸೂತ್ರಗಳು, ಆದಿ ಶಂಕರಾಚಾರ್ಯರ ಪ್ರಪಂಚಸಾರ ತಂತ್ರ, ಚರಕ, ಸುಶ್ರುತ ಸಂಹಿತೆಗಳು ಹಾಗೂ ಉಪನಿಷತ್ತುಗಳಲ್ಲಿಯೂ ಭೋಜನವನ್ನು ಯಜ್ಞ ಎಂದು ಕರೆದಿರುವುದನ್ನು ಅವರು ಉಲ್ಲೇಖಿಸಿದರು.

ಭೋಜನವೂ ಒಂದು ಯಜ್ಞ :  ನಮ್ಮೊಳಗಿನ ಜಠರಾಗ್ನಿಯೇ ಅಗ್ನಿ, ನಾವು ಸೇವಿಸುವ ಆಹಾರವೇ ಅದಕ್ಕೆ ಅರ್ಪಿಸುವ ಹವಿಸ್ಸು. ಆಹಾರವನ್ನು ನಮಗಾಗಿ ಅಲ್ಲ, ನಮ್ಮೊಳಗಿನ ಪರಮಾತ್ಮನಿಗೆ ಸಮರ್ಪಿಸುತ್ತಿದ್ದೇವೆ ಎಂಬ ಭಾವದಿಂದ ಸೇವಿಸಿದಾಗ ಅದು ಯಜ್ಞವಾಗುತ್ತದೆ ಎಂದು ಶ್ರೀಗಳು ಹೇಳಿದರು.

ಸರಿಯಾದ ಸಮಯ, ಸರಿಯಾದ ಪ್ರಮಾಣ, ಸರಿಯಾದ ಆಹಾರ ಹಾಗೂ ಶುದ್ಧ ಭಾವದಿಂದ ಮಾಡುವ ಭೋಜನವು ಅಗ್ನಿಹೋತ್ರದಷ್ಟೇ ಪವಿತ್ರವಾಗುತ್ತದೆ ಎಂದು ಅವರು ವಿವರಿಸಿದರು.

ಆಹಾರ ಸೇವನೆಗೆ ಶಾಸ್ತ್ರೋಕ್ತ ಕ್ರಮ : ಆಹಾರ ಸೇವಿಸುವಾಗ ಭಾವವೇ ಪ್ರಮುಖವಾಗಿದ್ದು, ಯಾವ ಕಾಲದಲ್ಲಿ, ಯಾವ ಸ್ಥಳದಲ್ಲಿ, ಯಾವ ಪ್ರಮಾಣದಲ್ಲಿ ಮತ್ತು ಯಾವ ಆಹಾರವನ್ನು ಸೇವಿಸಬೇಕು ಎಂಬ ಅರಿವಿನೊಂದಿಗೆ ಭೋಜನ ಮಾಡಿದರೆ ಅದು ಯಜ್ಞಕ್ಕಿಂತ ಕಡಿಮೆಯಲ್ಲ ಎಂದು ತಿಳಿಸಿದರು.

ಅತಿಥಿಗಳು, ಗರ್ಭಿಣಿಯರು, ಮಕ್ಕಳು, ವೃದ್ಧರು ಹಾಗೂ ಸಂಕಷ್ಟದಲ್ಲಿರುವವರಿಗೆ ಮೊದಲು ಆಹಾರ ನೀಡಬೇಕು. ಬಳಿಕವೇ ನಾವು ಊಟ ಮಾಡಬೇಕು ಎಂಬುದು ಭಾರತೀಯ ಸಂಸ್ಕೃತಿಯ ಶ್ರೇಷ್ಠ ಮೌಲ್ಯ ಎಂದು ಅವರು ಹೇಳಿದರು.

ರೂಪಾಂತರಗೊಂಡ ಗೋಧಿ ಬಗ್ಗೆ ಆತಂಕ :  ಇಂದಿನ ಗೋಧಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿದ್ದು, ಕೃಷಿಯಲ್ಲಿ ಕ್ರಿಮಿಗಳಿಂದ ರಕ್ಷಿಸುವ ಉದ್ದೇಶದಿಂದ ಹಲವು ರೂಪಾಂತರಗಳಿಗೆ ಒಳಗಾಗಿದೆ ಎಂದು ಶ್ರೀಗಳು ಹೇಳಿದರು.

“ಇಂದು ಮಾರುಕಟ್ಟೆಯಲ್ಲಿ ದೊರೆಯುವ ಗೋಧಿ ಮನುಷ್ಯ ಸೇವನೆಗೆ ಸಂಪೂರ್ಣ ಯೋಗ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ” ಎಂದು ಅವರು ಅಭಿಪ್ರಾಯಪಟ್ಟರು.

ಗೋಧಿಯಿಂದ ತಯಾರಾಗುವ ಮೈದಾ ಇನ್ನಷ್ಟು ಹಾನಿಕಾರಕವಾಗಿದ್ದು, ಅದು ಜೀರ್ಣಾಂಗದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಆಧುನಿಕ ವಿಜ್ಞಾನವೂ ಹೇಳುತ್ತಿದೆ ಎಂದು ಅವರು ಉಲ್ಲೇಖಿಸಿದರು. ಜೀರ್ಣಕ್ಕೆ ಕಷ್ಟವಾಗುವ ಆಹಾರವನ್ನು ಸಾಧ್ಯವಾದಷ್ಟು ದೂರವಿಡಬೇಕು ಎಂದರು.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Jagadguru Shankaracharya Sri Raghaveshwara Bharathi Swamiji said that food determines both life and death, emphasizing moderation in eating and describing every meal as a sacred yajna when consumed with the right attitude. During his discourse at the Annabrahma Chaturmasya in Gokarna, he also expressed concern over the quality of modern wheat and refined flour (maida), urging people to choose easily digestible and wholesome food.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬರಪೀಡಿತ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿಗೆ 12 ತಿಂಗಳ ವಿಸ್ತರಣೆ

ಬರಪೀಡಿತ ಎಂದು ಘೋಷಿಸಿರುವ ರಾಜ್ಯದ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿ ಅವಧಿಯನ್ನು…

4 hours ago

25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು

ಇಂಡೋನೇಷ್ಯಾದ ಸುಲವೆಸಿಯಲ್ಲಿ ಪತ್ತೆಯಾದ ಸುಮಾರು 25,000 ವರ್ಷಗಳ ಹಿಂದಿನ ಮಾನವ ಹಲ್ಲುಗಳಲ್ಲಿ ಅಡಿಕೆ…

12 hours ago

“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ

‘ಹನುಮಾನ್ ಅಂಶ್’ ಸಿನಿಮಾ 40ನೇ ದಿನವೂ ₹8.25 ಕೋಟಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ…

14 hours ago

ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ

ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…

20 hours ago

ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…

21 hours ago

ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?

ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್‌ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…

1 day ago