ಅನುಕ್ರಮ

ಭಾರತ್ ಮಾತಾಕೀ ಜೈ…..

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಎಲ್ಲಾ ಹಬ್ಬಗಳಂತಲ್ಲ. ಇದಕ್ಕೆ ಜಾತಿ, ಧರ್ಮ ಗಳ ಹಂಗಿಲ್ಲ. ದೇಶದ ಎಲ್ಲರೂ ಆಚರಿಸಿ ಸಂಭ್ರಮಿಸುವ ಹಬ್ಬ, ಬಿಡುಗಡೆಯ ಹಬ್ಬ, ವಿದೇಶಿಯರ ಹಿಡಿತದಿಂದ ಬಿಡುಗಡೆಯಾದ ದಿನದ ನೆನಪಿನ ಹಬ್ಬ. ಅದುವೇ ಸ್ವಾತಂತ್ರ್ಯ ದಿನಾಚರಣೆಯ ಹಬ್ಬ. ಆಗಸ್ಟ್ 15 ರಂದು ದೇಶದೆಲ್ಲೆಡೆ ಸಂತೋಷದಿಂದ‌ ಈ ದಿನವನ್ನುಆಚರಿಸಲಾಗುತ್ತ ದೆ.

Advertisement
Advertisement
ಈ ಬಾರಿ ಎಂದಿನಂತಿಲ್ಲ ಸ್ವಾತಂತ್ರ್ಯ ದಿನಾಚರಣೆ.  ಮಳೆಯ ತೀವ್ರತೆಗೆ ನಲುಗಿದ ರಾಜ್ಯಗಳು ,ಇದರ ನಡುವೆ ಸ್ವಾತಂತ್ರ್ಯ ದಿನಾಚರಣೆ . ಮತ್ತೊಂದೆಡೆ  ಕಾಶ್ಮೀರ ಕಣಿವೆಯಲ್ಲಿ ಹಾರಲಿರುವ ತಿರಂಗ. ಅಲ್ಲಿ 1947 ರಲ್ಲಿ ಹಾರಿದ ಧ್ವಜ ಮತ್ತೆ ಈ ಬಾರಿಯೇ ಹಾರುತ್ತಿರುವುದು. ದೇಶದೆಲ್ಲೆಡೆ  ರಾಷ್ಟ್ರಧ್ವಜವನ್ನು ಹಾರಿಸಿ, ರಾಷ್ಟ್ರ ಗೀತೆಯನ್ನು ಹಾಡಿ  ನಮ್ಮ ನಾಡು ನುಡಿಗೆ ಗೌರವಿಸುತ್ತಾ ಎಲ್ಲರೂ ಆನಂದಿಸುತ್ತಾರೆ.
ಆಗಸ್ಟ್ 15 ಬಂತೆಂದರೆ ನಮ್ಮ ದೇಶ ಸಂಭ್ರಮದಲ್ಲಿ ಮುಳುಗೇಳುತ್ತದೆ. ಬ್ರಿಟಿಷ್ ರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನಾಚರಣೆಯ ಉತ್ಸವಕ್ಕೆ ಸಂಬಂಧಿಸಿದ ಖುಷಿ . ಯಾವತ್ತೂ ಸ್ವಾತಂತ್ರ್ಯ ಯೋತ್ಸವೆಂದರೆ ಖುಷಿಯೇ, ಆದರೆ ಈ ಬಾರಿ ಇದು ದುಪ್ಪಟ್ಟು. ಯಾಕೆಂದರೆ ೭೩ನೇಯ ಸ್ವಾತಂತ್ರ್ಯಯೋತ್ಸವಕ್ಕೆ ನಮ್ಮ ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿಯವರು ಭರ್ಜರಿ ಉಡುಗೊರೆ ಯನ್ನು ದೇಶದ ಜನತೆಗೆ ನೀಡಿದ್ದಾರೆ. ಕಾಶ್ಮೀರ ಕಣಿವೆಯಲ್ಲಿದ್ದ ವಿಶೇಷ ಸ್ಥಾನ ಮಾನವನ್ನು ರದ್ದು ಮಾಡಿ ಅಲ್ಲಿನ ಜನರಿಗೆ ಸ್ವಾತಂತ್ರ್ಯ ದ ನಿಜವಾದ ಅನುಭವವನ್ನು ಪಡೆಯು ಅವಕಾಶಕ್ಕೆ ಅಡಿಪಾಯ ಹಾಕಿದ್ದಾರೆ. ಇನ್ನೂ ಮುಂದಿರುವ ಅಡ್ಡಿಗಳ ನಿವಾರಣೆಯಾದರೆ ಹಲವು ವರ್ಷಗಳ ಕನಸು ನನಸಾದಂತೆ.
ಆಗಸ್ಟ್ 15 ರಂದು ಪ್ರಧಾನ ಮಂತ್ರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ದೇಶವನ್ನು ಉದ್ದೇಶಿಸಿ ಮಾಡುವ ಭಾಷಣ ಮಹತ್ವವಾದು ದಾಗಿದೆ. ದೇಶದ ಮುಂದಿರುವ ಸವಾಲುಗಳು, ಸಾಧನೆಗಳು, ಯೋಜನೆಗಳ ಅನಾವರಣ ಪ್ರಧಾನ ಮಂತ್ರಿಯವರ ಭಾಷಣದಲ್ಲಿ ಉಲ್ಲೇಖವಾಗುತ್ತವೆ. ಪ್ರತೀ ಬಾರಿಯಂತೆ ಈ ಬಾರೀಯೂ ಹಲವು ನಿರೀಕ್ಷೆಗಳೊಂದಿಗೆ ಪ್ರಧಾನ ಮಂತ್ರಿ ಮೋದಿಯವರ ಭಾಷಣವನ್ನು ಇಡೀ ಭಾರತ ಇದಿರು ನೋಡುತ್ತಿದೆ.
ನಾವೆಲ್ಲರೂ ಒಂದೇ. ನಮ್ಮಲ್ಲಿ ಭಾಷೆ,  ವೇಷ ಭೂಷಣ, ಪದ್ಧತಿ , ಆಚರಣೆಗಳಲ್ಲಿ ‌ವಿಭಿನ್ನತೆ ಇರಬಹುದು. ಆದರೆ ನಾವೆಲ್ಲರೂ ಒಂದೇ  ಭಾರತೀಯರು ಎಂದು ಒಕ್ಕೋರಲಿಂದ ಹೇಳುವ ಸಮಯ ಬಂದಿದೆ. ದುಷ್ಟಶಕ್ತಿಗಳನ್ನು ಎದುರಿಸು ವಲ್ಲಿ ಎಲ್ಲರೂ ಒಗ್ಗೂಡುವ ಸಂಧರ್ಭ ಎದುರಾಗಿದೆ. ಈ ಕಾರ್ಯ ಕ್ಕೆ ಕೈ ಜೋಡಿಸುತ್ತಾ ಒಂದಾಗಿ ಹೇಳೋಣ’ ಭಾರತ್ ಮಾತಾಕಿ ಜೈ’
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಕರೆಂಟ್ ಹೊದ ಕೂಡ್ಲೆ ಬೊಬ್ಬೆ ಹೊಡೆಯೋದು ಯಾಕೆ..!?

ಎಂತ ಮಾರ್ರೇ.... ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ…

7 hours ago

ಮಳೆ Update | ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆ | ಹಲವು ಕಡೆ 100 ಮಿಮೀಗಿಂತಲೂ ಅಧಿಕ ಮಳೆ | ಉಡುಪಿಯಲ್ಲಿ 164 ಮಿಮೀ ಮಳೆ |

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…

7 hours ago

ಬಿತ್ತನೆ ಬೀಜ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ

ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…

10 hours ago

ರೈತರು ಉತ್ತಮ ಇಳುವರಿ ಪಡೆಯಲು ಸಂಯುಕ್ತ ರಸಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಸೂಚನೆ

ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…

10 hours ago

ಬದುಕು ಪುರಾಣ | ಎಲ್ಲರೊಳಗೂ ಏಕಲವ್ಯನಿದ್ದಾನೆ!

 ‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…

10 hours ago

ಮನೆಯಲ್ಲಿ ಸಂಪತ್ತು, ಸಂತೋಷ ಹೆಚ್ಚಾಗಲು ಮುಖ್ಯ ದ್ವಾರ ಹೀಗಿರಲಿ…

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

10 hours ago