ಭಾರೀ ಮಳೆ : ಶಾಲೆ – ಕಾಲೇಜುಗಳಿಗೆ ರಜೆ

August 6, 2019
12:12 AM

ಪುತ್ತೂರು: ಸೋಮವಾರ ಹಾಗೂ ಮಂಗಳವಾರ ಕೂಡಾ ಭಾರೀ ಮಳೆಯಾಗುವ ನಿರೀಕ್ಷೆ ಇರುವುದರಿಂದ ಪುತ್ತೂರು, ಕಡಬ, ಬೆಳ್ತಂಗಡಿ ತಾಲೂಕಿನ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜುಗಳಿಗೆ ಒಂದು ದಿನದ ರಜೆ ನೀಡುವಂತೆ ಪುತ್ತೂರು ಸಹಾಯಕ ಕಮೀಶನರ್ ಎಚ್.ಕೆ.ಕೃಷ್ಣಮೂರ್ತಿ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ.  ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಕಾಲೇ ಜುಗಳಿಗೆ ರಜೆ ನೀಡಲಾಗಿದ್ದು ಪದವಿ ಹಾಗೂ ನಂತರದ ತರಗತಿಗಳು ಎಂದಿನಂತೆ ನಡೆಯಲಿದೆ ಎಂದು ಸಹಾಯಕ ಕಮೀಶನರ್ ಅವರ ಪ್ರಕಟಣೆ ತಿಳಿಸಿದೆ.

ಸೋಮವಾರ ಬೆಳಗ್ಗಿನಿಂದಲೇ ಭಾರೀ ಮಳೆಯಾಗುತ್ತಿದೆ. ಮಳೆಯ ಕಾರಣದಿಂದ ವಿವಿದೆಡೆ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಗ್ರಾಮೀಣ ಭಾಗದ ಹೊಳೆ ಹಾಗೂ ತೋಡುಗಳಲ್ಲಿ    ಈ ವರ್ಷ ಮೊದಲ ಬಾರಿಗೆ ನೀರು ತುಂಬಿ ಹರಿದಿದೆ. ಈಗಲೂ ಉತ್ತಮ ಮಳೆಯಾಗುತ್ತಿದ್ದು ಹವಾಮಾನ ಇಲಾಖೆಯ ಪ್ರಕಾರ ಮಂಗಳವಾರವೂ ಉತ್ತಮ ಮಳೆಯಾಗಲಿದೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂಗಾರು ಆರಂಭ ಭರವಸೆ ಮೂಡಿಸಿದರೂ ಎಲ್‌ನಿನೊ ಆತಂಕ…! 2026 ರ ಮಳೆಯ ಭವಿಷ್ಯ ನಿರ್ಧರಿಸುವ ಹವಾಮಾನ ಸಂಕೇತಗಳೇನು?
June 10, 2026
6:47 AM
by: ದ ರೂರಲ್ ಮಿರರ್.ಕಾಂ
₹2.34 ಕೋಟಿ ಮೌಲ್ಯದ ಅಡಿಕೆ ಜಪ್ತಿ – ಶಿವಮೊಗ್ಗದ 8 ಮಂದಿಯ ವಿರುದ್ಧ ಕೇಸ್..!
June 10, 2026
6:39 AM
by: ಮಿರರ್‌ ಡೆಸ್ಕ್
ಹಲಸು ಅಭಿವೃದ್ಧಿಗೆ ರಾಷ್ಟ್ರೀಯ ಮಂಡಳಿ ಸ್ಥಾಪಿಸಲು ಮಾಜಿ ಪ್ರಧಾನಿ ದೇವೇ ಗೌಡ ಒತ್ತಾಯ
June 10, 2026
6:32 AM
by: ದ ರೂರಲ್ ಮಿರರ್.ಕಾಂ
ಕಾಪುವಿನಲ್ಲಿ ಆಹ್ವಾನಿತರ ಮುಕ್ತ ಚೆಸ್ ಸ್ಪರ್ಧೆ ಯಶಸ್ವಿ – ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಆಯೋಜನೆ
June 9, 2026
11:58 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror