ವಿಶ್ವ ಚೆಸ್ ಚಾಂಪಿಯನ್‌ಷಿಪ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಹೋರಾಟ ಆರಂಭಿಸಿರುವ ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ. ಗುಕೇಶ್, ಉಜ್ಬೇಕಿಸ್ತಾನದ ಸವಾಲುಗಾರ ಜಾವೊಖಿರ್ ಸಿಂಧರೋವ್ ವಿರುದ್ಧ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ. ಪಂದ್ಯದ ಬಹುತೇಕ ಅವಧಿಯಲ್ಲಿ ಸಮಯದ ಒತ್ತಡ ಎದುರಿಸಿದರೂ ಕೊನೆಯ ಹಂತದಲ್ಲಿ ಅತ್ಯುತ್ತಮ ರಕ್ಷಣಾತ್ಮಕ ಆಟ ಪ್ರದರ್ಶಿಸಿ ಸೋಲಿನಿಂದ ಪಾರಾಗಿದ್ದಾರೆ.
ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದ ಕೊಲೊನಿಯಲ್ಲಿ ಮಂಗಳವಾರ ನಡೆದ 2026ರ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಸಿಂಧರೋವ್ ಬಿಳಿ ಕಾಯಿಗಳೊಂದಿಗೆ ಆಡಿದರೆ, ಹಾಲಿ ವಿಶ್ವ ಚಾಂಪಿಯನ್ ಗುಕೇಶ್ ಕಪ್ಪು ಕಾಯಿಗಳೊಂದಿಗೆ ಕಣಕ್ಕಿಳಿದರು. ಆರಂಭಿಕ ಹಂತದಲ್ಲಿ ಇಬ್ಬರೂ ಆಟಗಾರರು ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಎಂಟನೇ ನಡೆ ವೇಳೆಗೆ ರಾಣಿಗಳ ವಿನಿಮಯ ನಡೆದಿದ್ದರಿಂದ ಪಂದ್ಯವು ಸಂಕೀರ್ಣವಾಗಿ ಎಂಡ್‌ಗೇಮ್ ಪ್ರವೇಶಿಸಿತು. ಸುಮಾರು 15ನೇ ನಡೆಯಿಂದ ಗುಕೇಶ್ ಹೆಚ್ಚಿನ ಸಮಯ ತೆಗೆದುಕೊಳ್ಳಬೇಕಾಯಿತು. ಆದರೆ ಸಮಯದ ಒತ್ತಡದ ನಡುವೆಯೂ ಗುಕೇಶ್ ಸಮರ್ಥವಾಗಿ ರಕ್ಷಿಸಿಕೊಂಡರು.
ಈ ವಿಶ್ವ ಚಾಂಪಿಯನ್‌ಷಿಪ್ ಪಂದ್ಯಾವಳಿ ಡಿಸೆಂಬರ್ 12ರವರೆಗೆ ನಡೆಯಲಿದೆ.
India’s reigning world champion D. Gukesh began his title defence with a draw against Uzbekistan’s Javokhir Sindarov in the opening game of the 2026 World Chess Championship in Geneva.


