ಧರ್ಮಸ್ಥಳ: ಭಾಷೆ, ಲಿಪಿಯ ಬೆಳವಣಿಗೆಗೆ ಇರುವ ಸವಾಲುಗಳನ್ನು ನಿವಾರಿಸಲು ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳುವ ಇರಾದೆ ಸರಕಾರಕ್ಕಿದೆ. ಭಾಷೆಯ ಬಳಕೆ ಹೆಚ್ಚಬೇಕು. ಅಧ್ಯಯನ ಕೇಂದ್ರದ ಮೂಲಕ ಮೂರು ವರ್ಷಗಳಲ್ಲಿ ದೇಶಕ್ಕೇ ಮಾದರಿಯಾಗುವಂತೆ ಯೋಜನೆಯನ್ನೊಂದನ್ನು ರೂಪಿಸಲಾಗುವುದು.
ಕನ್ನಡ ಭಾಷೆಯ ಬೆಳವಣಿಗೆಗೆ ಐಟಿ ವಿಭಾಗದಿಂದ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ರಾಜ್ಯದ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಪ್ರಕಟಿಸಿದರು. ಧರ್ಮಸ್ಥಳ ಲಕ್ಷದೀಪೋತ್ಸವದ ಕೊನೆಯ ದಿನ ಮಂಗಳವಾರ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 87 ನೇ ಸಾಹಿತ್ಯ ಸಮ್ಮೇಳನವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕೇವಲ ಆರ್ಥಿಕ ಉನ್ನತಿಯಿಂದ ನಮ್ಮತನ ಉಳಿಯಲು ಸಾಧ್ಯವಿಲ್ಲ. ಇಂಗ್ಲೀಷ್ ವ್ಯಾಮೋಹದ ಮಧ್ಯೆ ಭಾಷೆ ಉಳಿಸಿಕೊಳ್ಳುವ ಪ್ರಯತ್ನ ಆಗಬೇಕಾಗಿದೆ. ಭಾಷೆ, ಸಂಸ್ಕೃತಿ ಬಿಟ್ಟು ಬಿಟ್ಟರೆ ನಮ್ಮತನ ಹೋದಂತೆ. ಇದು ಆಗಬಾರದು ಎಂಬ ಉದ್ದೇಶದಿಂದ ಇಂತಹ ಸಮ್ಮೇಳನ ಅಗತ್ಯವಾಗಿದೆ ಎಂದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಜನಪದ ವಿದ್ವಾಂಸ ಡಾ. ಬಿ.ಎ.ವಿವೇಕ ರೈ ಅವರು ಜನಮಾನಸವನ್ನು ಎಚ್ಚರಿಸುವ, ಸಾಮರಸ್ಯವನ್ನು ಮೂಡಿಸುವ ಸಾಹಿತ್ಯ ಇಂದು ಬರಬೇಕಾಗಿದೆ. ಸಾಹಿತ್ಯ ಎಂಬುದು ಕೇವಲ ಕಥೆ, ಕಾದಂಬರಿ,ನಾಟಕ ಮಾತ್ರ ಅಲ್ಲ. ಅದು ಬದುಕನ್ನು ಉದ್ದೀಪನಗೊಳಿಸಬೇಕು. ಅದಕ್ಕಾಗಿ ಆಹಾರ, ಪರಿಸರ, ಮನೋ, ಸಾಮಾಜಿಕ ವಿಜ್ಞಾನದ ಬಗ್ಗೆ ಸಾಹಿತ್ಯ ಕನ್ನಡದಲ್ಲಿ ಬೇಕು ಎಂದರು.
ಸ್ವಾಗತಿಸಿದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಇಂದಿನ ಸಾಹಿತ್ಯಕ್ಕೆ ನೈತಿಕತೆಯ ಸ್ಪರ್ಶ ಬೇಕಾಗಿದೆ. ನಮ್ಮ ನಡೆ- ನುಡಿಯಲ್ಲಿ ನೈತಿಕತೆಯೆಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಒಳ್ಳೆಯ ಸಾಹಿತ್ಯವನ್ನು ಓದುವ ವರ್ಗ ನಮ್ಮ ನಡುವೆ ಯಾವತ್ತೂ ಇದೆ. ಅದಕ್ಕನುಗುಣವಾಗಿ ಸಾಹಿತ್ಯ ರಚಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಅನಿಸುತ್ತದೆ. ಈ ಕುರಿತ ಚಿಂತನೆ ಈ ಸಮ್ಮೇಳನದಲ್ಲಿ ನಡೆಯುತ್ತದೆ. ಸಮ್ಮೇಳನಗಳು ಧರ್ಮ, ವಿಜ್ಞಾನ ಮತ್ತು ಸಾಹಿತ್ಯದ ಸದಾಶಯಗಳ ಸ್ವರೂಪ ತಿಳಿದುಕೊಳ್ಳಲು ಪೂರಕವಾಗುತ್ತದೆ ಎಂದರು. ಬಳಿಕ ಸಾಹಿತ್ಯ ಮತ್ತು ವಿಶ್ವಮಾನವ ಪ್ರಜ್ಞೆಯ ಬಗ್ಗೆ ಸಾಹಿತಿ ಶ್ರೀಧರ ಬಳಗಾರ, ಅಕ್ಷರ ಪ್ರಪಂಚ ಮತ್ತು ಸತ್ಯದರ್ಶನದ ಕುರಿತು ಡಾ. ವೀಣಾ ಬನ್ನಂಜೆ, ರಂಗಭೂಮಿಯಲ್ಲಿ ಹಾಸ್ಯದ ಬಗ್ಗೆ ವಾಗ್ಮಿ ರಿಚರ್ಡ್ ಲೂಯಿಸ್ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಹೇಮಾವತಿ ವೀ. ಹೆಗ್ಗಡೆ, ಫ್ರೋ. ಪ್ರಭಾಕರ, ಹರ್ಷೇಂದ್ರ ಕುಮಾರ್, ಡಿ. ಸುರೇಂದ್ರ ಕುಮಾರ್ ಇದ್ದರು. ಉದ್ಘಾಟಕರ ಸಮ್ಮಾನ ಪತ್ರವನ್ನು ಡಾ. ಬಿ. ಯಶೋವರ್ಮ, ಅಧ್ಯಕ್ಷರ ಸಮ್ಮಾನ ಪತ್ರವನ್ನು ಡಿ. ಶ್ರೇಯಸ್ ಕುಮಾರ್ ವಾಚಿಸಿದರು. ರುಡ್ ಸೆಟ್ ನಿರ್ದೇಶಕ ವಿನಯಕುಮಾರ್ ವಂದಿಸಿದರು. ಡಾ. ಬಿ.ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಾಗಲಿರುವ ವಾಯುಭಾರ ಕುಸಿತವು ನಾಳೆ ಬಂಗ್ಲಾ ದೇಶದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ…
ಮಳೆಯ ಕಾರಣದಿಂದ ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ಆಲುವಾ ಶಿವ ದೇವಾಲಯದ…
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಗಿರುವ ವಾಯುಭಾರ ಕುಸಿತವು ಮುಂದಿನ 3 ಅಥವಾ…
ಅಡಿಕೆಯ ಬಹು ಪಾಲು ಬೀಡ, ಸಿಹಿ ಸುಪಾರಿ, ಗುಟ್ಕಾ,ಪಾನ್ ಮಸಾಲ ಇತ್ಯಾದಿಗಳ ತಯಾರಿಯಲ್ಲಿ…