Advertisement
ಸುದ್ದಿಗಳು

ಭಿತ್ತಿಪತ್ರ, ಸಾಮಾಜಿಕ ಜಾಲತಾಣಗಳ ಮೂಲಕ ತೇಜೋವಧೆ : ಸೈಬರ್ ಸೆಲ್ ಗೆ ದೂರು : ಕ್ರಮಕ್ಕೆ ಒತ್ತಾಯ

Share

ಸುಳ್ಯ :  ಭಿತ್ತಿಪತ್ರಗಳ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಕೆಲವು ಕಿಡಿಗೇಡಿಗಳು ತನ್ನ ವೈಯುಕ್ತಿಕ ತೇಜೋವಧೆಗೆ ಯತ್ನಿಸುತ್ತಿದ್ದಾರೆ. ಇವರ ವಿರುದ್ಧ ಪೊಲೀಸ್ ಇಲಾಖೆಗೆ ಮತ್ತು ಸೈಬರ್ ಸೆಲ್‍ನವರಿಗೆ ದೂರು ನೀಡಲಾಗಿದೆ. ಈ ರೀತಿ ಅಪಪ್ರಚಾರ ಮಾಡುವವರನ್ನು ಪತ್ತೆ ಹಚ್ಚಿ ಇವರ ವಿರುದ್ಧ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸುಳ್ಯ ತಾಲೂಕು ಪಂಚಾಯತ್  ಉಪಾಧ್ಯಕ್ಷೆ ಶುಭದಾ ಎಸ್.ರೈ ಹೇಳಿದ್ದಾರೆ.

Advertisement
Advertisement

ಸುಳ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾರ್ವಜನಿಕ ಬದುಕಿನಲ್ಲಿ ಪ್ರಾಮಾಣಿಕವಾಗಿ ಮತ್ತು ಭ್ರಷ್ಟಾಚಾರ ರಹಿತವಾಗಿ ಜನ ಸೇವೆ ಮಾಡಿದ್ದೇನೆ. ತನ್ನ ಏಳಿಗೆಯನ್ನು ಸಹಿಸದೆ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಈ ರೀತಿಯ ಅಪಪ್ರಚಾರ ಮಾಡುತ್ತಿರಬಹುದು. ತನ್ನ ಮೇಲೆ ಯಾವುದಾದರೂ ರೀತಿಯ ಆರೋಪಗಳಿದ್ದರೆ ಅದರ ಬಗ್ಗೆ ತನಿಖೆ ನಡೆಸಲಿ. ಯಾವುದೇ ರೀತಿಯ ತನಿಖೆಯನ್ನು ಎದುರಿಸಲು ಸಿದ್ಧ. ಆದರೆ ಈ ರೀತಿ ಅಪ ಪ್ರಚಾರ ಮಾಡಿದ ಕಾರಣ ಮನಸಿಗೆ ಭಾರೀ ನೋವು ಮತ್ತು ಬೇಷರ ಆಗಿದೆ. ಅಪಪ್ರಚಾರ ಮಾಡಿ ರಾಜಕೀಯದಿಂದ ಹಿಂದೆ ಸರಿಸುವ ಪಿತೂರಿ ಮಾಡಿರುವ ಸಾಧ್ಯತೆಯೂ ಇದೆ. ಯಾವುದೇ ಕಾರಣಕ್ಕೂ ರಾಜಕೀಯ ಕ್ಷೇತ್ರದಿಂದ ಮತ್ತು ಸಾರ್ವಜನಿಕ ಬದುಕಿನಿಂದ ಹಿಂದೆ ಸರಿಯುವುದಿಲ್ಲ. ನನಗೆ ಎಷ್ಟು ಸಾಧ್ಯವೋ ಅಷ್ಟು ಜನ ಸೇವೆಯನ್ನು ಮುಂದೆಯೂ ಮಾಡುತ್ತೇನೆ ಎಂದು ಹೇಳೀದರು.

Advertisement

ಮಹಿಳಾ ಮೋರ್ಚಾ ಖಂಡನೆ:
ಈ ರೀತಿ ಅಪಪ್ರಚಾರ ಮಾಡುವುದನ್ನು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ತೀವ್ರವಾಗಿ ಖಂಡಿಸುತ್ತದೆ ಎಂದು ಮಹಿಳಾ ಮೋರ್ಚಾ ಮುಖಂಡೆ ಹಾಗು ಜಿ.ಪಂ.ಸದಸ್ಯೆ ಆಶಾ ತಿಮ್ಮಪ್ಪ ಹೇಳಿದ್ದಾರೆ. ಈ ರೀತಿ ಅಪಪ್ರಚಾರ ಮಾಡುವವರನ್ನು ಪತ್ತೆ ಹಚ್ಚಿ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಜಿ.ಪಂ.ಸದಸ್ಯೆ ಪುಷ್ಪಾವತಿ ಬಾಳಿಲ, ತಾ.ಪಂ.ಸದಸ್ಯರಾದ ಪುಷ್ಪಾ ಮೇದಪ್ಪ, ಜಾಹ್ನವಿ ಕಾಂಚೋಡು, ಎಡಮಂಗಲ ಗ್ರಾ.ಪಂ.ಉಪಾಧ್ಯಕ್ಷೆ ಮೋಹಿನಿ, ವೇದಾವತಿ ಮಾಣಿಬೆಟ್ಟು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಜೀವಕ್ಕೇ ಅಮೃತ – ಜೀವಾಮೃತ : ಗಿಡ/ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚುತ್ತೆ..

ಈ ವಿಡಿಯೋ ನೋಡಿ. ಸುಡುಮಣ್ಣೂ ಆಯ್ತು, ಕಸಗಳ ವಿಲೇವಾರಿಯೂ ಆಯ್ತು ಎಂದು ತೋಟದ…

1 hour ago

ಸ್ವಚ್ಛತೆ ಬಗ್ಗೆ ಒಂದು ಅನಿಸಿಕೆ : ಎಲ್ಲಾ ಯಕ್ಷಗಾನ ಮೇಳದವರಿಗೆ ಒಂದು ವಿನಂತಿ : ಚುನಾವಣೆಯ ಡ್ಯೂಟಿಯವರಿಗೂ ಸ್ವಚ್ಛತೆ ಬಗ್ಗೆ ತರಬೇತಿ ನೀಡಿ

ಮುಖ್ಯವಾಗಿ ಯಾವುದೇ ಸಮಾರಂಭ(Function) ಪ್ರಾರಂಭವಾಗುವ ಮುಂಚೆ, ಆ ಸ್ಥಳ ಎಷ್ಟು ಸ್ವಚ್ಛತೆಯಿಂದ(Clean) ಕೂಡಿತ್ತೋ,…

2 hours ago

ನಮ್ಮ ಮಕ್ಕಳಿಗಾಗಿ ಒಂದು ನೀತಿ ಕಥೆ…….ಸಾಧ್ಯವಾದರೆ ಇದನ್ನು ಮಕ್ಕಳಿಗೆ ಓದಿ ಹೇಳಿ ಅಥವಾ ಓದಲು ಹೇಳಿ

ಭಾವನಾತ್ಮಕ(Sentimental) ದೃಶ್ಯದ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ(Social media) ಹರಿದಾಡುತ್ತಿದೆ. ಅದರ ಒಳ ಅರ್ಥ…

2 hours ago

ಬಹಳ ದಿನಗಳ ನಂತರ ಗ್ರಾಹಕರಿಗೆ ಸಿಹಿ ಸುದ್ದಿ : ಚಿನ್ನದ ದರದಲ್ಲಿ ಭಾರಿ ಇಳಿಕೆ : ಎಲ್​ಪಿಜಿ ಗ್ಯಾಸ್ ಸಿಲಿಂಡರ್​ ಬೆಲೆಯಲ್ಲೂ ಇಳಿಕೆ!

ಚುನಾವಣೆ(Election) ಬರುತ್ತಿದ್ದಂತೆ ಅನೇಕ ದಿನನಿತ್ಯ ವಸ್ತುಗಳ ಬೆಳೆ ಇಳಿಯೋದು(price low) ಮಾಮೂಲು. ಆದರೆ…

3 hours ago

Karnataka Weather | 01-05-2024 | ಮುಂದುವರಿದ ಅಧಿಕ ತಾಪಮಾನ | ಮಲೆನಾಡು ತಪ್ಪಲು ಭಾಗದಲ್ಲಿ ಅನಿರೀಕ್ಷಿತ ಮಳೆ ಸಾಧ್ಯತೆ |

ಅಧಿಕ ತಾಪಮಾನದ ಕಾರಣದಿಂದ ಒಂದೆರಡು ಕಡೆ ಅನಿರೀಕ್ಷಿತ ಮಳೆಯ ಸಾಧ್ಯತೆಯೂ ಇದೆ. ಈಗಿನಂತೆ…

5 hours ago