ಸುಳ್ಯ: ಸುಳ್ಯವನ್ನು ಶಿಕ್ಷಣ ಕಾಶಿಯನ್ನಾಗಿಸಿದ ಡಾ| ಕುರುಂಜಿ ವೆಂಕಟ್ರಮಣ ಗೌಡರ ಹುಟ್ಟು ಹಬ್ಬ ಅಂಗವಾಗಿ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಜರುಗಿದ ಕೆ.ವಿ.ಜಿ. ಸುಳ್ಯ ಹಬ್ಬ ಸಮಾರಂಭದಲ್ಲಿ ಡಿ.24 ರಂದು ಸಾಹಿತಿ, ಜ್ಯೋತಿಷಿಯಾಗಿರುವ ಹೆಚ್. ಭೀಮರಾವ್ ವಾಷ್ಠರ್ ನಿರ್ದೇಶನದ ಪರಿವರ್ತನೆ ಚಲನಚಿತ್ರ ಮತ್ತು ಅನುಮಾನ ಕಿರುಚಿತ್ರ ಯಶಸ್ವೀ ಪ್ರದರ್ಶನಗೊಂಡವು .
ಹೆಚ್. ಭೀಮರಾವ್ ವಾಷ್ಠರ್ ರವರು ಪ್ರದರ್ಶನ ಮುಂಚೆ ಚಿತ್ರಗಳ ಕುರಿತು ಮಾಹಿತಿ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಚಿತ್ರದ ಕಲಾವಿದರು ಉಪಸ್ಥಿತರಿದ್ದರು.
ಸುಳ್ಯ ನಗರ ಅಷ್ಟೇ ಅಲ್ಲದೆ ವಿಜಯಪುರ, ಮಹಾರಾಷ್ಟ್ರದ ಪಂಢರಾಪುರ, ಮಂಡ್ಯದ ಕೆ.ಆರ್.ಎಸ್. ಹಾಗೂ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾದ ನಯನ ಮನೋಹರ ದೃಶ್ಯಗಳು ಮನತಣಿಸಿದವು.
ಸಂದೇಶ ಭರಿತ ಸಂಪೂರ್ಣ ಚಿತ್ರಗಳನ್ನು ಬೃಹತ್ ಎಲ್ಈಡಿ ಪರದೆಯಲ್ಲಿ ಬಿತ್ತರಿಸಲಾಯಿತು. ಪ್ರದರ್ಶನ ಆದ ಬಳಿಕ ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ರವರು ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಚಂದ್ರಶೇಖರ್ ಪೇರಾಲು ಮತ್ತು ದಿನೇಶ್ ಅಂಬೆಕಲ್ಲು ಉಪಸ್ಥಿತರಿದ್ದರು.
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…