ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಯಿತು. ಸರಕಾರದಿಂದ ತೊಡಗಿ ಎಲ್ಲಾ ಜನಪ್ರತಿನಿಧಿಗಳು ವಿವಿಧ ಹೇಳಿಕೆ ನೀಡಿದರು. ಮಾಧ್ಯಮಗಳು ನಿರ್ಧಾರ ನೀಡುವ ಹಂತಕ್ಕೆ ಬಂದಿದ್ದರು. ಸರ್ಕಾರ ಗೃಹ ಸಚಿವರು ತನಿಖೆ ತನಿಖೆ ಎಂದರು. ಮುಖ್ಯಮಂತ್ರಿಗಳು ಸಮಗ್ರ ತನಿಖೆ ಎಂದರು. ಆದರೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇದೊಂದು ಠುಸ್ ಪಟಾಕಿ ಎಂದರು.
ಹಾಗಿದ್ದರೆ ಮಾಜಿ ಮುಖ್ಯಮಂತ್ರಿಗಳು ಅಷ್ಟು ಬೇಗನೆ ಮಾಹಿತಿ ಕಲೆ ಹಾಕಿದ್ದು ಹೇಗೆ ? ಪೊಲೀಸ್ ಇಲಾಖೆಯಲ್ಲಿ ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡುವ ಆಪ್ತರು ಯಾರು ಇತ್ಯಾದಿ ಪ್ರಶ್ನೆಗಳು ಕುತೂಹಲಕಾರಿ…!. ಅಷ್ಟೇ ಅಲ್ಲ, ಅಷ್ಟೊಂದು ಪವರ್ ಫುಲ್ ಹೇಗೆ ?.
ಮಾಜಿಯಾಗಿದ್ದರೂ ಎಲ್ಲಾ ಇಲಾಖೆಗಳಿಂದಲೂ ತಕ್ಷಣವೇ ಮಾಹಿತಿ ಪಡೆದುಕೊಳ್ಳುವ ಚಾಕಚಕ್ಯತೆ ಇರುವ ಎಚ್ ಡಿ ಕುಮಾರಸ್ವಾಮಿ ಅವರು ಮಂಗಳೂರು ಬಾಂಬ್ ಪ್ರಕರಣದಲ್ಲೂ ತಕ್ಷಣ ಮಾಹಿತಿ ಪಡೆದರೆ ಪೊಲೀಸ್ ಇಲಾಖೆಯ ವೈಫಲ್ಯಗಳು ಹಾಗೂ ಮಾಹಿತಿ ಸೋರಿಕೆ ಬಗ್ಗೆಯೂ ಈ ಘಟನೆ ಸಾಕ್ಷಿಯಾಗಿದೆ. ಗುಪ್ತಚರ ಇಲಾಖೆ ಇದ್ದರೂ ಸರಕಾರಕ್ಕಿಂತಲೂ ಹೆಚ್ಚು ನಿಖರವಾದ ಮಾಹಿತಿಯನ್ನು ಎಚ್ ಡಿ ಕುಮಾರಸ್ವಾಮಿ ಹೇಗೆ ಪಡೆದರು ಎಂಬುದು ಗಮನಾರ್ಹವಾಗಿದೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೂ ಇದೊಂದು ಎಚ್ಚರಿಕೆಯ ಪಾಠವೂ ಆಗಿದೆ.
ಈ ನಡುವೆ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ಎಚ್ ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಅಣುಕು ಪ್ರದರ್ಶನ ಎಂದಿದ್ದಾರೆ. ನಾಲಿಗೆ ಇದೆ ಎಂದು ಎನು ಬೇಕಾದರೂ ಮಾತನಾಡಬಹುದು ಎಂಬ ಭಾವನೆ ಇರಬಾರದು ಆಡುವ ಮಾತಿನ ಮೇಲೆ ಎಚ್ಚರಿಕೆ ಇರಬೇಕು ಮಾಹಿತಿ ತಿಳಿದು ಕುಮಾರಸ್ವಾಮಿ ಮಾತನಾಡಲಿ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಮಂಗಳೂರು ಬಾಂಬ್ ಪ್ರಕರಣವು ಜನಪ್ರತಿನಿಧಿಗಳ, ಪೊಲೀಸ್ ಇಲಾಖೆಯ, ಗುಪ್ತಚರ ಇಲಾಖೆಯ, ಮಾಧ್ಯಮಗಳ, ನೂತನ ಆವಿಷ್ಕಾರಗಳ ಮುಖವನ್ನು ಅನಾವರಣ ಮಾಡಿದೆ.
ಬಂಗಾಳಕೊಲ್ಲಿಯ ಆಂದ್ರಾ, ಒಡಿಶಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಆಗಸ್ಟ್ 18,19 ರಂದು…
ಗ್ರಾಮೀಣ ಮಟ್ಟದ ಆರ್ಥಿಕ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…
ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ರೈತರೊಬ್ಬರು ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ ತೆಗೆಯುವ…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ಆತ್ಮನಿರ್ಭರ ಯೋಜನೆಯಡಿಯಲ್ಲಿ…
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…