ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ವಿಶ್ವರೂಪ’)
ಪ್ರಸಂಗ : ವಿಶ್ವರೂಪಾಚಾರ್ಯ
(ಸಂದರ್ಭ : ಸ್ವರ್ಗದಲ್ಲಿ ಗುರುಪೀಠ ಶೂನ್ಯವಾದಾಗ ಆ ಸ್ಥಾನವನ್ನು ಅಲಂಕರಿಸಲು ದೇವೇಂದ್ರನು ಬಿನ್ನವಿಸುತ್ತಾನೆ)
“.. ಕಾಮ್ಯರೂಪವಾದಂತಹ ಯಜ್ಞದಿಂದ, ವಿಶ್ವಕರ್ಮನಾದಂತಹ ಯಜ್ಞೇಶ್ವರನ ಅನುಗ್ರಹದಿಂದ ಪಡೆದಂತಹ ಲೋಕಾಧಿಪತ್ಯಕ್ಕೆ ಭಾಗಿಯಾದವರಲ್ಲಿ ನಾನು ಮುಖ್ಯಸ್ಥನು. ‘ವಿಶ್ವಕರ್ಮ’ – ವಿಶ್ವನು ಯಾವನ ಕೃತಿಯಾಗಿದೆಯೋ ಆ ಅವನು ‘ವಿಶ್ವಕರ್ಮ’. ತತ್ವತಃ ನೋಡಿದರೆ ವಿಶ್ವಕ್ಕಿಂತ ಭಿನ್ನನಲ್ಲ ವಿಶ್ವಕರ್ಮ. ಉತ್ತಮ ಸಂಗೀತಗಾರನ ಸೃಷ್ಟಿ ಗಾನದ ನಾದದ ಅಲೆಗಳು. ಪ್ರತ್ಯೇಕವಾಗಿ ಶಬ್ದಪ್ರಮಾಣದಿಮದ ಹೇಳುತ್ತೇವೆ. ಹೊರತು ಸಂಗೀತಕ್ಕೆ ಭಿನ್ನವಾದ್ದಲ್ಲ ಅಲೆಗಳು. ನಾದತರಂಗ ಮಾತ್ರ ಹಾಡುವಂತಹ ಯಾವತ್ತೂ ಹಾಡುಗಾರನ ನಾದ, ಅವಿನಾಭಾವ. ಆದರೆ ವ್ಯಾವಹಾರಿಕವಾಗಿ ಹೇಗೆ ಅಂದರೆ ಪ್ರಪಂಚ ಬೇರೆ, ವಿಶ್ವಕರ್ಮ ಬೇರೆ. ಈ ವಿಶ್ವಕರ್ಮನದ್ದಾದಂತಹ ಮತ್ತೊಂದು ಸ್ವರೂಪಕ್ಕೆ ‘ವಿಶ್ವರೂಪ’ ಅಂತ ಹೇಳುತ್ತೇವೆ. ಈ ವಿಶ್ವಕ್ಕೆ ರೂಪವನ್ನು ಹೇಗೆ ಕೊಡುವುದು? ಅಂದರೆ ಭೌತಿಕವಾಗಿ ಐದು – ಪಂಚಭೂತ. ಆಮೇಲೆ ಮಾನಸಿಕ, ಬೌದ್ಧಿಕವಾಗಿ ಚಿಂತಿಸುವಾಗ ಅದಕ್ಕೆ ಮೂರು ಶಕ್ತಿಗಳು – ಇಚ್ಛಾ, ಕ್ರಿಯಾ, ಜ್ಞಾನ. ಹಾಗಾಗಿ ವಿಶ್ವಕರ್ಮನನ್ನು ಮೂರ್ತಿವತ್ತಾಗಿ ಚಿತ್ರಸಿದಾವಾಗ ಐದು ಮುಖ ವಿಶ್ವಕರ್ಮನಿಗೆ. ವಿಶ್ವರೂಪನಾದ ನನಗೆ ಮೂರು ಮುಖ. ತತ್ವತಃ ಒಂದೇ ಅಖಂಡ. ಒಂದಕ್ಕಿಂತ ಒಂದು ಭಿನ್ನವಾದುದಲ್ಲ. ಹೀಗೆ ಆತ್ಮಾನುಸಂಧಾನದಲ್ಲಿ ನಾನು ಅದೇ ಆಗಿ ಇದ್ದ ಕಾಲಕ್ಕೆ ನೀನು ಬಂದಿದ್ದಿ.
ವಿಧಿನಿಷೇಧದ ಕಟ್ಟುಪಾಡಿಗೆ ಒಳಪಡದೇ ಇದ್ದರೂ ಕೆಲವೊಮ್ಮೆ ನಾವು ವಿಧಿಯನ್ನೂ ನಿಷೇಧವನ್ನೂ ಪರಿಗ್ರಹಿಸುತ್ತೇನೆ. ಮಕ್ಕಳನ್ನು ಎತ್ತುವುದಕ್ಕಾಗಿ ತಾಯಿ ಬಾಗಬಹುದು. ಆದರೆ ವ್ಯಾಧಿರೂಪದಿಂದ ಬೆನ್ನು ಬಾಗಬಾರದು. ಮರಿಗಪ್ಪೆ ನೀರಿನಲ್ಲಿ ಇರಬೇಕು. ಬಾಲ ಹೋದ ಮೇಲೆ ಕಪ್ಪೆಗೆ ನೆಲವೇನು? ಜಲವೇನು? ಸ್ವರ್ಗವೂ ನಮಗೆ ನಿಷಿದ್ಧವಲ್ಲ. ನರಕಕ್ಕೂ ಭಯಪಡುವವರಲ್ಲ. ಆದುದರಿಂದಲೇ ನಿನಗೆ ಗೊತ್ತಿರಬಹುದು, ಒಂದು ಮುಖದಲ್ಲಿ ಅಮೃತಪಾನ ಮಾಡುತ್ತೇನೆ. ಒಂದು ಮುಖದಿಂದ ಮದ್ಯಪಾನ ಮಾಡುತ್ತೇನೆ. ಮತ್ತೊಂದು ಮುಖದಿಂದ ಪ್ರಪಂಚವನ್ನು ನೋಡುತ್ತೇನೆ. …”
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…