ಮಕ್ಕಳ ಕುಣಿತ ಭಜನೆಯ ಸಂಭ್ರಮದಲ್ಲಿ ಪುಣ್ಚಪ್ಪಾಡಿ ಶಾಲಾ ಪುಸ್ತಕ ಪೂಜೆಯ ಉತ್ಸವ…..!

October 6, 2019
11:24 AM
Advertisement

ಸವಣೂರು: ಶಾಲಾ ಮಕ್ಕಳಿಂದಲೇ ರಚಿತವಾದ ಹೂವಿನ ಎಸಳುಗಳ ರಂಗವಲ್ಲಿ ನಡುವೆ ಉರಿಯುವ ದೀಪ..!  ಸುತ್ತಲೂ ತಾಳ ಬದ್ಧವಾಗಿ ಹೆಜ್ಜೆ ಹಾಕುತ್ತಿರುವ ಮಕ್ಕಳು…! ಎಲ್ಲರ ಧ್ವನಿಯೊಂದೇ….!  ಕೃಷ್ಣ ಕೃಷ್ಣ…… ಬಾಲ ಕೃಷ್ಣ…. ನಂದ ನಂದ…. ಗೋಪಿ ಕೃಷ್ಣ….!

Advertisement
Advertisement
Advertisement

ಮಕ್ಕಳ ಲಯಬದ್ಧವಾದ ತಾಳದ ಸದ್ದು…! ಹೊಂದಾಣಿಕೆಯ ಅಂದದ ಕುಣಿತ…! ಮುದ್ದು ಮುದ್ದಾಗಿ ಹಾಡುವ ದೇವರ ಕೀರ್ತನೆ..!. ಸೇರಿದ ನೂರಾರು ಜನರ ಮನಸ್ಸಿಗೆ ಭಕ್ತಿಯ ಖುಷಿ ನೀಡಿತು. ಹೌದು… ಇದು ಪುಣ್ಚಪ್ಪಾಡಿ ಸರಕಾರಿ ಶಾಲೆಯಲ್ಲಿ ನಡೆದ 92ನೇ ವರ್ಷದ ಪುಸ್ತಕ ಪೂಜೆಯ ಸಂಭ್ರಮ.

Advertisement

ಈ ಶಾಲೆಯ ಪುಸ್ತಕ ಪೂಜೆಗೆ 92 ವರ್ಷಗಳ ಇತಿಹಾಸವಿದೆ….!. ಇಲ್ಲೊಂದು ಹಲವು ವರ್ಷಗಳ ಹಿಂದಿನ ಶಾರದಾ ಮಂಟಪವಿದೆ. ಪ್ರತಿ ಶುಕ್ರವಾರ ಮಕ್ಕಳು ಈ ಮಂಟಪದ ಎದುರು ಭಜನೆ ಹಾಡುವುದು ಇಲ್ಲಿನ ಸಂಪ್ರದಾಯ. ಪ್ರತಿ ನವರಾತ್ರಿಯಂದು ಈ ಮಂಟಪವನ್ನು ಬಣ್ಣದ ಕಾಗದಗಳಿಂದ ಅಲಂಕರಿಸಿ….ಹೂಗಳಿಂದ ಶೃಂಗರಿಸಿ ಪುಸ್ತಕ ಪೂಜೆ ಮಾಡುವುದು ಹಿಂದಿನಿಂದಲೂ ಬಂದ ರೂಢಿ. ಈ ಶಾಲೆಯ ಪುಸ್ತಕ ಪೂಜೆ ಶಾಲೆಯ ಹಬ್ಬ ಮಾತ್ರವಲ್ಲ ಊರಿನ ಹಬ್ಬ. ವರ್ಷಕ್ಕೊಮ್ಮೆ ಊರಿನ ಪ್ರತಿ ಮನೆಯ ಸದಸ್ಯರೂ ಶಾಲೆಗೆ ಬಂದು ವಿಜೃಂಭಣೆಯಿಂದ ಪುಸ್ತಕ ಪೂಜೆ ಮಾಡುತ್ತಾರೆ. ಊರಿನ ಮಕ್ಕಳ ಅಕ್ಷರ ಆರಂಭವೂ ಇದೇ ದಿನ ಇಲ್ಲಿ ನಡೆಯುತ್ತದೆ. ಇಲ್ಲಿ ಇದನ್ನು ವಿಶೇಷ ಹಬ್ಬವಾಗಿ ಆಚರಿಸಲಾಗುತ್ತದೆ.

ಶಾರದ ಪೂಜೆಯ ಹಿಂದಿನ ದಿವಸ ಪೋಷಕರು, ಮಕ್ಕಳು, ಶಿಕ್ಷಕರು, ಊರವರು ಸೇರಿ ಶಾಲೆಯನ್ನು ಸ್ವಚ್ಛಗೊಳಿಸಿ, ಸೆಗಣಿ ಸಾರಿಸಿ, ಬಾಳೆ, ತೋರಣ ಕಟ್ಟಿ, ಶಾರದ ಮಾತೆಯ ಮಂಟಪ ಸಿಂಗರಿಸುವ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ವಿಶೇಷವೆಂಬಂತೆ ದಿ.ಪುರಂದರ ರೈ ಪುಣ್ಚಪ್ಪಾಡಿ ಇವರ ಸ್ಮರಣಾರ್ಥ ಇವರ ಮನೆಯವರಾದ ಶ್ರೀಮತಿ ಕುಶಲ ಪಿ.ರೈ ಮತ್ತು ಮಕ್ಕಳು ಸಾರ್ವಜನಿಕ ಸಹಭೋಜನದ ವ್ಯವಸ್ಥೆಯನ್ನು, ಶ್ರೀ ವಿಷ್ಣು ಭಟ್ ಕೆ.ಎಂ. ಸಾಯಿಸೀತಾ ಅಜಿಲೋಡಿ, ರಾಜೀವಿ ರೈ ಪೋಸ್ಟ್ ಮಾಸ್ಟರ್ ಪುಣ್ಚಪ್ಪಾಡಿ, ಪಂಚಾಯತ್ ಸದಸ್ಯರಾದ ನಾಗೇಶ್ ಓಡಂತರ್ಯ ಮತ್ತು ಪೋಷಕರು ವೈದಿಕ ಕಾರ್ಯಕ್ರಮದ ವ್ಯವಸ್ಥೆಯನ್ನು, ಶ್ರೀ ಹರಿ ಭಜನಾ ಮಂಡಳಿ ದೇವಸ್ಯರವರು ಭಜನೆಯಲ್ಲಿ ಸಹಕರಿಸುತ್ತಾ ಬಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಹೆತ್ತವರು ಮಾತ್ರವಲ್ಲದೇ ಊರಿನ ಪ್ರತಿ ಮನೆಯ ಸದಸ್ಯರೂ ಭಾಗವಹಿಸುತ್ತಿರುವುದು ವಿಶೇಷವಾಗಿದೆ.

Advertisement

ಪ್ರತಿ ವರ್ಷವೂ ಇದು ಅಘೋಷಿತವಾಗಿ ನಡೆಯುತ್ತಲೇ ಬಂದಿದೆ. ಈ ವರ್ಷವೂ ಈ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಈ ವರ್ಷದ ವಿಶೇಷವೆಂದರೆ ಮಕ್ಕಳ ಕುಣಿತ ಭಜನೆ… ಮಕ್ಕಳು ಲಯಬಧ್ಧವಾಗಿ ಕುಣಿಯುತ್ತ ಅನೇಕ ಶಾರದ ಸ್ತುತಿಗಳನ್ನು ಹೇಳಿದರು. ಹಲವು ಹಿರಿಯರೂ ಕೂಡ ಇದರೊಂದಿಗೆ ಸೇರಿಕೊಂಡರು. ಹಿರಿಯರಾದ ಅನಂತರಾಮ ಉಪಾಧ್ಯಾಯ ಕಾಣಿಯೂರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ನಂತರ ಊರಿನ 10 ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಸುಮಾರು 2 ಗಂಟೆಗಳ ಕಾಲ ಹರಿಭಜನಾ ಮಂಡಳಿ ದೇವಸ್ಯ, ಮಕ್ಕಳು ಮತ್ತು ಪೋಷಕರಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಸಹಭೋಜನ ನಡೆಯಿತು.

ಈ ಕಾರ್ಯಕ್ರಮದಲ್ಲಿ ಶಾಲಾ ದಾನಿಗಳಾದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಕೃಷ್ಣ ರೈ ಪುಣ್ಚಪ್ಪಾಡಿ, ಮಾಜಿ ಪಂಚಾಯತ್ ಉಪಾಧ್ಯಕ್ಷರಾದ ಗಂಗಾಧರ್ ರೈ ದೇವಸ್ಯ, ಕುಶಲ ಪಿ.ರೈ ಪುಣ್ಚಪ್ಪಾಡಿ, ಪ್ರಶಾಂತ್ ರೈ ಪುಣ್ಚಪ್ಪಾಡಿ, ಲಕ್ಷ್ಮೀಶ ಗಾಂಭೀರ ದೇವಸ್ಯ,, ರಾಮಪ್ರಸಾದ್ ರೈ ಕಲಾಯಿ, ಲಿಂಗಪ್ಪ ರೈ ಚೆಂಬುತ್ತೋಡಿ, ಶಿಕ್ಷಕಿ ಸುಜಯ ಸುಲಾಯ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಉಮಾಶಂಕರ ಗೌಡ, ಮಾಜಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಮೋನಪ್ಪ ಗೌಡ ಕುಚ್ಚೆಜಾಲು, ಎಸ್.ಡಿ.ಎಮ್.ಸಿ ಸದಸ್ಯರು, ಶ್ರೀ ಹರಿ ಭಜನಾ ಮಂಡಳಿಯ ಅಧ್ಯಕ್ಷರಾದ ವಿಶ್ವನಾಥ್ ಹಾಗೂ ಸದಸ್ಯರು, ಪೋಷಕರು, ಅಕ್ಷರ ದಾಸೋಹ ಸಿಬ್ಬಂದಿಗಳು, ಹಿರಿಯ ವಿದ್ಯಾರ್ಥಿಗಳು, ಮಕ್ಕಳೂ, ಊರವರು ಸೇರಿದಂತೆ 250 ಕ್ಕಿಂತಲೂ ಹೆಚ್ಚು ಜನ ಭಾಗವಹಿಸಿದ್ದರು.

Advertisement

ಮುಖ್ಯಗುರುಗಳಾದ ರಶ್ಮಿತಾ ನರಿಮೊಗರು, ಶಿಕ್ಷಕರಾದ ಶೋಭಾ ಕೆ. ಫ್ಲಾವಿಯ ಮೊಂತೆರೊ, ಅತಿಥಿ ಶಿಕ್ಷಕರಾದ ಯತೀಶ್ ಕುಮಾರ್ ಕೆ.ಎಂ, ಜ್ಞಾನದೀಪ ಶಿಕ್ಷಕಿ ಯಮುನಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಈ ಶಾಲೆ ಊರಿನ ಶಾಲೆ. ಇದು ದೇಗುಲಕೆ ಸಮಾನ…ಕಳೆದ ಸುಮಾರು ವರ್ಷಗಳಿಂದ ಸಹಭೋಜನ ನೀಡುವ ಅವಕಾಶ ನಮ್ಮದಾಗಿದೆ. ಊರನ್ನು ಒಗ್ಗೂಡಿಸುವ ಇಂಥ ಕಾರ್ಯಕ್ರಮಗಳು ನಮಗೆಲ್ಲರಿಗೂ ಒಂದು ಸಂಭ್ರಮದ ಹಬ್ಬವಾಗಿದೆ. –  ಕುಶಲ ಪಿ.ರೈ ಪುಣ್ಚಪ್ಪಾಡಿ , ದಾನಿಗಳು

Advertisement

ಕಳೆದ ಹಲವಾರು ವರ್ಷಗಳಿಂದ ಈ ಶಾಲೆಯಲ್ಲಿ ಶಾರದಾ ಪೂಜೆ ನಡೆಸುತ್ತಾ ಬಂದಿದ್ದೇವೆ. ಊರವರೆಲ್ಲರೂ ಸೇರಿ ಹಬ್ಬದ ರೀತಿಯಲ್ಲಿ ಆಚರಿಸುವುದು ಸಂತಸದ ಸಂಗತಿಯಾಗಿದೆ. – ಗಂಗಾಧರ್ ರೈ ಪುಣ್ಚಪ್ಪಾಡಿ, ಹಿರಿಯರು.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವೆದರ್‌ ಮಿರರ್‌ | 20.04.2024 | ರಾಜ್ಯದ ಹಲವೆಡೆ ಇಂದು ಮಳೆಯ ಮುನ್ಸೂಚನೆ
April 20, 2024
11:35 AM
by: ಸಾಯಿಶೇಖರ್ ಕರಿಕಳ
ಚಾಮರಾಜನಗರ-ಹಾವೇರಿಯಲ್ಲಿ ಗಾಳಿಗೆ ಅಪಾರ ಕೃಷಿ ಹಾನಿ |
April 19, 2024
11:14 PM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಉತ್ತಮ ಮಳೆ | ಗಾಳಿಗೆ ಉರುಳಿದ ಮರ | ಸುಳ್ಯ- ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕಡಿತ |
April 19, 2024
11:07 PM
by: ದ ರೂರಲ್ ಮಿರರ್.ಕಾಂ
ಬೇಸಿಗೆ ಜರ್ನಿಯ ಚಿಲಿಪಿಲಿ ಗೂಡು | ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ |
April 19, 2024
4:02 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror