ಬೆಳ್ಳಾರೆ: ಮಕ್ಕಳ ಒಳಗೆ ಅನೇಕ ಪ್ರತಿಭೆಗಳಿರುತ್ತದೆ. ಅದನ್ನು ಪ್ರಸ್ತುತಪಡಿಸುವಿಕೆಗೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ. ಸೋಲು ಗೆಲುವುಗಳನ್ನು ಮಕ್ಕಳು ಸಮಾನವಾಗಿ ಪರಿಗಣಿಸಿ ಪರಿಪಕ್ವವಾಗಬೇಕು ಎಂದು ತಾಲೂಕು ಶಿಕ್ಷಣ ಸಂಯೋಜಕ ವಸಂತ್ ಏನೆಕಲ್ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸಮಗ್ರ ಶಿಕ್ಷಣ, ತಾಲೂಕು ಶಿಕ್ಷಣ ಇಲಾಖೆ ಆಯೋಜನೆಯೊಂದಿಗೆ ಶುಕ್ರವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪ್ರಸ್ತಾವಿಸಿ ಮಾತನಾಡಿದರು. ಮುಖ್ಯ ಅತಿಥಿ ಕಳಂಜ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಧರ್ ಕೆ.ಅರ್ ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಗಂಗಾಧರ್ ತೋಟದಮೂಲೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಸವಿತಾ, ತಾಲೂಕು ಶಿಕ್ಷಕರ ಸಂಘದ ಸದಸ್ಯೆ ಹಾಗು ಪೆರುವಾಜೆ ಸಹಿಪ್ರಾ ಶಾಲಾ ಮುಖ್ಯೋಪಾಧ್ಯಾಯಿನಿ ತುಳಸಿ, ಎಸ್‍ಡಿಎಂಸಿ ಉಪಾಧ್ಯಕ್ಷೆ ಗೀತಾ ಉಪಸ್ಥತರಿದ್ದರು.
ಮುಖ್ಯಶಿಕ್ಷಕಿ ಮೋಹಿನಿ ಎ.ಕೆ ಸ್ವಾಗತಿಸಿ, ಹಿರಿಯ ಶಿಕ್ಷಕಿ ರೋಹಿಣಿ ವಂದಿಸಿದರು. ಶಿಕ್ಷಕಿ ರಾಣಿ ಕೆ.ಪಿ ಕಾರ್ಯಕ್ರಮ ನಿರೂಪಿಸಿದರು. ಒಟ್ಟು ಹನ್ನೆರಡು ಶಾಲೆಗಳು ಭಾಗವಹಿಸಿದ್ದು, ಇಪ್ಪತ್ತೈದು ಸ್ಪರ್ಧೆಗಳು ನಡೆಯಿತು.