ಸುಳ್ಯ: ಬಾಲ್ಯದಲ್ಲಿ ಮಕ್ಕಳಿಗೆ ನೀಡುವ ಕಲೆ,ಸಾಂಸ್ಕೃತಿಕ ಸಂಸ್ಕೃತಿಯೊಂದಿಗಿನ ವಾತಾವರಣವು ಅವರ ಬದುಕನ್ನು ಮುಂದೆ ಧೈರ್ಯವಾಗಿ ಎದುರಿಸಲು ಸಹಕಾರಿಯಾಗುತ್ತದೆ ಎಂದು ಆಳ್ವಾಸ್ ನ ಪ್ರತಿಭಾನ್ವಿತ ವಿದ್ಯಾರ್ಥಿನಿ,ಬೆಳಗಾಂನ ಭಾರತೀ ಶಿವಾನಂದ್ ಹೇಳಿದರು.
ಅವರು ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ನಡೆದ,ಜೀವನ್ ರಾಂ ಸುಳ್ಯ ನಿರ್ದೇಶನದ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರ ಚಿಣ್ಣರ ಮೇಳ-2019 ರ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.ಈಗಿನ ಮಕ್ಕಳು ಮೊಬೈಲ್,ಇಂಟರ್ ನೆಟ್,ಯು ಟ್ಯೂಬ್ ಇತ್ಯಾದಿಗಳಲ್ಲಿ ಮುಳುಗಿರ್ತಾರೆ ಅನ್ನುವ ದೂರಿಗೆ ಮೂಲ ಕಾರಣ ಹೆತ್ತವರು. ಮಕ್ಕಳ ನಡವಳಿಕೆಗಳಿಗೆ ಹೆತ್ತವರು ತೋರುವ ನಿರ್ಲಕ್ಷವೇ ಕಾರಣ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿವಮೊಗ್ಗ ಕುವೆಂಪು ವಿ.ವಿ.ಯ ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ| ಸತೀಶ್ ಕುಮಾರ್ ಅಂಡಿಂಜೆ ಮಾತನಾಡಿ’ರಿಯಾಲಿಟೀ ಶೋದ ಹೆಸರಿನಲ್ಲಿ ಬೇಸಿಗೆ ಶಿಬಿರಗಳು ವ್ಯಾಪಾರಿಕರಣಗೊಳ್ಳುತ್ತಿವೆ.ಅಲ್ಲಿ ಕಾಣುವುದು ಮಕ್ಕಳ ನಿಜವಾದ ಪ್ರತಿಭೆ ಅಲ್ಲ. ಟಿ ಆರ್ ಪಿ ಗೋಸ್ಕರ ಮಕ್ಕಳ ಪ್ರತಿಭೆಯನ್ನು ಒರೆಗೆ ಹಚ್ಚುವ ಕೆಲಸ ಅಲ್ಲಿ ನಡೆಯುತ್ತದೆ..ಮಕ್ಕಳ ನಿಜ ಪ್ರತಿಭೆಯನ್ನು ಗ್ರಾಮೀಣ ಭಾಗದಲ್ಲಿ ಕಾಣಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಭಾರತೀ ಶಿವಾನಂದರನ್ನು ರಂಗಮನೆಯ ಪರವಾಗಿ ಸನ್ಮಾನಿಸಲಾಯಿತು.
ಮೂಡಬಿದಿರೆ ಹಿರಿಯ ಲೆಕ್ಕಪರಿಶೋಧಕರಾದ ಉಮೇಶ್ ರಾವ್ ಮಿಜಾರು ಅಧ್ಯಕ್ಷತೆ ವಹಿಸಿದ್ದರು.ಉಪಸ್ಥಿತರಿದ್ದ
ಮಂಗಳೂರು ವಿ.ವಿ.ಉದ್ಯೋಗಿ ಸತ್ಯ ಜೀವನ್ ಸೋಮೇಶ್ವರ ಹೆತ್ತವರ ಕಡೆಯಿಂದ ಅಭಿಪ್ರಾಯ ವ್ಯಕ್ತಪಡಿಸಿದರು.
ರಂಗಮನೆ ರೂವಾರಿ ಜೀವನ್ ರಾಂ ರವರ ರಂಗಬದುಕಿನ 27 ವರ್ಷದ ಮತ್ತು ರಂಗಮನೆಯ 17 ನೇ ವರ್ಷದ ಶಿಬಿರ ಇದಾಗಿದ್ದು,ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ 218 ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿದ್ದರು.ಸುಮಾರು 40 ಮಕ್ಕಳು ರಂಗಮನೆಯಲ್ಲೇ ವಾಸ್ತವ್ಯ ಹೂಡಿದ್ದರು.
ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ತಾರಾನಾಥ ಕೈರಂಗಳ,ಭಾಸ್ಕರ ನೆಲ್ಯಾಡಿ, ವೇಣುಗೋಪಾಲ ಆಚಾರ್ಯ,ಮುರಳೀಧರ ಆಚಾರ್ಯ,ಶಿವಕುಮಾರ್ ಉಜಿರೆ,ರಾಜೇಶ್ವರಿ ಧಾರವಾಡ,ಸುನಂದಾ ನಿಂಬಾಳ್ಕರ್ ಧಾರವಾಡ,ಚಂದ್ರಾಡ್ಕರ್,ಡಾ|ಶ್ರೀಶಕುಮಾರ್ ಪುತ್ತೂರು,ಶಿವಗಿರಿ ಕಲ್ಲಡ್ಕ,ಪ್ರಿಯಾಂಶು ಕೆ.,ಪ್ರೇಂನಾಥ್ ಮರ್ಣೆ,ಶ್ರೀಹರಿ ಪೈಂದೋಡಿ,ಪ್ರಸನ್ನ ಐವರ್ನಾಡು,ಪದ್ಮನಾಭ ಕೊಯ್ನಾಡು,ರಾಜ್ ಮುಖೇಶ್,ಪಟ್ಟಾಭಿರಾಂ ಸುಳ್ಯ ,ಕೃಷ್ಣಪ್ಪ ಬಂಬಿಲ,ಮಯೂರ ಅಂಬೆಕಲ್ಲು,ನವೀನ್ ಪೀಲಾರು ಮುಂತಾದವರು ಭಾಗವಹಿಸಿದ್ದರು.
ಸಮಾರಂಭದ ಆರಂಭದಲ್ಲಿ ಪ್ರದರ್ಶನಗೊಂಡ ಮಕ್ಕಳೇ ರಚಿಸಿ,ನಿರ್ದೇಶಿಸಿದ,ಜನಜಾಗೃತಿ ಮೂಡಿಸುವ ವೈವಿಧ್ಯಮಯ ಹತ್ತು ನಾಟಕಗಳು ಪ್ರೇಕ್ಷಕರ ಮನಸೂರೆಗೊಂಡಿತು.ಭಾಗವಹಿಸಿದ 218 ಮಕ್ಕಳೂ ವೇದಿಕೆ ಏರಿ ಅದ್ಭುತವಾಗಿ ಅಭಿನಯಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತು.ಮಾ| ಮನುಜ ನೇಹಿಗ ಪ್ರರ್ಶಿಸಿದ ಮಣಿಪುರಿ ಸ್ಟಿಕ್ ಡ್ಯಾನ್ಸ್ ರೋಮಾಂಚನವಾಗಿತ್ತು.
ರಂಗಮನೆಯ ಪ್ರೇಕ್ಷಾಂಗಣ ಮಕ್ಕಳ ಹೆತ್ತವರಿಂದ ತುಂಬಿತುಳುಕಿತ್ತು. ಶಿಬಿರದಲ್ಲಿ ಕಲಿತ ರಂಗಗೀತೆ,ಜಾನಪದ ಗೀತೆಗಳನ್ನು ಮಕ್ಕಳು ಸಮೂಹವಾಗಿ ಹಾಡಿ ರಂಜಿಸಿದರು.ಭಾಗವಹಿಸಿದ ಶಿಬಿರಾರ್ಥಿಗಕಲಿಗೆ ಪ್ರಮಾಣ ಪತ್ರ ನೀಡಲಾಯಿತು.
ಜೀವನ್ ರಾಂ ಸುಳ್ಯ ಸ್ವಾಗತಿಸಿದರು.ರಂಗಮನೆ ವಿದ್ಯಾರ್ಥಿನಿ ಪೂರ್ಣ ಎಸ್.ಪ್ರಸಾದ್ ವಂದಿಸಿದರು.
ಪುಟಾಣಿ ಪ್ರಣಮ್ಯ ಕಾರ್ಯಕ್ರಮ ನಿರ್ವಹಿಸಿದರು.
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…