ಆರತಿಗೊಬ್ಬಳು ಮಗಳು ಹುಟ್ಟಿ ಮೂರು ವರ್ಷದ ನಂತರ ಕೀರ್ತಿಗೊಬ್ಬ ಮಗ ಜನಿಸಿದ್ದ.ಮೂರು ದಿನದ ಆಸ್ಪತ್ರೆ ವಾಸದ ನಂತರ ಮನೆಗೆ ಪುಟ್ಟ ಪಾಪುವಿನೊಂದಿಗೆ ಕಾಲಿರಿಸಿದ್ದೆ.ಎಲ್ಲಾ ಯಾವುದೇ ತೊಂದರೆಗಳಿಲ್ಲದೆ ಸುಸೂತ್ರವಾಗಿ ಆಗಿದೆ ಎನ್ನುತ್ತಾ ನಿಟ್ಟುಸಿರು ಬಿಟ್ಟು ಮನೆ ಮಂದಿ ಎಲ್ಲಾ ಮಧ್ಯಾಹ್ನದ ವಿಶ್ರಾಂತಿಯಲ್ಲಿದ್ದರು.ನಾನು ರೂಮ್‍ನಲ್ಲಿ ಪುಟ್ಟ ಮಗುವಿನೊಂದಿಗೆ ಬೆಚ್ಚಗೆ ಮಲಗಿದ್ದೆ.ನಿದ್ದೆ ಆವರಿಸಿದಂತಾಗಿತ್ತು.ಅಷ್ಟರಲ್ಲಿ ಮನೆಯಲ್ಲಿ ಏನೋ ಗಡಿಬಿಡಿಯ ಮಾತುಗಳು ಕೇಳಿಬಂತು.
ಏನಾಯಿತುಎಂದು ವಿಚಾರಿಸಲು ಹೋದರೆ ಮಗಳು ಜೋರಾಗಿ ಅಳುತ್ತಿದ್ದಳು. ಆಟವಾಡುತ್ತಾ ಇದ್ದ ಮಗಳು ತನ್ನ ಕಿವಿಯೊಳಗೆ ಥರ್ಮೋಕೋಲ್‍ನ ಉಂಡೆಗಳನ್ನು ತುರುಕಿಸಿಬಿಟ್ಟಿದ್ದಳು. ಅವು ಹೊರಗಡೆ ಬಾರದಿದ್ದಾಗ ಭಯಗೊಂಡು ನಿದ್ದೆಯಲ್ಲಿದ್ದಅಪ್ಪನನ್ನು ಎಬ್ಬಿಸಿ ವಿಷಯ ತಿಳಿಸಿದ್ದಳು. ನನ್ನ ಯಜಮಾನರು ಕೆಲವೊಂದು ಉಂಡೆಗಳನ್ನು ಹಾಗೋ ಹೀಗೋ ಸರ್ಕಸ್ ಮಾಡಿತೆಗೆದಿದ್ದರು.ಮಿಕ್ಕಿದ ಉಂಡೆಗಳು ನಾವು ಹೊರಬರಲಾರೆವುಎಂದು ಕಿವಿಯೊಳಗೆ ಭದ್ರವಾಗಿ ಕುಳಿತುಬಿಟ್ಟಿದ್ದವು.
ಕೂಡಲೇ ನಮ್ಮ ಫ್ಯಾಮಿಲಿ ಡಾಕ್ಟರ್ ಬಳಿ ಯಜಮಾನ್ರು ಮಗಳನ್ನು ಕರೆದುಕೊಂಡು ಹೋದರು.ಈ ಗಲಾಟೆಯಲ್ಲಿ ಡಾಕ್ಟರ್‍ಗೆ ಆ ದಿನ ರಜೆ ಎನ್ನುವುದು ಮರೆತುಹೋಗಿತ್ತು. ಬೇರೆ ದಾರಿ ಕಾಣದೆು ಇ.ಎನ್.ಟಿ. ಬಳಿ ಹೋದರು. ಅವರು ಇದನ್ನುತೆಗೆಯುವ ಪರಿಕರ ಈಗ ನನ್ನಲ್ಲಿಇಲ್ಲ. ನೀವು ನಾನಿರುವ ದೊಡ್ಡ ಆಸ್ಪತ್ರೆಗೆ ಬನ್ನಿ ಎಂದ ಕಾರಣ ಅಲ್ಲಿಗೆ ಕರೆದುಕೊಂಡು ಹೋಗಲಾಯಿತು. ಕಿವಿ ನೋವೇನೂ ಇಲ್ಲದಿದ್ದರೂ ಭಯ, ಗಾಬರಿಯಿಂದ ಒಂದೇ ಸಮನೆ ಅಳುತ್ತಿದ್ದ ಮಗಳ ರಾಗಮಾಲಿಕೆ ಅಲ್ಲಿಯ ನರ್ಸ್‍ಗಳನ್ನು ಕಂಡಿದ್ದೇ ತಡ ಇನ್ನೂ ಜೋರಾಯಿತು.ಅದೂಅಲ್ಲದೇ ಒಬ್ಬಳನ್ನೇ ಟ್ರೀಟ್‍ಮೆಂಟ್ ರೂಮ್‍ಗೆ ಕರೆದುಕೊಂಡು ಹೋಗಿದ್ದರು. ಚಿಕ್ಕವಳಾದ ಮಗಳು ಅಪ್ಪಾ ಬೇಕು ಎಂದು ಕೂಗಾಡಿದರೂ ಇವರನ್ನು ಒಳಗಡೆ ಬಿಡಲಿಲ್ಲ. ಕೊನೆಗೆ ಹಾಗೋ ಹೀಗೋ ಕೊಸರಾಡಿ ಡಾಕ್ಟರ್ ಕಿವಿಯಲ್ಲಿದ್ದ ಉಂಡೆಗಳನ್ನು ತೆಗೆದು ಬ್ಯಾಂಡೇಜ್ ಹಾಕಿ ಒಂದಿಷ್ಟು ಮಾತ್ರೆಗಳನ್ನು ಕೊಟ್ಟು ಬಿಟ್ಟಿದ್ದರು.
ಮನೆಗೆ ಬಂದ ಮಗಳು ಮಲಗಿದ್ದ ನನ್ನನ್ನುಅಪ್ಪಿಕಣ್ಣೀರು ಸುರಿಸಿದಳು.ಚಿಕ್ಕವನ ಆರೈಕೆಯಲ್ಲಿ ಮಗ್ನಳಾಗಿ ಪುಟ್ಟ ಮಗಳಿಗೆ ಈ ಸ್ಥಿತಿ ಬಂದೊದಗಿತಲ್ಲಾಎಂದು ಕರುಳು ಚುರುಕ್‍ಎಂದಿತು. ಈ ಒಂದು ಸಣ್ಣಘಟನೆ ಮುಂದಿನ ಎರಡು ವರ್ಷ ಮಗಳನ್ನು ಪದೇ ಪದೇಕಾಡುತ್ತಿತ್ತು. ಪ್ರತೀ ಬಾರಿ ಶೀತದಿಂದ ಕಿವಿ ನೋವಾದಾಗ ಆಕೆಗೆ ಥರ್ಮೋಕೋಲ್ ಘಟನೆ ನೆನಪಾಗಿ ಆ ಡಾಕ್ಟರ್ ಮಾಡಿದ ನೋವೇ ಇದಕ್ಕೆ ಕಾರಣ ಎಂದು ಭಯದಿಂದ ಅಳುತ್ತಿದ್ದಳು. ಆಕೆಯಲ್ಲಿ, ಇದು ಆ ನೋವಲ್ಲ. ಶೀತದಿಂದಾಗಿ ಉಂಟಾಗಿರುವ ನೋವು ಎಂದುಧೈರ್ಯತುಂಬಿ ಭಯವನ್ನು ಹೋಗಲಾಡಿಸುವಲ್ಲಿ ಕಷ್ಟಪಟ್ಟು ಸಫಲರಾದೆವು.ಆದರೂ ನಮ್ಮಿಬ್ಬರಲ್ಲಿ ಆ ನೋವು ಇನ್ನೂ ಹಾಗೇ ಇದೆ. ಏಕೆಂದರೆ ಮಗಳು ಕಿವಿಗೆ ಹಾಕಿದ ಥರ್ಮೋಕೋಲ್ ಉಂಡೆ ನಾನು ಮಾಡಿದ ಕ್ರಾಫ್ಟ್ ನದ್ದು ಹೇಗೂ ಹಳೆಯದಾಗಿದೆ. ಇನ್ನುಎಸೆಯಬೇಕು ಎಂದು ಆಲೋಚಿಸಿದ್ದೆ.ಆದರೆ ಕಾರ್ಯಗತ ಮಾಡಿರಲಿಲ್ಲ. ಅಷ್ಟರಲ್ಲಿ ಈ ಅನಾಹುತವಾಗಿ ಬಿಟ್ಟಿತು. ಮರುದಿನ ನಮ್ಮ ಫ್ಯಾಮಿಲಿ ಡಾಕ್ಟರ್ ಬಳಿ ಹೋಗಿದ್ದರೂ ಅವರು ಸುಲಭವಾಗಿ ತೆಗೆಯುತ್ತಿದ್ದರು.
ಚಿಕ್ಕ ಮಕ್ಕಳ ಮನಸ್ಸಿನಲ್ಲಿ ಉಂಟಾಗುವ ನೋವನ್ನುತೊಡೆದು ಹಾಕುವುದು ಸುಲಭದ ಮಾತಲ್ಲ. ಮನಸ್ಸಿಗೆ ನೋವಾಗುವಂತಹಯಾವುದೇ ಘಟನೆಗಳು ನಡೆದಿದ್ದರೆ ಮಾಸದಗಾಯವಾಗಿ ಉಳಿಯುವ ಮೊದಲೇ ಮನದಿಂದತೊಲಗಿಸಬೇಕಾದದ್ದು ಹೆತ್ತವರಕೈಯಲ್ಲಿದೆ.
# ವಂದನಾರವಿ.ಕೆ.ವೈ.ವೇಣೂರು
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…