ಮಕ್ಕಳ ಹಿತ ಧ್ಯಾನದಲ್ಲಿ ತೊಡಗಿರುವ ಶಿಕ್ಷಕ ಬಂಧುಗಳಿಗೆ ಪ್ರಣಾಮ ಸಲ್ಲಿಸಿದ ಶಿಕ್ಷಣ ಸಚಿವರು

August 2, 2020
5:37 PM

ಸುಳ್ಯ: ಕೊರೋನಾ ಸಮಯದಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶಿಕ್ಷಣದ ಕೊರತೆಯಾಗಬಾರದು ಎಂಬ ಉದ್ದೇಶದಿಂದ ನಿರಂತರ ಪ್ರಯತ್ನ ಮಾಡಿದ ಶಿಕ್ಷಕರಿಗೆ ರಾಜ್ಯದ ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್‌ ಪ್ರಣಾಮ ಸಲ್ಲಿಸಿದ್ದಾರೆ.

ಸುಳ್ಯದ ತಾಲೂಕಿನಲ್ಲಿ ಸರಕಾರಿ ಶಾಲೆಯ ಶಿಕ್ಷಕರು ಕೊರೋನಾ ಸಮಯದಲ್ಲಿ ನಿರಂತರ ಪ್ರಯತ್ನ ಮಾಡಿ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಕೆಲಸ ಜೂನ್‌ ತಿಂಗಳಿನಿಂದಲೇ ಆರಂಭ ಮಾಡಿದ್ದರು. ಜಿಲ್ಲೆಯ ಬೇರೆಲ್ಲೂ ಪಾಠ ಆರಂಭವಾಗದ ಹೊತ್ತಿನಲ್ಲಿ ಸುಳ್ಯದ ಶಿಕ್ಷಕರ ತಂಡ ಪಾಠದ ಬಗ್ಗೆ ಸಿದ್ಧವಾಗಿತ್ತು.  ಈ ಪಾಸಿಟಿವ್‌ ಸಂಗತಿಯ ಕಡೆಗೆ ಸುಳ್ಯನ್ಯೂಸ್‌.ಕಾಂ ಬೆಳಕು ಚೆಲ್ಲಿತ್ತು. ಇದನ್ನು ಗಮನಿಸಿದ ಶಿಕ್ಷಣ ಸಚಿವ‌ ಎಸ್.ಸುರೇಶ್‌ ಕುಮಾರ್‌ ತಮ್ಮ ಪೇಸ್‌ ಬುಕ್‌ ನಲ್ಲಿ ಶೇರ್‌ ಮಾಡಿ “ ಸರಕಾರಿ ಶಾಲಾ ಮಕ್ಕಳ ಹಿತ ಧ್ಯಾನದಲ್ಲಿಯೇ ತೊಡಗಿರುವ ಈ ನನ್ನ ಶಿಕ್ಷಕ ಬಂಧುಗಳಿಗೆ ಪ್ರಣಾಮ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಸುಳ್ಯ ನ್ಯೂಸ್‌ ವಿಶೇಷ ವರದಿ ಹೀಗಿದೆ…..

https://theruralmirror.com/?p=21918

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ : ಶಕ್ತಿಪೀಠಗಳಲ್ಲಿ ವಿಶೇಷ ಪೂಜೆ, ಮಂಗಳೂರು–ಮಡಿಕೇರಿ–ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ
October 11, 2026
10:37 AM
by: ದ ರೂರಲ್ ಮಿರರ್.ಕಾಂ
ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ : ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ
October 11, 2026
10:24 AM
by: ದ ರೂರಲ್ ಮಿರರ್.ಕಾಂ
ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ
October 10, 2026
2:55 PM
by: ದ ರೂರಲ್ ಮಿರರ್.ಕಾಂ
ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ
October 10, 2026
2:51 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror