Advertisement
ಅಪರಾಧ

ಮಗುವನ್ನೇ ಹೊಳೆಗೆ ಎಸೆದ ಇವಳೆಂತಹ ಕಟುಕ ತಾಯಿ…!

Share

ಮಂಗಳೂರು: ಬೆಳಗ್ಗೆ ಹೀಗೊಂದು ಮಾಹಿತಿ ಗುರುವಾರ ಬಂತು,  ಕುಂದಾಪುರ ತಾಲೂಕಿನ  ಎಡಮೊಗ್ಗೆ ಕುಮ್ಟಿಬೇರು ಎಂಬಲ್ಲಿ ರಾತ್ರಿ ತಾಯಿ ಜೊತೆಗೆ ಮಲಗಿದ್ದ ಎರಡು ಪುಟ್ಟ ಮಕ್ಕಳ ಪೈಕಿ ಒಂದು ಹೆಣ್ಣುಮಗು  ಸಾನ್ವಿಕಾಳನ್ನು ದುಷ್ಕರ್ಮಿಯೊಬ್ಬ ಕದ್ದೊಯ್ದಿದ್ದಾನೆ. ಈ ಸುದ್ದಿ ಎಲ್ಲೆಡೆ ಸಂಚಲನ ಮೂಡಿಸಿತು. ಶುಕ್ರವಾರ ಸಂಜೆಯ ಹೊತ್ತಿಗೆ ವಿಷಯ ಬಯಲಾಯಿತು, ತಾಯಿಯೇ ಹೆನ್ಣು ಮಗುವನ್ನು  ನದಿಗೆ ಎಸೆದಿದ್ದಳು..!. ಇದರ ನಡುವೆ ಇರುವ ಸತ್ಯದ ಬಗ್ಗೆ ಪೊಲೀಸರಿಂದ ತನಿಖೆ ನಡೆಯುತ್ತಿದೆ.

Advertisement
Advertisement

ಮಗು ಕಳುವಾಗಿದೆ ಎಂಬ ವಿಷಯವನ್ನು ಗಂಭೀರವಾಗಿ ತನಿಖೆಗೆ  ಕೈಗೆತ್ತಿಕೊಂಡಿದ್ದ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್  ಅವರು ಡಿವೈಎಸ್ಪಿ ಬಿ.ಪಿ.ದಿನೇಶ್ ಕುಮಾರ್ ಅವರಿಗೆ ತನಿಖಾ ಉಸ್ತುವಾರಿ ವಹಿಸಿದ್ದರು.  ಗುರುವಾರ ರಾತ್ರಿ ಬಾಲಕಿಯ ತಾಯಿ ರೇಖಾಳನ್ನು ಶಂಕರನಾರಾಯಣ ಠಾಣೆಗೆ ಕರೆಯಿಸಿ  ವಿಚಾರಣೆ ನಡೆಸಿದ ಬಳಿಕ ಪೊಲೀಸರಿಗೆ ಕೆಲವು ಮಾಹಿತಿಗಳು ಲಭ್ಯವಾಗಿದ್ದು, ಸಾನ್ವಿಕಾ ನಾಪತ್ತೆಯ ಹಿಂದೆ ತಾಯಿ ರೇಖಾ ಕೈವಾಡ ಇರುವುದು ಸ್ಪಷ್ಟವಾಯಿತು.

Advertisement

ಆರಂಭದಲ್ಲಿ ಮಗು ಅಪಹರಣದ ಬಗ್ಗೆ ಮಾತನಾಡಿದ್ದ ತಾಯಿ ರೇಖಾ, ಬೆಳಗ್ಗೆ ಸುಮಾರು  ನಾಲ್ಕೂವರೆ ಗಂಟೆಗೆ ಮನೆಯ ಹಿಂಬದಿಯ ಬಾಗಿಲಲ್ಲಿ ಒಳನುಗ್ಗಿದ ಬೂದು ಬಣ್ಣದ ಅಂಗಿ ಧರಿಸಿದ ಮುಸುಕುಧಾರಿ ವ್ಯಕ್ತಿಯೊಬ್ಬ ನೇರವಾಗಿ ಮೂವರು ಮಲಗಿದ್ದಲ್ಲಿಗೆ ಬಂದು ತಾಯಿ ಜೊತೆ ಮಲಗಿದ್ದ ಹೆಣ್ಣು ಮಗು ಸಾನ್ವಿಕಾಳನ್ನು ಎತ್ತಿಕೊಂಡಿದ್ದಾನೆ ಬಳಿಕ ಮನೆ ಸಮೀಪದ ಕುಬ್ಜಾ ನದಿಯನ್ನು ದಾಟಿ ನಾಪತ್ತೆಯಾಗಿರುವುದಾಗಿ ಹೇಳಿದ್ದಳು. ಆ ವ್ಯಕ್ತಿ ಹಿಂದೆಯೇ ಹೋಗಿ ನಾವೂ ನದಿ ಸೆಳೆತಕ್ಕೆ ಸಿಲುಕಿ ಪಾರಾಗಿದ್ದೆವು ಎಂದು ಕತೆ ಹೇಳಿದ್ದಳು.

ಆ ನಂತರ ಆಕೆಯ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂತು. ಪೊಲೀಸರು ಅತ್ಯಂತ ಗಂಭೀರವಾಗಿ ಹಾಗೂ ಸೂಕ್ಷ್ಮವಾಗಿ ಈ ಪ್ರಕರಣದ ತನಿಖೆ ನಡೆಸಿದರು. ಹಲವು ಬಾರಿ ವಿಚಾರಣೆ ಮಾಡಿದರು. ದೂರು ನೀಡಿದಾಕೆಯನ್ನೇ ಆಗಾಗ ವಿಚಾರಣೆ ಮಾಡುವುದು  ಕಷ್ಟದ ಮಾತಾಗಿದ್ದರೂ ಪೊಲೀಸರು ನಾಜೂಕಿನಿಂದ ಪ್ರಕರಣದ ತನಿಖೆ ನಡೆಸುತ್ತಲೇ ಹೋದರು, ಕೊನೆಗೆ ಪೊಲೀಸರು ಪ್ರಕರಣ ಬೇಧಿಸಿ ತಾಯಿಯೇ ಮಗುವನ್ನು ಹೊಳೆಗೆ ಎಸೆದಿರುವ ಅಂಶ ಬೆಳಕಿಗೆ ಬಂದಿತು. ಶುಕ್ರವಾರ ಮಗುವಿನ ಮೃತದೇಹವೂ ಪತ್ತೆಯಾಯಿತು. ಸಾನ್ವಿಕಾ ಸ್ವತಃ ತನ್ನ ತಾಯಿಯಿಂದಲೇ ಹತ್ಯೆಯಾಗಿದ್ದಾಳೆ ಎಂದು ಪೊಲೀಸರು ಕೊನೆಗೆ ದೃಢಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಪ್ರಕರಣದ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆತ್ಯಹತ್ಯೆ ಯತ್ನವೋ ಅಥವಾ ಕೊಲೆಯೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

Advertisement

ಪುಟ್ಟ ಮಗು, ಒಂದೂವರೆ ವರ್ಷದ ಮಗುವನ್ನು ನಿರ್ದಯವಾಗಿ ಹೊಳೆಗೆ ಎಸೆದಿರುವ ಘಟನೆ ಎಲ್ಲರ ಮನಕಲಕಿದೆ.

 

Advertisement

 

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಶಿಶಿಲದಲ್ಲಿರುವ ಈ ದೈವದ ವಿಶೇಷತೆ..! | ಜೋಡಿ ದೈವಗಳಿಗೆ ಜೀವಂತ ಕೋಳಿ ಅರ್ಪಣೆ |

ಗ್ರಾಮೀಣ ಭಾಗದ ನಂಬಿಕೆಗಳು ಮಾನಸಿಕವಾಗಿ ಹೆಚ್ಚು ಶಕ್ತಿ ನೀಡುತ್ತವೆ. ಅಂತಹದೊಂದು ನಂಬಿಕೆ ಶಿಶಿಲದಲ್ಲಿ…

5 hours ago

ಕೋವಿ ಡಿಪಾಸಿಟ್‌ ಪ್ರಕರಣ | ಮಹತ್ವದ ತೀರ್ಪು | ಚುನಾವಣಾ ಕಾಲದಲ್ಲಿ ಕೋವಿ ಡಿಪಾಸಿಟ್‌ಗೆ ಪರಿಹಾರ |

ಚುನಾವಣೆಯ ಸಮಯದಲ್ಲಿ ಕೋವಿ ಠೇವಣಾತಿಯ ಬಗ್ಗೆ ಕೃಷಿಕರ ಸಂಕಷ್ಟಕ್ಕೆ ನ್ಯಾಯಾಲಯವು ಪರಿಹಾರ ನೀಡಿದೆ.

6 hours ago

ಬಹುಬೆಳೆ ಬೆಳೆದು ಉತ್ತಮ ಫಸಲು ಪಡೆದ ರೈತ | ಕೃಷಿಗೆ ರೈತ ಅನುಸರಿಸಿದ ಕ್ರಮಗಳಾವುವು..?

ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ(Mixed cropping, alternating cropping, multiple…

14 hours ago

ಸ್ಟ್ರೀಟ್ ಫುಡ್ ವರ್ಸಸ್ ಆರೋಗ್ಯ | ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ

ಆಹಾರ ಹಾಗೂಆಹಾರ ಪದ್ಧತಿಗಳ ಬಗ್ಗೆ ವಿವೇಕ್‌ ಆಳ್ವ ಅವರು ಬರೆದಿದ್ದಾರೆ.

15 hours ago