ಸುಳ್ಯ: ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯಲ್ಲಿರುವ ಮತದಾರರ ಪರಿಶೀಲನೆ ನಡೆಯುತ್ತಿದ್ದು, ಎಲ್ಲಾ ಮತದಾರರು ಮತದಾರರ ಗುರುತಿನ ಚೀಟಿಯೋಂದಿಗೆ ಆಧಾರ್ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ಅಥವಾ ಆಧಾರ್ ಗುರುತಿನ ಚೀಟಿ ಇಲ್ಲದವರು ಪಡಿತರ ಚೀಟಿಯ ಜೆರಾಕ್ಸ್ ಪ್ರತಿಯನ್ನು ಸಂಬಂಧಿಸಿದ ಬಿಎಲ್ಓ ಗಳಲ್ಲಿ ಎರಡು ದಿನದಲ್ಲಿ ತಪ್ಪದೆ ನೀಡಲು ಮತದಾರರಲ್ಲಿ ಕೋರಲಾಗಿದೆ. ಅ.15 ರಂದು ಇವಿಪಿ ಸಾಫ್ಟ್‌ವೇರ್ ಬಂದ್ ಮಾಡಲಾಗುತ್ತದೆ.
ಮತದಾರರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಪರಿಶೀಲನೆ ಮಾಡಲು, ತಪ್ಪುಗಳೇನಾದರು ಇದ್ದರೆ ಸ್ವತಃ ಪರಿಶೀಲಿಸಿಕೊಳ್ಳಲು ಅವಕಾಶವಿದೆ. ತಪ್ಪುಗಳೇನಾದರೂ ಇದ್ದಲ್ಲಿ ಬೆರಳ ತುದಿಯಲ್ಲಿಯೇ ಸರಿಪಡಿಸಿಕೊಳ್ಳಲು ವೋಟರ್ ಹೆಲ್ಪ್ ಲೈನ್ ಮೊಬೈಲ್ ಆಪ್ ಮೂಲಕ ಚುನಾವಣಾ ಆಯೋಗ ಅ.15 ರವರೆಗೆ ಅವಕಾಶವ ಕಲ್ಪಿಸಿದೆ. ತಡ ಮಾಡದೇ ಇಂದೇ ಪರಿಶೀಲಿಸಿಕೊಳ್ಳಿ ಹಾಗೂ ನಿಮ್ಮ ಕುಟುಂಬವನ್ನು ಒಟ್ಟಿಗೆ ಇರುವಂತೆ ಟ್ಯಾಗ್ ಮಾಡಿಕೊಳ್ಳಿ ಎಂದು ಸುಳ್ಯ ತಹಶೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದೆ
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…