Advertisement
MIRROR FOCUS

ಆಚರಣೆಯ ಮೆರುಗು ಹೆಚ್ಚಿಸುವ ನವರಾತ್ರಿ ವೇಷಗಳು

Share

ಸುಳ್ಯ: ನವರಾತ್ರಿ ಎಂದೊಡನೆ ಮನಸಿಗೆ ಓಡೋಡಿ ಬರುವುದು ಶುದ್ಧ ಶಾಸ್ತ್ರೀಯ ಸಂಗೀತದ ಇಂಪು, ಚೆಂಡೆ, ವಾದ್ಯಗಳ ಅಬ್ಬರ, ನವರಾತ್ರಿ ವೇಷಗಳ ವರ್ಣ ವೈವಿಧ್ಯ. ನವರಾತ್ರಿ ಸಂಗೀತೋತ್ಸವಗಳ ಮೂಲಕ ಶಾಸ್ತ್ರೀಯ ಸಂಗೀತದ ಇಂಪು ಮನಸನ್ನು ಪುಳಕಿತಗೊಳಿಸಿದರೆ, ಚೆಂಡೆ ವಾದ್ಯಗಳ ಅಬ್ಬರದೊಂದಿಗೆ ಆರ್ಭಟಿಸುವ ರಾಕ್ಷಸ ವೇಷಗಳು, ವೈವಿಧ್ಯ ಕುಣಿತಗಳೊಂದಿಗೆ ತಂಡೋಪ ತಂಡವಾಗಿ ತಿರುಗಾಟ ನಡೆಸುವ ಹುಲಿ, ಸಿಂಹ, ಕರಡಿಯ ನವರಾತ್ರಿ ವೇಷಗಳು ದಸರಾ ಆಚರಣೆಯ ಮೆರುಗನ್ನು ಹೆಚ್ಚಸುತ್ತದೆ.

ನವರಾತ್ರಿ ಆರಂಭದಿಂದಲೂ ನಗರ, ಗ್ರಾಮದ ಬೀದಿಗಳಲ್ಲಿ ವೈವಿಧ್ಯಮಯ ಹುಲಿ, ಸಿಂಹ, ಕರಡಿ ವೇಷಗಳ ಕುಣಿತಗಳು ಜನಾಕರ್ಷಣೆಯನ್ನು ಪಡೆಯುತ್ತವೆ. ಜೊತೆಗೆ ಬೇಟೆಗಾರನ ವೇಷ, ಹಾಸ್ಯಗಾರನ ವೇಷಗಳು ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ. ಒಂದೆರಡು ರಾಕ್ಷಸ, ಹುಲಿ, ಕರಡಿ, ಸಿಂಹ ವೇಷಗಳು, ಚೆಂಡೆ ವಾದನಕಾರರು ಸೇರಿದ ಚಿಕ್ಕ ಚಿಕ್ಕ ತಂಡಗಳು ಒಂದೆಡೆಯಾದರೆ, 10- 15 ಹುಲಿ, ಸಿಂಹ, ಕರಡಿ ವೇಷಗಳನ್ನೊಳಗೊಂಡ ದೊಡ್ಡ ತಂಡಗಳೂ ಕಂಡು ಬರುತ್ತಾರೆ. ಪಾರಂಪರಿಕ ನವರಾತ್ರಿ ವೇಷಗಳು ತುಳುನಾಡಿನ ದಸರಾ ಆಚರಣೆಯ ಅವಿಭಾಜ್ಯ ಅಂಗ.

 

ಗ್ರಾಮ, ನಗರ ಬೀದಿಗಳಲ್ಲಿ, ಮನೆ ಮನೆಗಳಲ್ಲಿ ಹುಲಿ, ಕರಡಿ, ಸಿಂಹಗಳ ವೈವಿಧ್ಯ ವೇಷಗಳ ಮೈ ನವಿರೇಳಿಸುವ ಕುಣಿತಗಳು, ರಾಕ್ಷಸ ವೇಷದ ಅಬ್ಬರ ದಸರಾ ಆಚರಣೆಯ ವೈಭವವನ್ನು ಹೆಚ್ಚಿಸುತ್ತದೆ. ಒಂಭತ್ತು ದಿನಗಳ ಕಾಲ ವೇಷ ಧರಿಸಿ ನಾಡಿನಾದ್ಯಂತ ಸಂಚರಿಸಿ ಹಬ್ಬವನ್ನು ಸಂಪನ್ನಗೊಳಿಸುವ ನವರಾತ್ರಿ ವೇಷಗಳು ವಿಜಯದಶಮಿ ದಿನದಂದು ತಿರುಗಾಟವನ್ನು ಕೊನೆಗೊಳಿಸುತ್ತಾರೆ. ಶಾರದೋತ್ಸವ, ದಸರಾ ಮೆರವಣಿಗೆಗಳಲ್ಲಿಯೂ ಭಾಗವಹಿಸಿದ ಬಳಿಕ ವೇಷವನ್ನು ತೆಗೆಯುವರು. ಹರಕೆ ಹೇಳಿ ನವರಾತ್ರಿ ವೇಷ ಹಾಕುವವರೂ ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪಾರಂಪರಿಕ ನವರಾತ್ರಿ ವೇಷಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲದೆ ವೇಷ ಭೂಷಣಗಳಲ್ಲಿಯೂ ಬದಲಾವಣೆ ಕಾಣುತ್ತಿದೆ ಎನ್ನುತ್ತಾರೆ ಹಿರಿಯರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

1 day ago

ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…

1 day ago

ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ

ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…

1 day ago

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…

1 day ago

ಹವಾಮಾನ ವರದಿ | 3-10-2026 | ಬಂಗಾಳಕೊಲ್ಲಿಯಿಂದ ತೇವಾಂಶದ ಗಾಳಿ – ಕರ್ನಾಟಕದಲ್ಲಿ ಮತ್ತೆ ಮಳೆ?

ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…

2 days ago

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

2 days ago