ಸುಳ್ಯ: ಜಲಸಂರಕ್ಷಣೆಗಾಗಿ ಮನೆಗೊಂದು ಇಂಗು ಗುಂಡಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಸುಳ್ಯದ ಗಾಂಧಿನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಸಲಾಯಿತು.
ಸುಳ್ಯದ ಸ್ನೇಹ ಶಾಲೆ ನೇತೃತ್ವದಲ್ಲಿ ಸುಳ್ಯ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಮೂಲಕ ಸಣ್ಣ ಸಣ್ಣ ಇಂಗುಗುಂಡಿ ಹಾಗೂ ಮಕ್ಕಳಿಗೆ ನೀರಿಂಗಿಸುವಿಕೆಯ ಮಹತ್ವವನ್ನು ಸಾರುವ ಅಭಿಯಾನ ಉದ್ಘಾಟನೆಗೊಂಡಿತು. ಅಭಿಯಾನದ ಬಗ್ಗೆ ಮಾತನಾಡಿದ ಸ್ನೇಹ ಶಿಕ್ಷಣ ಸಂಸ್ಥೆಯ ಸಂಚಾಲಕ ಚಂದ್ರಶೇಖರ ದಾಮ್ಲೆ, ತಮ್ಮ ತಮ್ಮ ಮನೆಗಳ ಹಿತ್ತಲಿನಲ್ಲಿ ಎರಡು ಅಡಿ ಉದ್ದ, ಅಗಲ ಮತ್ತು ಆಳದ ಇಂಗು ಗುಂಡಿಗಳನ್ನು ಮಾಡುವಂತೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ 125 ವಿದ್ಯಾರ್ಥಿಗಳು ಇಂಗುಗುಂಡಿ ಮಾಡುವ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಎಸ್. ಪಿ. ಮಾತಾಡಿ ಮಕ್ಕಳು ಇಂತಹ ಅಭಿಯಾನದಲ್ಲಿ ಪಾಲ್ಗೊಳ್ಳುವ ಮಹತ್ವವನ್ನು ಹೇಳಿದರು. ಶಾಲಾ ಅಭಿವೃದ್ಧಿ ಮಂಡಲಿ ಸದಸ್ಯ ಕೆ.ಆರ್. ಮಹಮ್ಮದ್ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ನಳಿನಿ ಅವರು ನೀರಿಂಗಿಸುವಿಕೆಯ ಅಗತ್ಯವನ್ನು ಹೇಳಿದರು.
ಕಾರ್ಯಕ್ರಮದ ಬಳಿಕ ಸುಳ್ಯನ್ಯೂಸ್.ಕಾಂ ವತಿಯಿಂದ ಶಾಲೆಗೊಂದು ಹಣ್ಣಿನ ಗಿಡ ಎಂಬ ಉದ್ದೇಶದಿಂದ ಎರಡು ಹಣ್ಣಿನ ಗಿಡವನ್ನು ಸ್ನೇಹ ಶಿಕ್ಷಣ ಸಂಸ್ಥೆಯ ಸಂಚಾಲಕ ಚಂದ್ರಶೇಖರ ದಾಮ್ಲೆ ವಿತರಿಸಿದರು.
ಗಾಂಧಿನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಜಲಾಮೃತ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು. ಮಕ್ಕಳ ಮುಖದಲ್ಲಿನ ಮಂದಹಾಸ, ಇಂಗುಗುಂಡಿ ಮಾಡುವತ್ತ ಮಾಡಿದ ಮನಸ್ಸಿನ ಪ್ರತೀಕವೆಂಬಂತೆ ತೋರುತ್ತಿತ್ತು. ಸರಕಾರಿ ಶಾಲಾ ಮಕ್ಕಳು ಈ ಕಾರ್ಯದಲ್ಲಿ ಸಹಕರಿಸುವ ಭರವಸೆಯಿದೆ. – ಚಂದ್ರಶೇಖರ ದಾಮ್ಲೆ
ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…
ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…
ಮುಂಬರುವ ಜೂನ್ 30 ರೊಳಗಾಗಿ ಜಿಲ್ಲೆಯಲ್ಲಿ ಬಾಕಿ ಇರುವ ಕಂದಾಯ ಗ್ರಾಮಗಳ ರಚನೆಗೆ…
ಹೆಚ್ಚಿನ ವೈಯಕ್ತಿಕ ಸಲಹೆಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಭಾರತದ ಮೇಲೆ ನೈಋತ್ಯ ಮಾನ್ಸೂನ್‌ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515649