ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಎಸ್ ಕೆ ಎಸ್ ಎಸ್ ಎಫ್ ವಿಖಾಯ ತಂಡದ ಸುಳ್ಯ ಝೋನ್ ಇದರ ಜನರಲ್ ಕನ್ವೀನರ್ ತಾಜುದ್ದೀನ್ ಟರ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಮ್ಮೆಲೇ ಪ್ಲಾಸ್ಟಿಕ್ ನಿಷೇಧಿಸುವುದು ಅಸಾಧ್ಯದ ಮಾತು,
ಮೊದಲು ಮನೆಯಲ್ಲಿ ಉಪಯೋಗಿಸುವಂತಹ ಪ್ಲಾಸ್ಟಿಕ್ ಗಳನ್ನು ನಿಲ್ಲಿಸಬೇಕು. ನಂತರ ಪಕ್ಕದ ಮನೆ,ನೆರೆಕೆರೆಯವರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ನಂತರ ಅವರನ್ನೆಲ್ಲಾ ಸೇರಿಸಿ, ನಮ್ಮ ಬೀದಿಗಳಲ್ಲಿ,ಗ್ರಾಮಗಳಲ್ಲಿ ಹೀಗೆ ಮುಂದುವರಿಸಬೇಕು. ಮುಖ್ಯವಾಗಿ ಯಾವ ರೀತಿಯ ಪ್ಲಾಸ್ಟಿಕ್ ಎಂಬುದನ್ನು ಸಾರ್ವಜನಿಕರಿಗೆ ತಿಳಿಯಪಡಿಸಬೇಕು. ಎಲ್ಲ ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡದೇ ಇರಲು ಸಾಧ್ಯವಿಲ್ಲ( ನಂದಿನಿ ಹಾಲು ಪ್ಲಾಸ್ಟಿಕ್ ಪ್ಯಾಕೆಟ್ ನಲ್ಲಿ ಬರುವುದು). ಬಟ್ಟೆಯ ಹಾಗೂ ಪೇಪರ್ ಕೈ ಚೀಲ ಉತ್ಪಾದಿಸುವವರಿಗೆ ಸಹಕಾರ ನೀಡಬೇಕು ಮತ್ತು ಉತ್ಪಾದಿಸಲು ಪ್ರೇರೇಪಿಸುವುದು. ಮರುಬಳಕೆಯಾಗದಂತಹ ಪ್ಲಾಸ್ಟಿಕ್ ಯಾವುದು ? ಅದನ್ನು ಸಾರ್ವಜನಿಕರಿಗೆ ತಿಳಿಯಪಡಿಸಬೇಕು. ಕಸವಾಗಿ ಅತೀ ಹೆಚ್ಚು ಬೀದಿಯಲ್ಲಿ ಬಿಸಾಡುವ ಪ್ಲಾಸ್ಟಿಕ್ ಗಳನ್ನು ನಿಷೇಧಿಸಬಹುದು. ಸ್ಥಳೀಯ ವ್ಯಾಪಾರಿಗಳನ್ನು ಕರೆದು ಸಭೆ ನಡೆಸಿ ಪ್ಲಾಸ್ಟಿಕ್ ಕೈ ಚೀಲಗಳನ್ನು ವಿತರಿಸದಂತೆ ಮನವಿ ಮಾಡಬೇಕು.
ತಪ್ಪಿದ್ದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…