Advertisement
ಜಿಲ್ಲೆ

ಮರ ಸಾಗಾಟಕ್ಕೆ ಬೆಟ್ಟತ್ತೂರು ಗ್ರಾಮಸ್ಥರ ವಿರೋಧ

Share

ಮಡಿಕೇರಿ: ಚೇರಂಬಾಣೆ-ಬೆಟ್ಟತ್ತೂರು-ಮದೆನಾಡು ರಸ್ತೆಯಲ್ಲಿ ಕೇರಳ ಮೂಲದ ವ್ಯಕ್ತಿಗಳು ಭಾರೀ ಗಾತ್ರದ ವಾಹನಗಳಲ್ಲಿ ಮರದ ನಾಟಾಗಳನ್ನು ಸಾಗಿಸುತ್ತಿರುವುದರಿಂದ ರಸ್ತೆಗಳು ಹದಗೆಟ್ಟಿದ್ದು, ಜಿಲ್ಲಾಡಳಿತ ಈ ಮಾರ್ಗದಲ್ಲಿ ಟಿಂಬರ್ ಸಾಗಾಟಕ್ಕೆ ಅವಕಾಶ ನೀಡಬಾರದೆಂದು ಬೆಟ್ಟತ್ತೂರು ನಿವಾಸಿ, ಮಾಜಿ ಯೋಧ ಕಡ್ಯದ ಎಸ್.ಸುಬ್ಬಯ್ಯ ಒತ್ತಾಯಿಸಿದ್ದಾರೆ.ಸಮಸ್ಯೆಯ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯುವ ಸಲುವಾಗಿ ಮೇ.31 ರಂದು ಐದು ಗ್ರಾಮಗಳ ಗ್ರಾಮಸ್ಥರು ಕಾವೇರಿಸೇನೆ ಸಹಕಾರದೊಂದಿಗೆ ಕೊಳಗದಾಳು ಗ್ರಾಮ ವ್ಯಾಪ್ತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ.

Advertisement
Advertisement
Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ-ಭಾಗಮಂಡಲ ರಾಜ್ಯ ಹೆದ್ದಾರಿಯ ಚೇರಂಬಾಣೆಯಿಂದ ಕೊಟ್ಟೂರು, ಕೊಳಗದಾಳು, ಬೆಟ್ಟತ್ತೂರು, ಮದೆನಾಡು ಮೂಲಕ ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಸುಮಾರು 18ಕಿ.ಮೀ ಉದ್ದದ ರಸ್ತೆ ನಬಾರ್ಡ್ ಯೋಜನೆಯಡಿ ಹಲವು ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಪ್ರಸಕ್ತ ಜಿಲ್ಲಾ ಪಂಚಾಯತ್ ಅಧೀನದಲ್ಲಿದೆ. ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಿಲುಕಿದ ಜೋಡುಪಾಲ, ಕಾಟಕೇರಿ, ಮದೆನಾಡು, ಬೆಟ್ಟತ್ತೂರು ಗ್ರಾಮಗಳ ಸಂತ್ರಸ್ತರನ್ನು ಚೇರಂಬಾಣೆಯ ಸಂತ್ರಸ್ತರ ಕೇಂದ್ರಕ್ಕೆ ಸಾಗಿಸಲು ಇದೇ ರಸ್ತೆಯನ್ನು ಬಳಸಲಾಗಿದೆ. ಇದು ಮಂಗಳೂರು ರಸ್ತೆ ಹಾಗೂ ಭಾಗಮಂಡಲ ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯೂ ಆಗಿದೆ ಎಂದು ವಿವರಿಸಿದರು.

Advertisement

ಈ ರಸ್ತೆಯಲ್ಲಿ ಚೇರಂಬಾಣೆಯಿಂದ 6-7 ಕಿ.ಮೀ ದೂರದಲ್ಲಿ ರಸ್ತೆಯ ಎರಡೂ ಕಡೆಗಳಲ್ಲಿ ಕೇರಳ ಮೂಲದವರಿಗೆ ಸೇರಿದ ಸುಮಾರು 40ಎಕರೆ ಕಾಫಿ ತೋಟವಿದ್ದು, ಭಾರೀ ಗಾತ್ರದ ನೂರಾರು ಬಳಂಜಿ ಮರಗಳನ್ನು ಕಡಿಯಲಾಗಿದೆ. ಈ ಮರಗಳನ್ನು ಭಾರೀ ವಾಹನ ಹಾಗೂ ಕ್ರೇನ್‍ಗಳ ಮೂಲಕ ಇದೇ ರಸ್ತೆಯಲ್ಲಿ ಸಾಗಿಸಲಾಗುತ್ತಿದ್ದು, ಇದರಿಂದಾಗಿ ರಸ್ತೆ ಮತ್ತಷ್ಟು ಹದಗೆಟ್ಟಿದೆ. ಇದರಿಂದಾಗಿ ಈ ಭಾಗದ ಸುಮಾರು 5 ಗ್ರಾಮಗಳ ಗ್ರಾಮಸ್ಥರು ಸಣ್ಣ ವಾಹನಗಳನ್ನು ಚಾಲಿಸಲು ಮತ್ತು ಕಾಲ್ನಡಿಗೆಯಲ್ಲಿ ಸಾಗಲು ತೊಂದರೆಯಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನ ಸೆಳೆದಿರುವುದಾಗಿ ತಿಳಿಸಿದರು.

ಮೇ 31ರಂದು ಬೆಳಗ್ಗೆ 10 ಗಂಟೆಯಿಂದ ಸುಮಾರು 3 ಗಂಟೆಗಳ ಕಾಲ ಗ್ರಾಮದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಸುಬ್ಬಯ್ಯ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ  ಕಾವೇರಿಸೇನೆ ಸಂಚಾಲಕ ಕೆ.ಎ.ರವಿಚಂಗಪ್ಪ ಉಪಸ್ಥಿತರಿದ್ದರು.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ವರ್ಷದ ಬಳಿಕ ಮನೆಗೆ ಸೇರಿದ ಬಿಹಾರದ ಮಹಿಳೆ | ಪುನರ್ಜನ್ಮ ನೀಡಿದ ಸಾಯಿನಿಕೇತನ ಸೇವಾಶ್ರಮ |

ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ…

29 mins ago

ಮಕ್ಕಳ ಭ್ರಮೆ ಮತ್ತು ವಾಸ್ತವ

ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…

5 hours ago

ಮುಂದಿನ ವರ್ಷದಿಂದ ಎಪಿಎಂಸಿಗಳಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ

ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…

5 hours ago

ಶ್ರೀಲಂಕಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ |

ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…

15 hours ago

ರೈತ ಉಪಯೋಗಿ ಬಗೆ ಬಗೆಯ ಸರಕು ಸಾಗಣೆ ಗಾಡಿಗಳು

ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…

1 day ago

ಪ್ರಯಾಗ್ ರಾಜ್ ನಲ್ಲಿ  ಮಹಾ ಕುಂಭಮೇಳ | 150ಕ್ಕೂ ಹೆಚ್ಚು ವಿಶೇಷ ರೈಲು

ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ  ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …

1 day ago