ಮಳೆಕೊಯ್ಲು ಬಾವಿ ಉಳಿಸಿತು – ಕೃಷಿಕನ ಸುಲಭ ಪ್ರಯತ್ನ ಪರಿಣಾಮ ನೀಡಿತು

June 28, 2019
2:00 PM

ಗುತ್ತಿಗಾರು: ಮಳೆನೀರನ್ನು ಬಾವಿಗೆ ಬಿಡುವ ಮೂಲಕ ಬತ್ತಿ ಹೋಗುವ ಬಾವಿಯನ್ನು  ಮತ್ತೆ ಜೀವ ಮಾಡಿರುವ ಯಶೋಗಾಥೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಏರಣಗುಡ್ಡೆ ಬಳಿಯ ಮಲ್ಕಜೆಯ ಬಿಟ್ಟಿ ನೆಡುನೀಲಂ ಅವರದು.

Advertisement
Advertisement

ಕಳೆದ ಕೆಲವು ವರ್ಷಗಳಿಂದ ಅವರು ಮಳೆಕೊಯ್ಲು ಮಾಡುತ್ತಿದ್ದಾರೆ. ಯಾವುದೇ ದೊಡ್ಡ ಸಾಧನಗಳು ಇಲ್ಲದೆ, ತಮ್ಮ ಮನೆಯಲ್ಲೇ ಇರುವ ಸಾಮಾಗ್ರಿ ಬಳಸಿ ಮಳೆನೀರನ್ನು ಸೋಸಿ ಬಾವಿಗೆ ಬಿಡುತ್ತಿದ್ದಾರೆ. ಇದೀಗ ಬಾವಿಯಲ್ಲಿ ನೀರು ಉಳಿದಿದೆ. ಕಳೆದ 2 ವರ್ಷಗಳಲ್ಲಿ  ಬಿಟ್ಟಿ ನೆಡುನೀಲಂ ಅವರ ಈ ಯಶೋಗಾಥೆಯನ್ನು ವಿವಿಧ ಮಾಧ್ಯಮಗಳು ಫೋಕಸ್ ಮಾಡಿತ್ತು. ಮನೆಯ ಟೆರೇಸ್, ಛಾವಣಿ ನೀರನ್ನು 200 ಲೀಟರ್  ಬ್ಯಾರೆಲ್ ಮೂಲಕ ಸೋಸುವಂತೆ ಮಾಡಿ ಶುದ್ಧವಾದ ಬಳಿಕ ಬಾವಿಗೆ ಬಿಡುತ್ತಿದ್ದಾರೆ. ಹಿಂದೆಲ್ಲಾ ಸುಮಾರು ಮಾರ್ಚ್-ಎಪ್ರಿಲ್ ವೇಳೆಗೆ ಬಾವಿಯಲ್ಲಿ ನೀರು ಬರಿದಾಗುತ್ತಿತ್ತು. ಮಳೆಕೊಯ್ಲು ಮಾಡಿದ ಬಳಿಕ ನೀರು ಬತ್ತುವುದಕ್ಕೆ ತಡೆಯಾಗಿದೆ. ಅಲ್ಲದೆ ಬಾವಿಗಿಂತ ಕೆಳಗಿನ ಭಾಗದ ಕೆರೆಯಲ್ಲೂ ನೀರು ಹೆಚ್ಚಾಗಿದೆ ಎನ್ನುತ್ತಾರೆ ಬಿಟ್ಟಿ ನೆಡುನೀಲಂ.  ಬ್ಯಾರೆಲ್ ಒಳಗಡೆ ಜಲ್ಲಿ , ಮಸಿ ಹಾಗೂ ಮರಳನ್ನು  ಹಾಕಿ ನೀರು ಸೋಸುವಂತೆ ಮಾಡಿ ಬಾವಿಗೆ ಬಿಡುತ್ತಾರೆ. ಮಳೆಗಾಲ ಪೂರ್ತಿ ಈ ರೀತಿಯಾಗಿ ಬಾವಿಗೆ ನೀರು ಇಂಗುತ್ತದೆ.  ಈ ಮಾದರಿಯನ್ನು  ಎಲ್ಲಾ ಮನೆಗಳಲ್ಲೂ ಮಾಡಬಹುದಾಗಿದೆ.

Advertisement

 

ನಿಮಗೆ ತಿಳಿದಿರುವ ಮಳೆ ಕೊಯ್ಲು , ಜಲಸಂರಕ್ಷಣೆಯ ಸುಲಭ ಉಪಾಯಗಳನ್ನು , ಕೃಷಿಕರ ಮಾದರಿಗಳನ್ನು , ಸಣ್ಣ ಖರ್ಚಿನಲ್ಲಿ  ಮಾಡಬಹುದಾದ , ಮಾಡಿರುವ ಉದಾಹರಣೆಗಳು, ಯಾವುದೇ ಉಪಕರಣಗಳು ಇಲ್ಲದೆ ಮಾಡಬಹುದಾದ ಪ್ರಯತ್ನಗಳು ಇದ್ದರೆ ನಮಗೆ  ಇಮೈಲ್ ಅಥವಾ ವ್ಯಾಟ್ಸಪ್ ಮಾಡಿ ( [email protected] ಅಥವಾ 9449125447 )  ತಿಳಿಸಿ. ನಾವು ಸಮಾಜಕ್ಕೆ ತಿಳಿಸುತ್ತೇವೆ. 

Advertisement

 

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರ | ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
April 29, 2024
5:50 PM
by: The Rural Mirror ಸುದ್ದಿಜಾಲ
ಲೋಕಸಭೆ ಚುನಾವಣೆಗೆ ದಿನಗಣನೆ | ‘ಚುನಾವಣಾ ಪರ್ವ – ದೇಶದ ಗರ್ವ’ ಘೋಷ ವಾಕ್ಯದೊಂದಿಗೆ ಚುನಾವಣೆ | ಚುನಾವಣಾ ಆಯೋಗದಿಂದ ಭರದ ಸಿದ್ಧತೆ
April 23, 2024
1:25 PM
by: The Rural Mirror ಸುದ್ದಿಜಾಲ
ಬಿಸಿಲಿನ ಬೇಗೆ | ಬೆಂಗಳೂರಿನಲ್ಲಿ ಗರಿಷ್ಟ ತಾಪಮಾನ | ಕರಾವಳಿಯಲ್ಲೂ ತಲಪಿತು 39 ಡಿಗ್ರಿ…! | ಮಳೆಯಾಗಿಲ್ಲ ಇನ್ನೂ….|
April 7, 2024
10:39 PM
by: ದ ರೂರಲ್ ಮಿರರ್.ಕಾಂ
ಚುನಾವಣೆಯ ಹೆಸರಿನಲ್ಲಿ ಕೃಷಿಕರ ಕೋವಿ ಠೇವಣಾತಿ | ವಿಶೇಷ ಸಭೆ ಸೇರಿ ವಿನಾಯಿತಿ ನೀಡಿದ ಸ್ಕ್ರೀನಿಂಗ್‌ ಕಮಿಟಿ…! |
April 3, 2024
7:30 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror