ಕೇರಳದಿಂದ ಮುಂಗಾರು ಮಳೆ ರಾಜ್ಯಕ್ಕೆ ಪ್ರವೇಶ ಮಾಡಿದೆ. ಈ ಬಾರಿ ಅಂಫಾನ್ ಚಂಡಮಾರುತದ ಜೊತೆ ಜೊತೆಗೇ ಆರಂಭವಾದ ಮುಂಗಾರು ಮಳೆ ನಿಗದಿತ ಸಮಯಕ್ಕೆ ಕೇರಳ ಪ್ರವೇಶ ಮಾಡಿದೆ. ಜೂ.7 ರಿಂದ ರಾಜ್ಯದಲ್ಲಿ ಮಳೆ ಚುರುಕಾಗಲಿದ್ದು ಜೂ.9 ರಿಂದ ಎಂದಿನಂತೆ ಸುರಿಯಲಿದೆ. ಈ ನಡುವೆ ಜೂನ್ 4 ರಂದು ಕರಾವಳಿಗೆ ಆಗಮಿಸಿರುವ ಮುಂಗಾರು ಸದ್ಯ ದಕ್ಷಿಣ ಒಳನಾಡನ್ನು ಆವರಿಸಿದೆ. ಹೀಗಾಗಿ ನಿರೀಕ್ಷೆಗಿಂತಲೂ ಮೊದಲೇ ಕರ್ನಾಟಕದ ಒಳನಾಡಿನಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಿನ ಲೆಕ್ಕಾಚಾರ ಪ್ರಕಾರ ವಾಡಿಕೆಯಂತೆ ಈ ಬಾರಿ ಮಳೆ ಸುರಿಯಲಿದೆ.
Advertisement
ಕೇರಳದಿಂದ ಜೂನ್ 4 ರಂದು ಕರಾವಳಿಗೆ ಮುಂಗಾರು ಮಳೆ ಕಾಲಿಟ್ಟಿದ್ದರೂ ಚಂಡಮಾರುತದ ಕಾರಣದಿಂದ ಕೊಂಚ ನಿಧಾನವಾಗಿ ಈಗ ಮತ್ತೆ ವೇಗ ಪಡೆದಿದೆ. ಕರ್ನಾಟಕದಲ್ಲಿ ಭಾನುವಾರದಿಂದ ಮುಂಗಾರು ಚುರುಕುಗೊಳ್ಳಲಿದೆ. ಜೂನ್ 9 ರಿಂದ ಹೆಚ್ಚು ಮಳೆ ಬೀಳಲಿದೆ.
ಈ ಬಾರಿ ಜೂನ್ 11-12 ರೊಳಗೆ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಈಶಾನ್ಯ ರಾಜ್ಯಗಳಿಗೆ ಮುಂಗಾರು ಮಳೆ ತಲುಪಲಿದೆ. ವಾಯುಭಾರ ಕುಸಿತದ ಕಾರಣದಿಂದ ನೈರುತ್ಯ ಮಾನ್ಸೂನ್ ವೇಗ ಪಡೆಯುತ್ತಿದೆ. ಇದರಿಂದಾಗಿ ದೇಶದ ವಿವಿದೆಡೆ ನಿರೀಕ್ಷೆಗಿಂತಲೂ ಬೇಗನೆ ಮಳೆಯಾಗಲಿದೆ. ಮಂಗಳವಾರದ ವೇಳೆಗೆ ಮಧ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆ ಇದೆ. ಹೀಗಾಗಿ ಪಶ್ಚಿಮ ಬಂಗಾಳ, ಒಡಿಶಾ, ಸಿಕ್ಕಿಂ ಮತ್ತು ಈಶಾನ್ಯ ರಾಜ್ಯಗಳ ಕೆಲವು ಭಾಗಗಳಿಗೆ ಮುಂಗಾರು ವೇಗ ಪಡೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ ಎರಡು ದಿನಗಳಲ್ಲಿ,ನೈರುತ್ಯ ಮಾನ್ಸೂನ್ ಕರ್ನಾಟಕದ ಕೆಲವು ಭಾಗಗಳು, ತಮಿಳುನಾಡು ಮತ್ತು ಕರಾವಳಿ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ನಡುವೆ ಕೇರಳದಲ್ಲಿ ಮೀನುಗಾರರಿಕೆ ಎಚ್ಚರಿಕೆ ನೀಡಲಾಗಿದೆ. ಕೇರಳ ಪ್ರದೇಶದ ಸಮುದ್ರದಲ್ಲಿ ಗಾಳಿಯ ವೇಗವು 45-55 ಕಿ.ಮೀ ಹೊಂದಲಿದ್ದು ಕೇರಳ ಕರಾವಳಿಯಲ್ಲಿ ಮತ್ತು ಲಕ್ಷದ್ವೀಪ ಪ್ರದೇಶದಲ್ಲಿ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ.
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…