Advertisement
ವಿಶೇಷ ವರದಿಗಳು

ಮಳೆ‌ ತಂದ ಸಂಕಷ್ಟಕ್ಕೆ ನೆರವಾದ ನಮ್ಮವರಿಗೆ ಧನ್ಯವಾದ ಹೇಳೋಣ…..

Share

ಸುಳ್ಯ: ಮಳೆ ಇಲ್ಲ, ಕಡಿಮೆ ಎನ್ನುತ್ತಿದ್ದಂತೆಯೇ ವಿಪರೀತ ಮಳೆಯಾಯಿತು.‌3 ದಿನದಲ್ಲಿ ಭಾರಿ ಮಳೆಯಾಯಿತು. ವಿವಿದೆಡೆ ಸಂಕಷ್ಟ ತಂದಿತು. ಈ ಸಂದರ್ಭ ನೆರವಾದ ನಮ್ಮವರಿಗೆ ಧನ್ಯವಾದ ಹೇಳಬೇಕು.‌

ಆಡಳಿತ ಯಂತ್ರದ ನಿರ್ದೇಶನದ ಮೂಲಕ ಕೆಲಸ ಮಾಡಿದರು.‌ಜನಪ್ರತಿನಿಧಿಗಳಿಗೆ ಕೆಲಸವೇ ಇಲ್ಲವೇನೋ ಎಂದು ಹಲವು ಕಡೆ ಅನಿಸಿತು.

ಹೀಗೆಲ್ಲಾ ಕೆಲಸವಾಯ್ತು….

ಮರ್ಕಂಜ ಗ್ರಾಮದ ಚೀಮಾಡು ರಾಧಾಕೃಷ್ಣ ಗೌಡ ಎಂಬವರ ಮನೆಗೆ ಧಾರಾಕಾರ ಸುರಿದ ಮಳೆಯಿಂದಾಗಿ ಮಂಗಳವಾರ ಸಂಜೆ ಮಣ್ಣು ಕುಸಿದು ಬಿದ್ದಿದ್ದು ಶ್ರೀ ಶಾಸ್ತಾವು ಯುವಕ ಮಂಡಲ(ರಿ)ರೆಂಜಾಳ ಇದರ ಸದಸ್ಯರು ರಾತ್ರಿಯೇ ತೆರಳಿ ಮನೆಗೆ ಬಿದ್ದ ಮಣ್ಣು ತೆರವುಗೊಳಿಸಿ ಮತ್ತಷ್ಟು ಮಣ್ಣು ಕುಸಿದು ಬೀಳದಂತೆ,ಮಳೆ ನೀರು ಟರ್ಪಾಲ್ ಮೂಲಕ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದರು.
ಈ ಸಂದರ್ಭದಲ್ಲಿ ಯುವಕ ಮಂಡಲದ ಕಾರ್ಯದರ್ಶಿ ರಾಜೇಶ್ ಬೇರಿಕೆ,ಶಶಿಕಾಂತ್ ಗುಳಿಗಮೂಲೆ,ವಿಶ್ವನಾಥ ಪೈಲೂರು,ಗಿರೀಶ ಕೊಡಪಾಲ,ಶೋಭಿತ್ ಕಟ್ಟಕೋಡಿ,ಅಜಿತ್ ರೆಂಜಾಳ,ಚಂದ್ರಶೇಖರ ಪೈಲೂರು ಮೊದಲಾದವರಿದ್ದರು.

ಪರಿವಾರಕಾನ ರಸ್ತೆ ಗೆ ಅಡ್ಡಬಿದ್ದ ಮರ ಹಾಗೂ ವಿದ್ಯುತ್ ಸಂಪರ್ಕ ಕಡಿತವಾಗಿತ್ತು.ಇದನ್ನು ಗಮನಿಸಿದ ಯುವ ಬ್ರಿಗೇಡ್ ತಕ್ಷಣ ಮರವನ್ನು ತೆಗೆದು ವ್ಯವಸ್ಥೆ ಮಾಡಿ ಕೊಟ್ಟರು.

ಪ್ಲಡ್ ರೆಸ್ಕ್ಯೂ ವಾಲಿಂಟಿಯರ್ ಗ್ರೂಪ್‌ ನ ಸದಸ್ಯರಾದ ಲೋಕೇಶ್ ಗುಡ್ಡೆಮನೆ,ವಿನೊದ್ ಲಸ್ರಾದೊ, ಮಲ್ಲಿಕಾರ್ಜುನ ಪ್ರಸಾದ್ ಬೆಳ್ಳಿಗ್ಗೆಯಿಂದಲೇ ಕಾರ್ಯಪ್ರವೃತರಾಗಿ ಗಂಜಿ ಕೇಂದ್ರಕ್ಕೆ ಭೇಟಿ ನೀಡಿದರು. ಮಳೆ ಕಡಿಮೆಯಾಗದಿದ್ದಾರೆ , ಸುಬ್ರಹ್ಮಣ್ಯ ಹಾಗೂ ಕಲ್ಮಕಾರು ನಡುವಿನ ರಸ್ತೆ ಸಂಪರ್ಕವೂ ಕಡಿತಗೊಳ್ಳುವ ಸಾದ್ಯತೆಯಿದ್ದು ಆ ಸಂಧರ್ಭದಲ್ಲಿ ಗಂಜಿ ಕೇಂದ್ರದಲ್ಲೆ ಅಹಾರ ತಯಾರಿಸುವ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚಿಂತನೆ ನಡೆದಿದೆ.ಹಾಗಾಗಿ ಅಡುಗೆಗೆ ಅಗತ್ಯವಾಗಿ ಬೇಕಾದ ತರಕಾರಿಯನ್ನು ಪ್ಲಡ್ ರೆಸ್ಕ್ಯೂ ಗ್ರೂಪಿನ ಸದಸ್ಯರ ಕೋರಿಕೆಯ ಮೇರೆಗೆ ಎಸ್ಸ್ ಎಸ್ಸ್ ಎಪ್, ಎಸ್ ವೈ ಎಸ್ ರೆಡ್ ಕ್ರಾಸ್ ಸುಳ್ಯ ಸಂಸ್ಥೆಯ ಸದಸ್ಯರು ನೀಡುವ ಮೂಲಕ ಸಹಕರಿಸಿದರು.

ಸುಬ್ರಹ್ಮಣ್ಯ ಗ್ರಾಮದ ಸುಮಾರು ಹತ್ತು ಮನೆಗಳು ಅತಿಯಾದ ಮಳೆಗೆ ಜಲಾವೃತಗೊಂಡಿದ್ದು ವಸತಿ ವ್ಯವಸ್ಥೆ ಇಲ್ಲಾವಾದವರಿಗೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಯ ವಸತಿಗೃಹದಲ್ಲಿ ದೇವಸ್ಥಾನದ ವತಿಯಿಂದ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ.ದಯವಿಟ್ಟು ವಸತಿ ವ್ಯವಸ್ಥೆ ಇಲ್ಲದವರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಪಂಚಾಯತ್ ಪ್ರಕಟನೆ ತಿಳಿಸಿದೆ. ವಸತಿ ವ್ಯವಸ್ಥೆ ಇಲ್ಲದ ಗ್ರಾಮಸ್ಥರು ತೊಂದರೆಯಲ್ಲಿದ್ದರೇ ದಯವಿಟ್ಟು ಕರೆ ಮಾಡಬಹುದು,

ಪ್ರಶಾಂತ್ ಭಟ್ ಮಾಣಿಲ – 9902470408 :  ಮುತ್ತಪ್ಪ- 9900369510

ಇಲ್ಲವೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಯ ವಸತಿಗೃಹ ದಲ್ಲಿ ತಾತ್ಕಾಲಿಕ ವಸತಿ ಪಡೆಯಬಹುದು ಎಂದು ಪ್ರಕಟಣೆ ನೀಡಿದರು ಪ್ರಶಾಂತ್ ಭಟ್.

ಸುಳ್ಯ ಓಡಾಬಾಯಿಯಲ್ಲಿ ಜಲಾವೃತಗೊಂಡ ಮನೆಯಲ್ಲಿ ಸಕ್ರೀಯ ಕಾರ್ಯಾಚರಣೆಯಲ್ಲಿ ತೊಡಗಿರುವ ಎಸ್.ವೈ.ಎಸ್, ಎಸ್ಸೆಸ್ಸೆಫ್ ಕಾರ್ಯಕರ್ತರು ಮನೆಯೊಂದರ ಒಳಗೆ ನೀರು ತುಂಬಿದ ವಿಷಯ ತಿಳಿಯುತ್ತಿದ್ದಂತೆ  ಕ್ಲಪ್ತ ಸಮಯದಲ್ಲಿ ಮನೆಯವರಿಗೆ ಧೈರ್ಯ ತುಂಬುದರೊಂದಿಗೆ ಒಳ ಹೊಕ್ಕ ನೀರು ಮತ್ತು ಮಣ್ಣನ್ನು ತೆಗೆದು ಸಹಕರಿಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿಯಾದ ಮಳೆಯಿಂದ ಮರ ಬಿದ್ದು ಸಂಚಾರ ಅಸ್ತವ್ಯಸ್ತವಾದಾಗ ಕಿಶೋರ್ ಶಿರಾಡಿ ನೇತೃತ್ವದಲ್ಲಿ ಬಿದ್ದ ಮರವನ್ನು ತೆರವುಗೊಳಿಸಲಾಯಿತು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಶಾಂತಿಮೂಲೆ ಎಂಬಲ್ಲಿರುವ ಗುಣಪಾಲ ಎಂಬವರ ಮನೆಯ ಶೌಚಾಲಯದ ಮೇಲೆ ಬೆಳಿಗ್ಗೆ ಸುರಿದ ಭಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ಬಿದ್ದು ಶೌಚಾಲಯ ಸಂಪೂರ್ಣ ಹಾನಿಯಾಗಿರುತ್ತದೆ ಸುಳ್ಯ ತಹಶೀಲ್ದಾರ್ ಕುಂಞಿ ಅಹಮ್ಮದ್ ಅವರ ಆದೇಶದಂತೆ ಸುಳ್ಯ ಗೃಹರಕ್ಷಕದಳದ ಪ್ರವಾಹ ರಕ್ಷಣಾ ತಂಡದ ಸಿಬ್ಬಂದಿಗಳಾದ ಅಬ್ದುಲ್ ಗಫೂರ್, ಲಿಖಿನ್ ಕುಮಾರ್,ಶಿವಪ್ರಸಾದ್ ಮತ್ತು ನಿತಿನ್ ಕುಮಾರ್ ಇವರು ಸ್ಥಳಕ್ಕೆ ತೆರಳಿ ಮರವನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾದ ಸುಂದರ್ ಪಾಟಾಜೆ ಹಾಗೂ ಸದಸ್ಯರು ಸಹಕರಿಸಿದರು.

ಜಟ್ಟಿಪಳ್ಳ ಟ್ರಾನ್ಸ್ ಫಾರ್ಮರ್ ಮೇಲೆ ಮರ ಬಿದ್ದು ಕರೆಂಟ್ ಕಂಬ ಮತ್ತು ವಿದ್ಯುತ್ ಲೈನ್ ತುಂಡು ತುಂಡಾಗಿ ಬಿದ್ದಿದ್ದು ಕೂಡಲೇ ಸುಳ್ಯ ರಕ್ಷಣಾ ತಂಡ ಮತ್ತು ಮೆಸ್ಕಾಂ ಸಿಬ್ಬಂದಿಗಳಿಂದ ತೆರವು ಕಾರ್ಯಚರಣೆ ನಡೆಯಿತು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!

ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…

47 minutes ago

ರಸ್ತೆ ಬದಿ ಕಸ ಎಸೆದ್ರೆ ಜಾಗ್ರತೆ..! ದಂಡ ಕೊಡ್ಲಿಲ್ಲ ಅಂದ್ರೆ FIR ಫಿಕ್ಸ್..!

ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…

5 hours ago

ಹವಾಮಾನ ವರದಿ | 02-04-2026 | ಕರಾವಳಿಯಲ್ಲಿ ಮಳೆ ಅನಿಶ್ಚಿತತೆ, ಒಳನಾಡಿನಲ್ಲಿ ಬಿಸಿಲು

ಕರಾವಳಿಯಲ್ಲಿ ಮಳೆಯ ಸಾಧ್ಯತೆ ಇದ್ದರೂ ಗಾಳಿಯ ಪ್ರಭಾವದಿಂದ ಅದು ಕಡಿಮೆಯಾಗಬಹುದು. ಉಳಿದ ಕರ್ನಾಟಕದಲ್ಲಿ…

23 hours ago

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ

ಅಡಿಕೆ ಮಾರುಕಟ್ಟೆ ಸ್ಥಿರದಿಂದ ಏರಿಕೆಯತ್ತ ಸಾಗುತ್ತಿದೆ. ಜೂನ್-ಜುಲೈನಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

1 day ago

ಜನಗಣತಿ 2026 – ಏಪ್ರಿಲ್ 1ರಿಂದ ಸ್ವಯಂ-ಎಣಿಕೆ ಆರಂಭ – ಸಹಕರಿಸಲು ಜಿಲ್ಲಾಧಿಕಾರಿ ಕರೆ

ಏಪ್ರಿಲ್ 1ರಿಂದ 15ರವರೆಗೆ ಸ್ವಯಂ-ಎಣಿಕೆ ಆರಂಭವಾಗಿದೆ. ಏಪ್ರಿಲ್ 16ರಿಂದ ಮನೆಗಳಿಗೆ ಭೇಟಿ ನೀಡಿ…

1 day ago

ಹವಾಮಾನ ವರದಿ | 01-04-2026 | ಕರಾವಳಿ-ಮಲೆನಾಡಿನಲ್ಲಿ ಗುಡುಗು ಮಳೆ ಮುಂದುವರಿಕೆ – ಏ.10 ರಿಂದ ಮತ್ತೆ ಮಳೆ ಚುರುಕು ಸಾಧ್ಯತೆ!

ಏಪ್ರಿಲ್ 4ರವರೆಗೆ ಮಳೆ ಮುಂದುವರಿಯಲಿದೆ, ಬಳಿಕ ತಾತ್ಕಾಲಿಕ ಕಡಿಮೆ. ಏಪ್ರಿಲ್ 10ರಿಂದ ಮತ್ತೆ…

2 days ago