ಸುಳ್ಯ: ತಾಲೂಕಿನ ಕೆಲವು ಕಡೆ ಶನಿವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಮಳೆಯಾಗಿದೆ. ಸುಬ್ರಹ್ಮಣ್ಯ ಬಳಿಯ ಕಲ್ಲಾಜೆ, ಗುತ್ತಿಗಾರಿನ ಕೆಲವು ಕಡೆ , ಏನೆಕಲ್ಲು ಸೇರಿದಂತೆ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಹನಿ ಮಳೆಯಾಗಿದೆ. ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಕಂಡುಬಂದಿತ್ತು.
ಹವಾಮಾನ ಮುನ್ಸೂಚನೆ ಪ್ರಕಾರ ಸುಳ್ಯ, ಸುಬ್ರಹ್ಮಣ್ಯ, ಪುತ್ತೂರು, ಗುಂಡ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಮಳೆಯ ಸಾಧ್ಯತೆ ಇದೆ.
ಬಂಗಾಳ ಕೊಲ್ಲಿಯ ಅಂಡಮಾನ್ ದ್ವೀಪದ ಬಳಿ ವಾಯುಭಾರ ಕುಸಿತವಾಗಿದೆ. ಹೀಗಾಗಿ ಇನ್ನೂ ಕೆಲವು ದಿನ ಮಳೆಯಾಗುವ ಮುನ್ಸೂಚನೆ ಇದೆ. ವಾಯುಭಾರ ಮತ್ತಷ್ಟು ಕುಸಿತವಾಗುತ್ತಿದ್ದು ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದ್ದು ಹವಾಮಾನದ ಸ್ಪಷ್ಟ ಚಿತ್ರಣವು ಭಾನುವಾರ ಸಿಗಲಿದೆ. ಚಂಡಮಾರುತ ಉಂಟಾದರೆ ಭಾರತದ ಪಶ್ಚಿಮ ಕರಾವಳಿಯಲ್ಲಿ ಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಮೇ.10 ಹಾಗೂ 11 ರಂದು ಮಳೆಯ ಸಾಧ್ಯತೆ ಹೆಚ್ಚಿದೆ.
ಆದರೆ ಭೂ ಮಧ್ಯೆ ರೇಖೆ ಗಿಂತ ಕೆಳ ಭಾಗದಲ್ಲಿ ಚಂಡಮಾರುತ ಉಂಟಾದರೆ ಬಂಗಾಳಕೊಲ್ಲಿ ಅಥವಾ ಅರಬ್ಬಿ ಸಮುದ್ರಕ್ಕೆ ಹೆಚ್ಚಿನ ಸಂದರ್ಭ ಚಂಡಮಾರುತ ಪ್ರವೇಶಿಸುವುದಿಲ್ಲ. ಹೀಗಾಗಿ ವಾಯುಭಾರ ಕುಸಿತದಿಂದ ಮಳೆ ಮಾತ್ರವೇ ಬರಬಹುದು ಎಂಬ ವಿಶ್ಲೇಷಣೆಯೂ ಇದೆ.
ಶನಿವಾರ ಮಧ್ಯಾಹ್ನ ಸುರಿದ ಮಳೆ:
ಈ ಬಾರಿ ಮುಂಗಾರು ಮಳೆ ನಿಗದಿತ ಸಮಯದಲ್ಲೇ ಆರಂಭವಾಗಲಿದೆ ಎನ್ನುವುದು ಈಗಿನ ಅಂದಾಜು. ಜೂನ್ ಮೊದಲ ವಾರದಲ್ಲಿ ಕೇರಳವನ್ನು ಮುಂಗಾರು ಮಳೆ ಪ್ರವೇಶಿಸಿ ಉತ್ತಮ ಮಳೆಯಾಗಲಿದೆ. ಅದಾದ 4 ದಿನದಲ್ಲಿ ಕರ್ನಾಟಕ ಕರಾವಳಿ ಪ್ರವೇಶ ಮಾಡುವ ಮುಂಗಾರು ಜೂನ್. 27 ರ ವೇಳೆಗೆ ನವದೆಹಲಿಗೆ ಪ್ರವೇಶವಾಗಬಹುದು , ಅದಕ್ಕೂ ಮುನ್ನ ಜೂ. 11 ರ ಸುಮಾರಿಗೆ ಮುಂಬೈ, ಕೋಲ್ಕತ್ತಾ ಮೊದಲಾದ ಕಡೆಗಳಲ್ಲಿ ಸುರಿಯಬಹುದು ಎನ್ನುವುದು ನಿರೀಕ್ಷೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…