( ಮಳೆಯ ಬಗ್ಗೆ ಮಲೆಯಾಳದಲ್ಲಿ ಬರೆದಿರುವ ಬರಹವೊಂದರ ಅನುವಾದ ಹೀಗಿದೆ )
ಇಂದು ಮಳೆ ನುಡಿಯಿತು….
ಅಂದು ನಾನು ಹಲವು ಬಾರಿ ಹೇಳಿದ್ದೆ, ಬೇಡ.. ಬೇಡ ಅಂತ… ಆದರೆ ನೀವು ನನ್ನ ದಾರಿ ಅಡ್ಡಗಟ್ಟಿದಿರಿ.
ಹೊಳೆಯೂ ಹೇಳಿತು…
ಅಂದು ನಾನು ತುಂಬಾ ಉಕ್ಕಿ ಹರಿದಿದ್ದೆ…
ಆದರೆ ನೀವು ನನ್ನ ಹೃದಯ ಹಿಸುಕಿ,ನನ್ನ ದಡವನ್ನು ಆಕ್ರಮಿಸಿದಿರಿ
ಭೂಮಿಯೂ ಹೇಳಿತು…
ಅಂದು ನಾನು ಸಾಕಷ್ಟು ಜಲ ಹೀರಿದ್ದೆ…
ಆದರೆ ಇಂದು ನೀವು ನನ್ನ ಬಾಯಿಗೆ ಕಾಂಕ್ರೀಟ್ ತುಂಬಿದಿರಿ.. ನಾನು ನೀರು ಸಂಗ್ರಹಿಸುತ್ತಿದ್ದ ಹೊಲ – ಜಲಾಶಯಕ್ಕೆ ಮಣ್ಣು ತುಂಬಿದಿರಿ..
ಬೆಟ್ಟವೂ ನುಡಿಯಿತು…
ಅಂದು ನಾನು ಭೀಕರ ಗಾಳಿ ಮಳೆಗೆ ಅಲುಗಾಡದೆ ಗಟ್ಟಿ ನಿಂತಿದ್ದೆ… ಆದರೆ ನೀವು ನನ್ನ ಕಾಲು ತುಂಡರಿಸಿದಿರಿ… ನನಗೆ ಕಾಲು ಗಟ್ಟಿ ಊರಲಾಗದೆ, ಭೂಕುಸಿದು ಬೀಳುತ್ತಿದ್ದೇನೆ…
ಈಗ ಮಳೆ ಕೇಳುತ್ತಿದೆ…
ನೀವು ಮಣ್ಣು ತುಂಬಿದ ನದಿ..ತೋಡುಗಳನ್ನು ನನಗೆ ತೆರೆದು ಬಿಡುತ್ತೀರಾ..? ನಾನು ನನ್ನ ಪಾಡಿಗೆ ಹೋಗುವೆ…
ಹೊಳೆ ಕೇಳುತ್ತಿದೆ…..
ನೀವು ನನ್ನಿಂದ ಆಕ್ರಮಿಸಿದ ದಡವನ್ನು ವಾಪಸ್ಸು ಕೊಡುವಿರಾ..? ನಾನು ನನ್ನ ಪಾಡಿಗೆ ಹೋಗುವೆ…
ಭೂಮಿ ಕೇಳುತ್ತಿದೆ…
ನಾನು ನೀರು ಸಂಗ್ರಹಿಸುತ್ತಿದ್ದ ಹೊಲ,ಜಲಾಶಯ ವಾಪಸ್ಸು ಕೊಡುವಿರಾ ? ಅಲ್ಲೇ ಹಾಯಾಗಿರುವೆ..
ಬೆಟ್ಟವೂ ಕೇಳುತ್ತಿದೆ…
ಇನ್ನಾದರೂ ನನ್ನ ಕಾಲು ಕಡಿಯುವುದನ್ನು ನಿಲ್ಲಿಸುವಿರಾ..? ನಾನು ಒಂಟಿ ಕಾಲಲ್ಲಾದರೂ ಗಟ್ಟಿ ಕಾಲೂರಲು ಪ್ರಯತ್ನಿಸುವೆ…
ನೆನಪಿರಲಿ….
ನಾವು ಮನುಷ್ಯರು ಪ್ರಕೃತಿಯ ಕಾವಲುಗಾರರು ಮಾತ್ರ… ಒಡೆಯರಲ್ಲ..!
ಮರೆತರೆ…
ಪ್ರಕೃತಿಯೇ … ಅದು ತಾನು ಏನೆಂಬುದನ್ನು ನಮಗೆ ಕಲಿಸಿ ಕೊಡುತ್ತದೆ…
ಈ ಮಳೆಗಾಲ ಅದಕ್ಕೊಂದು ಉದಾಹರಣೆ ಮಾತ್ರ
(ಸಂಗ್ರಹಾನುವಾದ…ಕೆ.ಪಿ.ನಾಭ ಐ ಎಲ್ )
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…