ಮಂಗಳೂರು: ಮಹಾರಾಷ್ಟ್ರದ ಪಾಲಘರದಲ್ಲಿ ‘ಶ್ರೀ ಪಂಚ ದಶನಾಮ ಜುನಾ ಆಖಾಡಾ’ದ ಸಂತ ಕಲ್ಪವೃಕ್ಷಗಿರಿ ಮಹಾರಾಜ ಹಾಗೂ ಸುಶೀಲಗಿರಿ ಮಹಾರಾಜ ಹಾಗೂ ಅವರ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿದ್ದೂ ಅಲ್ಲದೆ ಪೊಲೀಸರ ಎದುರೇ ತೀವ್ರವಾಗಿ ಥಳಿಸಿ ಸಂತರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ಖಂಡನೀಯವಾಗಿದ್ದು ತಕ್ಷಣವೇ ಪೊಲೀಸರ ಸಹಿತ ಅಪರಾಧಿಗಳ ಮೇಲೆ ಸೂಕ್ತ ಕ್ರಮಕ್ಕೆ ಹಿಂದೂ ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ ಒತ್ತಾಯಿಸಿದ್ದಾರೆ.
ಹಲ್ಲೆಯ ವಿಡಿಯೋ ಬಹಿರಂಗಗೊಂಡಿದ್ದು ಅದರಲ್ಲಿ ಒಂದು ವಿಡಿಯೋದಲ್ಲಿ ಪೊಲೀಸರೇ ಆ ವೃದ್ಧ ಸಂತರನ್ನು ಹಿಂಸಾತ್ಮಕ ಸಮೂಹದವರಿಗೆ ಒಪ್ಪಿಸುತ್ತಿರುವ ಹಾಗೂ ಪೊಲೀಸರ ಎದುರೇ ಅವರ ಬರ್ಬರವಾಗಿ ಹತ್ಯೆಯಾಗುತ್ತಿರುವ ಭಯಾನಕ ಸತ್ಯವು ಬಹಿರಂಗವಾಗಿದೆ. ಈ ಹಿಂದೆಯೂ ಮಹಾರಾಷ್ಟ್ರದ ಠಾಣೆ ಎಂಬಲ್ಲಿ ಪೊಲೀಸರು ಓರ್ವ ಹಿಂದುತ್ವವಾದಿಯನ್ನು ಆತನ ಮನೆಯಿಂದ ಕರೆದೊಯ್ದು ಮಂತ್ರಿಯ ಬಂಗಲೆಯಲ್ಲಿ ಅಮಾನುಷವಾಗಿ ಥಳಿಸಿದ ಬಗ್ಗೆ ಬಹಿರಂಗವಾಗಿತ್ತು. ಇದೀಗ ಮತ್ತೊಂದು ಘಟನೆ ನಡೆದಿದೆ. ಈ ಘಟನೆಯು ಸಂತರ ಭೂಮಿ ಎಂದೇ ಹೇಳಲಾಗುವ ಮಹಾರಾಷ್ಟ್ರಕ್ಕೆ ಕಪ್ಪುಚುಕ್ಕೆಯಾಗಿದೆ. ಪದೇ ಪದೇ ಹಿಂದೂಗಳನ್ನು ಗುರಿಯಾಗಿಸುವ ಹಿಂಸಾತ್ಮಕ ಘಟನೆಯನ್ನು ತಡೆಗಟ್ಟಲು ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಿದೆ. ಪಾಲಘರ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆಯನ್ನು ಮಾಡಿ ಆರೋಪಿಯಾಗಿರುವ ಹಿಂಸಾತ್ಮಕ ಸಮೂಹ ಸಹಿತ ಸಂಬಂಧಪಟ್ಟ ಪೊಲೀಸರ ಮೇಲೆಯೂ ಅಪರಾಧವನ್ನು ದಾಖಲಿಸಬೇಕು, ಅದೇರೀತಿ ದೋಷಿ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಬೇಕು, ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
2025-26ನೇ ಸಾಲಿನ ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ರೈತರ…
ಯಾದಗಿರಿ ಜಿಲ್ಲೆಯ, ನಾರಾಯಣಪುರ ಅಣೆಕಟ್ಟೆ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ಮಳೆಯಿಂದಾಗಿ ಮತ್ತು ಆಲಮಟ್ಟಿ…
ಮಹಾತ್ಮ ಗಾಂಧೀಜಿ ಅವರು ಹೇಳಿದಂತೆ ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ…
ದೇಶದ ಆರ್ಥಿಕ ಪ್ರಗತಿಯಲ್ಲಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯ ಎಂಎಸ್ಎಂಇ…
ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ಮುಂಗಾರು ದುರ್ಬಲಗೊಳ್ಳುವ ಲಕ್ಷಣಗಳಿವೆ. ಇದರಿಂದ ಜುಲೈ ತಿಂಗಳ…
ಮುಂದಿನ 24 ಗಂಟೆಗಳಲ್ಲಿ ದೆಹಲಿಯನ್ನು ಮುಂಗಾರು ಆವರಿಸುವ ಸಾಧ್ಯತೆಯಿದೆ. ಎರಡು ದಿನಗಳ ಹಿಂದೆ…