ಮಾಡಾವು 110 ಕೆ.ವಿ ವಿದ್ಯುತ್ ಸ್ಟೇಷನ್ ಕಾಮಗಾರಿ ಪೂರ್ಣ | ಸಬ್ ಸ್ಟೇಶನ್ ಚಾಲನೆಗಷ್ಟೇ ಬಾಕಿ | ವಿದ್ಯುತ್ ಬಳಕೆದಾರರ ಕ್ರಿಯಾ ಸಮಿತಿ ಸಂತಸ

March 21, 2020
8:16 PM

ಬೆಳ್ಳಾರೆ: ಸುಳ್ಯ,ಕಡಬ ಮತ್ತು ಭಾಗಶ: ಪುತ್ತೂರು ತಾಲೂಕುಗಳ ವಿದ್ಯುತ್ ಸರಬರಾಜು ಸಮಸ್ಯೆಗೆ ಏಕೈಕ ಪರಿಹಾರವಾದ ಮಾಡಾವು 110 ಕೆ.ವಿ. ವಿದ್ಯುತ್  ಸ್ಟೇಷನ್ ನ ಕಾಮಗಾರಿಗಳು   ಅಂತಿಮವಾಗಿದೆ. ಲೈನ್ ಎಳೆಯುವ ಕಾರ್ಯಗಳು ಶನಿವಾರ ಸಂಜೆ ಪೂರ್ತಿಯಾಗಿದ್ದು ವಿದ್ಯುತ್ ವಿತರಣಾ ವ್ಯವಸ್ಥೆಯಷ್ಟೇ ಬಾಕಿ ಉಳಿದಿದೆ. ವಿತರಣಾ ವ್ಯವಸ್ಥೆಯ ಕಾಮಗಾರಿ ಕೂಡಾ ಆರಂಭವಾಗಿದೆ. ಕೆಲವೇ ದಿನದಲ್ಲಿ ವಿದ್ಯುತ್ ವಿತರಣೆಗೆ ಸಿದ್ದವಾಗಲಿದೆ.  ಈ ಮೂಲಕ 14 ವರ್ಷದ ಯೋಜನೆಯೊಂದು ಪೂರ್ತಿಯಾದಂತಾಗಿದೆ.

Advertisement
Advertisement

ಸುಳ್ಯ,ಕಡಬ ಮತ್ತು ಭಾಗಶ: ಪುತ್ತೂರು ತಾಲೂಕುಗಳ ವಿದ್ಯುತ್ ಸರಬರಾಜು ಸಮಸ್ಯೆಗೆ ಏಕೈಕ ಪರಿಹಾರವೆಂದು ಹೇಳಲಾದ ಪುತ್ತೂರು ತಾಲೂಕು ಮಾಡಾವಿನಲ್ಲಿ ಪ್ರಸ್ತಾವಿತ 110 ಕೆ.ವಿ. ವಿದ್ಯುತ್ ಕೇಂದ್ರ 14 ವರ್ಷದ ಹಿಂದೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕೈಗೆತ್ತಿಕೊಂಡಿದ್ದರೂ ಹತ್ತು ಹಲವು ಅನುಮತಿ ಸಿಗದೆ, ವಿವಾದಗಳು, ಕೋರ್ಟ್ ಕೇಸುಗಳು, ಇಲಾಖಾಧಿಕಾರಿಗಳ ಅಸಡ್ಡೆ , ಫಾಲೋಅಪ್ ಕೊರತೆ  ಇತ್ಯಾದಿಗಳಿಂದ
ನೆನೆಗುದಿಗೆಯಲ್ಲಿತ್ತು. ಇದೀಗ ಈ ಕಾಮಗಾರಿ ಮುಗಿದಿದೆ. ಜನತೆಗೆ ವಿದ್ಯುತ್ ವಿಚಾರದಲ್ಲಿ ಕೊಂಚ ನೆಮ್ಮದಿ ಸಿಗಲಿದೆ.

Advertisement

ಅನೇಕ  ವರ್ಷಗಳಾದರೂ ವಿದ್ಯುತ್ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ  ಹಾಗೂ ಯಾವೊಬ್ಬ ನಾಯಕರೂ ಈ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಹಾಗೂ ವರ್ಷದಿಂದ ವರ್ಷಕ್ಕೆ  ವಿದ್ಯುತ್ ಪರಿಸ್ಥಿತಿ ಹದಗೆಡುತ್ತಿರುವುದು , ಕೃಷಿಕರ ಸಂಕಷ್ಟ ಗಮನಿಸಿ ವಿದ್ಯುತ್ ಬಳಕೆದಾರರು ಕ್ರಿಯಾ ಸಮಿತಿ ಫಾಲೋಅಪ್ ಗೆ ಇಳಿದರು. ಬಳಿಕ ಅರಣ್ಯ ಇಲಾಖೆ ಇತ್ಯಾದಿ ಅನುಮತಿ ದೊರಕಿಸಿಕೊಟ್ಟುದಲ್ಲದೆ ಲೈನ್ ವಿಚಾರವಾಗಿ ಆರ್ಯಾಪು, ಕೆಯ್ಯೂರು, ಕುಂಜೂರು ಪಂಜ  ಹಲವು ಸ್ಥಳಗಳಲ್ಲಿ ಇದ್ದ ತಕರಾರು ವಿವಾದಗಳನ್ನು ಸಮಿತಿ ಮಾತುಕತೆಯಿಂದ ಪರಿಹರಿಸಿ ಹಾಲಿ ಸ್ಟೇಷನ್ ಕಾಮಗಾರಿ ಸಂಪೂರ್ಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನೆಟ್ಲಮುಡ್ನೂರುನಿಂದ ಮಾಡಾವಿಗೆ 110 ಲೈನ್ ಕಾಮಗಾರಿ ಕೂಡಾ ಈಗ ಸಂಪೂರ್ಣವಾಗಿರುತ್ತದೆ. ಇನ್ನೀಗ ನಿರಾಕ್ಷೇಪಣಾ ಪತ್ರ ದೊರಕಿದ ಕೂಡಲೇ ವಿದ್ಯುತ್ ಹಾಯಿಸಲ್ಪಡುತ್ತದೆ.

ವಿತರಣ ವ್ಯವಸ್ಥೆಯ ಕಾಮಗಾರಿಗಳು ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪೆನಿ ನಿಯಮಿತ ಇಲಾಖೆಗೆ ಸಂಬಂಧ ಪಟ್ಟದ್ದಾಗಿದ್ದು ಆ ಕುರಿತು ಟೆಂಡರುಗಳ ಮೇಲೆ ಟೆಂಡರುಗಳು ಆಗುತ್ತಾ ನೆನೆಗುದಿಗೆಯಲ್ಲಿರುವುದನ್ನು ಕಂಡ ಸಮಿತಿ ಮೆಸ್ಕಾಂ ಜೊತೆ ಹಕ್ಕೊತ್ತಾಯ ನಡೆಸಿದಂತೆ ವಿಶೇಷವಾದ ನೇರ ಆದೇಶದ ಮೇರೆಗೆ ಈಗ ಕಾಮಗಾರಿ ಆರಂಭವಾಗಿ ಸಾಮಾಗ್ರಿಗಳು ಸ್ಥಳಕ್ಕೆ ತಲುಪಿದ್ದು ಇನ್ನುವಾರದೊಳಗೆ ಪೂರ್ಣವಾಗಲಿದೆ.

Advertisement

ವಿದ್ಯುತ್ ಬಳಕೆದಾರರು ಕ್ರಿಯಾ ಸಮಿತಿ ವತಿಯಿಂದ ಅಭಿನಂದನೆ :

ವಿದ್ಯುತ್ ಬಳಕೆದಾರರು ಕ್ರಿಯಾ ಸಮಿತಿ ಆಗ್ರಹಿಸಿದಂತೆ  ಮಾಡಾವಿನಲ್ಲಿ ಪ್ರಥಮವಾಗಿ ವಿಶೇಷ ತರಹದ ಇವಾಕ್ಯುವೇಶನ್ ಭೂಗತ ಲೈನ್ ಮೂಲಕ ಬೆಳ್ಳಾರೆ ಮತ್ತು ಕುಂಬ್ರ ಬದಿಗೆ ಪ್ರತ್ಯೇಕ ಪ್ರತ್ಯೇಕ ಸಂಪರ್ಕವೇರ್ಪಡಲಿದ್ದು ಇದರಿಂದ ಲೈನ್ ಭಾಧಿತವಾಗುವುದು ಅತ್ಯಂತ ಕಡಿಮೆಯಾಗುತ್ತದೆ. ಸಮಿತಿಯ ಕೋರಿಕೆಯಂತೆ ತುರ್ತು ಕ್ರಮ ಕೈಗೊಂಡು ನೇರ ಆದೇಶ ನೀಡಿದ ಮೆಸ್ಕಾಂ ಕಾರ್ಯನಿರ್ವಾಹಕ ನಿರ್ದೇಶಕಿ  ಸ್ನೇಹಲ್ ರಾಯಮನೆ, ಅಧೀಕ್ಷಕ ಅಭಿಯಂತರ ಮಂಜಪ್ಪ ಮತ್ತು  ಕಾರ್ಯನಿರ್ವಾಹಕ ಅಭಿಯಂತರ ನರಸಿಂಹ ಇವರಿಗೆ ಸಮಿತಿ ಪರವಾಗಿ ಸಂಚಾಲಕ ಜಯಪ್ರಸಾದ್ ಜೋಶಿ ಬೆಳ್ಳಾರೆ ಇವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Advertisement

 

 

Advertisement

 

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ಮುಂದಿನ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ ಸಿದ್ಧರಾಗಿ | ಬಿಸಿಲು ಜಾಸ್ತಿ ಎಂದು ಜಗಲಿ ಕಟ್ಟೆಯಲ್ಲಿ ಕುಳಿತು ಮಾತನಾಡಿದರೆ ಪ್ರಯೋಜನವಿಲ್ಲ…! |
May 1, 2024
5:22 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror